ಈಗಾಗಲೇ ಮೂರು ಮದುವೆಯಾಗಿರುವ ನಟನೊಂದಿಗೆ ಪವಿತ್ರಾ ಲೋಕೇಶ್ ಮ್ಯಾರೇಜ್?

ಹಿರಿಯ ನಟಿ ವಿಜಯ ನಿರ್ಮಲಾ ಅವರ ಪುತ್ರ ಹಾಗೂ ಟಾಲಿವುಡ್‌ನ ಹಿರಿಯ ನಟ ನರೇಶ್ ಬಾಬು ಹಾಗೂ ಕರ್ನಾಟಕದ ಖ್ಯಾತ ನಟಿ, ಪೋಷಕ ಪಾತ್ರಗಳಿಂದ ಗಮನಸೆಳೆದ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರೆಂಬ ಗುಸುಗುಸು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಟಾಲಿವುಡ್‌ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅಣ್ಣನಾಗಿರುವ ನರೇಶ್ ಬಾಬು ಈಗಾಗಲೇ ಮೂರು ಮದುವೆಯಾಗಿದ್ದು, ಎಲ್ಲದರಿಂದಲೂ ವಿಚ್ಛೇದನ ಪಡೆದುಕೊಂಡಿದ್ದಾರೆ.
 

sandalwood News Senior Naresh babu ready for fourth marriage with actress pavitra lokesh san

ಬೆಂಗಳೂರು (ಜೂನ್ 20): ಇತ್ತೀಚೆಗೆ ಮಹಾಬಲೇಶ್ವರ ದೇವಸ್ಥಾನಕ್ಕೆ ಜೊತೆಯಾಗಿ ಭೇಟಿ ನೀಡಿದ್ದ ಟಾಲಿವುಡ್ ನ ಹಿರಿಯ ನಟ 62 ವರ್ಷದ ವಿಕೆ  ನರೇಶ್ ಬಾಬು (VK Naresh Babu) ಹಾಗೂ ಕನ್ನಡದ ನಟಿ, ತೆಲುಗು ಚಿತ್ರರಂಗದಲ್ಲೂ ಅಪಾರವಾಗಿ ಮಿಂಚಿರುವ 43 ವರ್ಷದ ಪವಿತ್ರಾ ಲೋಕೇಶ್ (pavitra lokesh) ಮದುವೆಯಾಗಿದ್ದಾರೆ ಎನ್ನುವ ಗಾಸಿಪ್ ದಕ್ಷಿಣ ಭಾರತ ಚಿತ್ರರಂಗದಲ್ಲಿ (South India Film) ವ್ಯಾಪಕವಾಗ ಹರಿದಾಡುತ್ತಿದೆ. ತಮ್ಮ ಅಭಿಯನದ ಮೂಲಕವೇ ಇಬ್ಬರೂ ಕಲಾವಿದರು ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.


ತೆಲುಗು ಭಾಷೆಯಲ್ಲಿ ನರೇಶ್ ಬಾಬು ಹಾಗೂ ಪವಿತ್ರಾ ಲೋಕೇಶ್ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಬಾಂಧವ್ಯವೇ ಮದುವೆಯವರೆಗೆ ಮುಂದುವರಿದೆ ಎಂದು ಹೇಳಲಾಗಿದೆ. ನರೇಶ್ ಬಾಬು ಟಾಲಿವುಡ್ ನ (Tollywood)ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಅಣ್ಣ. ನರೇಶ್ ಬಾಬು ಅವರಿಗೆ ಇದು ನಾಲ್ಕನೇ ಮದುವೆ ಎನಿಸಿಕೊಳ್ಳಲಿದೆ. ಈಗಾಗಲೇ ಆಗಿರುವ ಮೂರೂ ಮದುವೆಯಿಂದ ವಿಚ್ಛೇದನ ಪಡೆದುಕೊಂಡಿರುವ ನರೇಶ್ ಬಾಬು ಪವಿತ್ರಾ ಲೋಕೇಶ್ ಅವರ ವಿಚ್ಛೇದನಕ್ಕೆ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ.

2007ರಲ್ಲಿ ನಟ ಸುಚೇಂದ್ರ ಪ್ರಸಾದ್ (Suchendra Prasad) ಅವರನ್ನು ಪವಿತ್ರಾ ಲೋಕೇಶ್ ವಿವಾಹವಾಗಿದ್ದರು. ಮದುವೆಯಾದ ನಂತರ ಮಾನಸಿಕ ಘರ್ಷಣೆಯಿಂದ ಅವರಿಂದ ಬೇರ್ಪಟ್ಟು ಈಗ ಒಂಟಿ ಜೀವನ ನಡೆಸುತ್ತಿದ್ದಾರೆ. ಈ ಮದುವೆಯಿಂದ ಇಬ್ಬರೂ ಮಕ್ಕಳನ್ನು ಹೊಂದಿದ್ದಾರೆ. ಈ ಮದುವೆಯಿಂದ ಅವರಿನ್ನೂ ವಿಚ್ಛೇದನ ಪಡೆದಿಲ್ಲ. ಇದರ ವಿಚ್ಛೇದನ ಪಡೆದ ಬೆನ್ನಲ್ಲೇ ನರೇಶ್ ಹಾಗೂ ಪವಿತ್ರಾ ಲೋಕೇಶ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.

