8ರಿಂದ 45ರ ವಯೋಮಿತಿಯವರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಸ್ಯಾಂಡಲ್‌ವುಡ್ ತಾರೆಯರಾದ ಶ್ರೀಮುರಳಿ, ಆಶಿಕಾ ರಂಗನಾಥ್ ವ್ಯಾಕ್ಸಿನ್ ಪಡೆದಿದ್ದಾರೆ.

ಶ್ರೀಮುರಳಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋ ಪೋಸ್ಟ್ ಮಾಡಿ, ‘ಮೊದಲ ಹಂತದ ಲಸಿಕೆ ಪಡೆದಿದ್ದೇನೆ. ನಿಮ್ಮ ವ್ಯಾಕ್ಸಿನೇಶನ್ ಇನ್ನೂ ಆಗಿಲ್ಲದಿದ್ದರೆ ತಡ ಮಾಡಬೇಡಿ.ಲಸಿಕೆ ಹಾಕಿಸಿಕೊಳ್ಳಿ. ಈ ಸಂದರ್ಭ ನಮ್ಮ ಫ್ರಂಟ್ ಲೈನ್ ಕೊರೋನಾ ವಾರಿಯರ್ಸ್‌ಅನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಆಶಿಕಾ ಫಸ್‌ಟ್ ಡೋಸ್ ಲಸಿಕೆ ಪಡೆದದ್ದನ್ನು ವೀಡಿಯೋ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಪೋಸ್‌ಟ್ ಮಾಡಿದ್ದಾರೆ. ‘ಎಲ್ಲರೂ ಲಸಿಕೆ ಹಾಕಿಸಿಕೊಳ್ಳೋಣ’ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by SriiMurali (@sriimurali)