* ಹೊಸಬರ ಜೊತೆ ಮತ್ತೆ ಕೈ ಜೋಡಿಸಿದ ಚಿನ್ನಾರಿ ಮುತ್ತ..ವಿಜಯ್ ರಾಘವೇಂದ್ರ * ಈಗ ‘ರಾಘು’…ಥ್ರಿಲ್ಲರ್ ಎಕ್ಸ್ ಪೆರಿಮೆಂಟಲ್ * ‘ರಾಘು’ ಫಸ್ಟ್ ಲುಕ್ ರಿಲೀಸ್* ಖಡಕ್ ಆಗಿದೆ ವಿಜಯ್ ರಾಘವೇಂದ್ರ ಲುಕ್

ಬೆಂಗಳೂರು( ಏ. 01) ಹೊಸಬಗೆಯ, ಹೊಸತನ ಸಿನಿಮಾಗಳನ್ನು (Sandalwood) ಮಾಡುವುದರಲ್ಲಿ ಹೊಸಬರಿಗೆ ಅವಕಾಶ ಕೊಡುವುದರಲ್ಲಿ ಪ್ರತಿಭಾನ್ವಿತ ನಟ ವಿಜಯ್ ರಾಘವೇಂದ್ರ (Vijay Raghavendra) ಸದಾ ಮುಂದು.. ಸೀತಾರಾಮ್ ಬಿನೋಯ್ ಕೇಸ್ ನಂಬರ್ 18 ಸಿನಿಮಾ ಬಳಿಕ ಈಗ ವಿಜಯ್ ರಾಘವೇಂದ್ರ ಮತ್ತೊಮ್ಮೆ ಹೊಸಬರ ಜೊತೆ ಕೈ ಜೋಡಿಸಿದ್ದಾರೆ. ರಾಘು ಆಗಿ ಮಿಂಚಲಿದ್ದಾರೆ. 

ಟೈಟಲ್ ಫಸ್ಟ್ ಲುಕ್ ರಿಲೀಸ್: ಆನ, ಬ್ಯಾಂಗ್ ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಆನಂದ್ ರಾಜ್ ರಾಘು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಈ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುವಂತಿದೆ.

ರಾಘು ಥ್ರಿಲ್ಲರ್ ಎಕ್ಸ್ ಪಿರಿಮೆಂಟಲ್ ಸಿನಿಮಾವಾಗಿದ್ದು, ಕನ್ನಡದಲ್ಲಿ ಇದೊಂದು ಹೊಸತನದ ಸಿನಿಮಾವಾಗಿದ್ದು, ವಿಜಯ್ ರಾಘವೇಂದ್ರ ಹಿಂದೆಂದೂ ಮಾಡದ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ. ಡಿಕೆಎಸ್ ಸ್ಟುಡಿಯೋಸ್ ಮತ್ತು ಕೋಟ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ರಣ್ವೀತ್‌ ಶಿವಕುಮಾರ್‌, ಅಭಿಷೇಕ್‌ ಕೋಟ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಬ್ಯಾಂಗ್', 'ಫ್ಯಾಮಿಲಿ ಪ್ಯಾಕ್' ಖ್ಯಾತಿಯ ಉದಯ್‌ ಲೀಲಾ ಕ್ಯಾಮೆರಾ ವರ್ಕ್, ಸೂರಜ್‌ ಜೋಯಿಸ್‌ ಸಂಗೀತ ಸಂಯೋಜನೆ, ಅಥರ್ವ್ ಆರ್ಯ ಸಂಭಾಷಣೆ ಬರೆಯುತ್ತಿದ್ದಾರೆ. ಮೇ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯ ಟೈಟಲ್ ಹಾಗೂ ಫಸ್ಟ್ ಲುಕ್ ಬಿಟ್ಟು ಚಿತ್ರರಸಿಕರ ಕ್ಯೂರಿಯಾಸಿಟಿಯನ್ನು ರಾಘು ಚಿತ್ರತಂಡ ದುಪ್ಪಟ್ಟು ಮಾಡಿದೆ.