ಕಿರುತೆರೆ, ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಪವಿತ್ರಾ ಲೋಕೇಶ್, ಹಿರಿಯ ನಟ ಮೈಸೂರು ಲೋಕೇಶ್ ಅವರ ಪುತ್ರಿ. 16ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ಇವರು ಈವರೆಗೂ 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಅಭಿನಯಿಸಿದ್ದು, ಕನ್ನಡದ ನಾಯಿ ನೆರಳು ಚಿತ್ರಕ್ಕಾಗಿ  ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

ಗಂಡನ ಮನೆಯಿಂದ ನನಗೆ ಏನೂ ಸಿಗೋಲ್ಲ, ನಿಜವಾದ ಪ್ರೀತಿಗೆ ಬೆಲೆ ಇಲ್ಲ: ನಟಿ Pavitra Lokesh

ನರೇಶ್ ಬಾಬು ಯಾರು?: ಟಾಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರ 2ನೇ ಪತ್ನಿ ವಿಜಯ ನಿರ್ಮಲಾ ಅವರ ಪುತ್ರ ನರೇಶ್. ಅವರ ಮೊದಲ ಹೆಂಡತಿ ಇಂದಿರಾ ದೇವಿ. ನಟಿಯಾಗಿದ್ದ ವಿಜಯ ನಿರ್ಮಲ, ಕೃಷ್ಣ ಅವರನ್ನು ವಿವಾಹವಾಗುವ ಮುನ್ನ ಕೆಎಸ್ ಮೂರ್ತಿ ಅವರನ್ನು ಮದುವೆಯಾಗಿದ್ದರು. ಈ ಮದುವೆಯಲ್ಲಿ ಹುಟ್ಟಿದ ಮಗ ನರೇಶ್. ಕೆಎಸ್ ಮೂರ್ತಿಯಿಂದ ವಿಚ್ಛೇದನ ಪಡೆದು ಕೃಷ್ಣ ಅವರನ್ನು ವಿಜಯ ನಿರ್ಮಲ ವಿವಾಹವಾಗಿದ್ದರು. ನರೇಶ್ ಅವರ ತಾಯಿ ಸೂಪರ್‌ ಸ್ಟಾರ್, ತಂದೆ ಕೂಡ ಸೂಪರ್ ಸ್ಟಾರ್ ಆಗಿದ್ದವರು. ಅಂದಾಜು ಇವರ ಆಸ್ತಿಯೇ 6 ಸಾವಿರ ಕೋಟಿ ಎಂದು ಹೇಳಲಾಗುತ್ತಿದೆ. ಮಹಾಬಲೇಶ್ವರ ದೇವಸ್ಥಾನಕ್ಕೆ ಪವಿತ್ರಾ ಲೋಕೇಶ್ ಹಾಗೂ ನರೇಶ್ ಬಾಬು ಜೊತೆಯಾಗಿ ಹೋಗಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೇವಸ್ಥಾನದಲ್ಲಿ ಇವರಿಬ್ಬರೂ ಸ್ವಾಮೀಜಿ ಒಬ್ಬರಿಂದ ಆಶೀರ್ವಾದವನ್ನೂ ಪಡೆದುಕೊಂಡಿದ್ದಾರೆ.

ಕುರುಕ್ಷೇತ್ರ ಸಪ್ತ ಸುಂದರಿಯರ ಸೌಂದರ್ಯ; ನೋಡೋದೇ ಚಂದ!

ಮದುವೆಯಾಗಿಲ್ಲ ಎಂದ ನರೇಶ್ ಬಾಬು ಪಿಆರ್‌ಓ: ಈ ಕುರಿತಾಗಿ ನರೇಶ್ ಬಾಬು ಅವರ ಪಿಆರ್‌ಓ ಅವರನ್ನು ಏಷ್ಯಾನೆಟ್ ನ್ಯೂಸ್ ಸಂಪರ್ಕ ಮಾಡಿದ್ದು, ಇದು ಪೂರ್ತಿ ಸುಳ್ಳು. ನರೇಶ್ ಬಾಬು ಅವರ ಮದುವೆಯಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ತೆಲುಗಿನ ಬಹುತೇಕ ಎಲ್ಲಾ ಸಿನಿಮಾ ಪತ್ರಿಕೆಗಳು ನರೇಶ್ ಬಾಬು ಹಾಗೂ ಪವಿತ್ರಾ ಲೋಕೇಶ್ ಈಗಾಗಲೇ ಮದುವೆಯಾಗಿದ್ದಾರೆ ಎಂದು ವರದಿ ಮಾಡಿವೆ.

Latest Videos
Follow Us:
Download App:
  • android
  • ios