ಭಾರತ ಸಿನಿಮಾ ರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಸ್ಯಾಂಡಲ್‌ವುಡ್‌ ಕೆಜಿಎಫ್ ಸಿನಿಮಾದಲ್ಲಿ ಸಂಜಯ್ ದತ್ ಅಭಿನಯಿಸುವುದು ಎಲ್ಲರಿಗೂ ಗೊತ್ತು. ಇದೀಗ ಸಿನಿಮಾದಲ್ಲಿ ಸಂಜು ರಗಡ್ ಲುಕ್ ರಿಲೀಸ್ ಆಗಿದೆ. ಲುಕ್ ನೋಡಿಯೇ ಸಿನಿಮಾ ಬಗ್ಗೆ ಕುತೂಹಲ ಮೂಡಿಸೋ ಸಂಜು ಪೋಸ್ ವೈರಲ್ ಆಗಿದೆ.

ಕೆಜಿಎಫ್ ಚಾಪ್ಟರ್ 2 ಸಂಜಯ್ ದತ್ ಲುಕ್ ರಿಲೀಸ್ ಆಗಿದ್ದು, ಸಂಜಯ್ ದತ್‌ ಅಧೀರ ಪಾತ್ರದಲ್ಲಿ ಮಿಂಚಲಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರೋ ಅಧೀರ ಪಾತ್ರದ ಲುಕ್ ರಿವೀಲ್ ಆಗಿದ್ದು, ಸಿನಮಾ ಕುರಿತ ಕುತೂಹಲ ಇನ್ನಷ್ಟು ಹೆಚ್ಚಿಸಿದೆ.

ಕೈಕಾಲ ಸತ್ಯನಾರಾಯಣ್‌ಗೆ ಶುಭಾ ಕೋರಿದ ಪ್ರಶಾಂತ್ ನೀಲ್; ಟ್ಟಿಟ್ಟರ್‌ನಲ್ಲಿ ಮತ್ತೆ ಟ್ರೆಂಡ್‌!

ಕೆಜಿಎಫ್ ಚಾಪ್ಟರ್ 1 ರಿಂದಲೇ ಹೆಚ್ಚು ಕ್ಯೂರಿಯಾಸಿಟಿ ಬಿಲ್ಡ್ ಮಾಡಿರೋ ಕ್ಯಾರೆಕ್ಟರ್ ಅಧೀರ. ಕೆಜಿಎಫ್ ನ್ಯಾಷನಲ್ ಸ್ಟಾರ್ ಯಶ್ ಅಭಿನಯದ ಸಿನಿಮಾದಲ್ಲಿ ಬಾಲಿವುಡ್‌ನ ಟಾಪ್‌ ಸ್ಟಾರ್‌ನನ್ನು ನೋಡಲು ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.

ಸಂಜಯ್ ದತ್ ಹುಟ್ಟು ಹಬ್ಬದ ವಿಶೇಷವಾಗಿ ಪೋಸ್ಟರ್ ರಿಲೀಸ್ ಆಗಿದ್ದು,  'ಅಗ್ನಿಪತ್' ನಂತರ ಇದೀಗ ಸಂಜಯ್ ವಿಭಿನ್ನವಾಗಿ ಭಾರೀ ಗ್ರ್ಯಾಂಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಖಳನಾಯಕನ ಪಾತ್ರದಲ್ಲಿ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ತಿರೋ ಸಂಜಯ್ ದತ್ ಅದೀರನಾಗಿ ತೆರೆಯ ಮೇಲೆ ಅಬ್ಬರಿಸಲಿದ್ದಾರೆ.

KGF 2 ಸಂಜಯ್ ದತ್ ಅಧೀರ ಲುಕ್ ರಿವೀಲ್..!

ಐದು ಭಾಷೆಯಲ್ಲಿ ತೆರೆಗೆ ಬರ್ತಿರೋ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಸಿನಿಮಾ ಚಿತ್ರೀಕರಣ ತೊಡಕಾಗಿದ್ದು, ಸಿನಿ ಪ್ರಿಯರು ಚಾಪ್ಟರ್ 2 ನಿರೀಕ್ಷೆಯಲ್ಲಿದ್ದಾರೆ.