ಬೆಂಗಳೂರಿನಲ್ಲಿರುವ ಬಿಗ್‌ಬಾಸ್ ಮನೆ ಹಾಗೂ ಕಂಠೀರವ ಸ್ಟುಡಿಯೋವನ್ನು ಕೋವಿಡ್ ಕೇರ್ ಸೆಂಟರ್ ಆಗಿ ರೂಪಿಸಬೇಕು ಎಂದು ನಿರ್ಮಾಪಕ ಭಾಮ ಹರೀಶ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ಕಲಾವಿದರ ಸಂಘ, ಬಿಗ್ ಬಾಸ್ ಮನೆ ಮತ್ತು ಕಂಠೀರವ ಸ್ಟುಡಿಯೋದಲ್ಲಿ ಕೋವಿಡ್ ಕೇಂದ್ರ ತೆರೆಯಬೇಕು. ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರಿಗೆ ಹಾಗೂ ಅವರ ಕುಟುಂಬದವರಿಗೆ ಈ ಮೂಲಕ ಸೂಕ್ತ ಚಿಕಿತ್ಸೆಯ ನೆರವನ್ನು ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಸಿನಿ ತಂತ್ರಜ್ಞರಿಗೆ ಹಿರಿಯ ನಟಿ ಬಿ ಸರೋಜದೇವಿ ನೆರವು

ಈಗಾಗಲೇ ಹಿರಿಯ ನಟಿ ಬಿ. ಸರೋಜದೇವಿ, ನಟ ಸಾಧುಕೋಕಿಲ, ನಟ ಉಪೇಂದ್ರ ಸೇರು ಸ್ಯಾಂಡಲ್‌ವುಡ್ ತಾರೆಯರು ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದ್ದಾರೆ.