Vijay Raghavendra New Movie: ಚಿನ್ನಾರಿ ಮುತ್ತನ ಹೊಸ ಚಿತ್ರ 'ಜೋಗ್ 101'

ಸಾವಿತ್ರಿ ಆಡಿಯೋ:  ಸ್ಯಾಂಡಲ್​ವುಡ್​ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ನಟನೆಯ 51ನೇ ಚಿತ್ರ ‘ಸಾವಿತ್ರಿ’ (Savitri) ಆಡಿಯೋ ಬಿಡುಗಡೆ ಆಗಿತ್ತು. ಎಸ್‌ ದಿನೇಶ್‌ (S Dinesh) ನಿರ್ದೇಶನದ, ಪ್ರಶಾಂತ್‌ ಕುಮಾರ್‌ ಹೀಲಲಿಗೆ ನಿರ್ಮಿಸಿರುವ ಸಿನಿಮಾ ಇದು. 

ಸಾವಿತ್ರಿ' ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇದು ವಿಜಯ ರಾಘವೇಂದ್ರ ಅವರ ಐವತ್ತೊಂದನೇ ಚಿತ್ರ. ಆದರೆ ಕೆಲಸದಲ್ಲಿ ಅವರಿಗಿರುವ ಶ್ರದ್ಧೆ ಈಗಲೂ ಹೊಸತು. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ ರಾಘವೇಂದ್ರ ಹಾಗೂ ತಾರಾ ಅವರು ನಮ್ಮ ಚಿತ್ರದಲ್ಲಿ ಅಭಿನಯಿಸಿರುವುದು ನಮ್ಮ ಹೆಮ್ಮೆ. ಪ್ರಕಾಶ್ ಬೆಳವಾಡಿ, ಊರ್ವಶಿ ರಾಯ್, ಮಿಮಿಕ್ರಿ ಗೋಪಿ, ನೈಲಾ ಪ್ರಮೋದ್, ಸಂಜು ಬಸಯ್ಯ, ಸ್ವಾತಿ ಮುಂತಾದವರ ತಾರಾಬಳಗ ನಮ್ಮ ಚಿತ್ರದಲ್ಲಿದೆ. ಹೃದಯ ಶಿವ ಬರೆದು, ಮೊದಲ ಬಾರಿಗೆ ಸಂಗೀತ ನೀಡಿರುವ ಹಾಡುಗಳು ಸುಮಧುರವಾಗಿದೆ ಎಂದು ನಿರ್ದೇಶಕರು ತಿಳಿಸಿದ್ದರು.

ವಿಜಯ್ ರಾಘವೇಂದ್ರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, 'ಓ ಮನಸ್ಸೆ' (O Manasse) ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ಫ್ರೆಂಡ್ಸ್ ಮೂವಿ ಮೇಕರ್ಸ್ ಬ್ಯಾನರ್​ ಅಡಿ ಬೈರೇಗೌಡ, ಧನಂಜಯ್, ವೆಂಕಟೇಶ್, ಯುವರಾಜ್, ರಾಮಚಂದ್ರು ಅವರು ಸಿನಿಮಾ ನಿರ್ಮಿಸುತ್ತಿದ್ದಾರೆ. ರಮೇಶ್​ ಹಂಡ್ರಂಗಿ ಅವರು ಕಥೆ ಬರೆದಿದ್ದು, ಡಿಜಿ. ಉಮೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಓ ಮನಸ್ಸೆ' ಚಿತ್ರದಲ್ಲಿ ವಿಜಯ್​ ರಾಘವೇಂದ್ರ ಅವರಿಗೆ ಸಂಚಿತಾ ಪಡುಕೋಣೆ (Sanchita Padukone) ನಾಯಕಿಯಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ಧರ್ಮ ಕೀರ್ತಿರಾಜ್ (Dharma Keerthiraj) ನಟಿಸುತ್ತಿದ್ದು, ಜೊತೆಗೆ ಸಾಧುಕೋಕಿಲ, ಶೋಭರಾಜ್, ಕಾಮಿಡಿ ಕಿಲಾಡಿ ಗೋವಿಂದೇ ಗೌಡ ಚಿತ್ರದ ಭೂಮಿಕೆಯಲ್ಲಿದ್ದಾರೆ.