ನವೆಂಬರ್‌ನಲ್ಲಿ ಕಲಿವೀರ ಮರು ಬಿಡುಗಡೆ ಥಿಯೇಟರ್‌ ತೆರೆದ ಬಳಿಕ ತೆರೆಗೆ ಬಂದಿದ್ದ ಮೊದಲ ಚಿತ್ರ

ಹೊಸ ನಟ ಏಕಲವ್ಯ ಅಭಿನಯದ ‘ಕಲಿವೀರ’ ಸಿನಿಮಾ ಮತ್ತೆ ನವೆಂಬರ್‌ ತಿಂಗಳಲ್ಲಿ ಮರು ಬಿಡುಗಡೆ ಆಗುತ್ತಿದೆ. ಥಿಯೇಟರ್‌ ತೆರೆದ ಬಳಿಕ ತೆರೆಗೆ ಬಂದಿದ್ದ ಮೊದಲ ಸಿನಿಮಾ ಇದು. ‘ಸಿನಿಮಾ ಚೆನ್ನಾಗಿದ್ದರೂ ನಿರೀಕ್ಷೆಯಂತೆ ಗಳಿಕೆ ಆಗಿಲ್ಲ’ ಎಂಬುದು ಚಿತ್ರತಂಡದ ಬೇಸರ. ಹಾಗಾಗಿ ಶೇ.100ರಷ್ಟುಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರ ನವೆಂಬರ್‌ ತಿಂಗಳಲ್ಲಿ ‘ಕಲಿವೀರ’ ಚಿತ್ರವನ್ನು ಮರು ಬಿಡುಗಡೆ ಮಾಡಲು ನಿರ್ಮಾಪಕ ಕೆಎಂಪಿ ಶ್ರೀನಿವಾಸ್‌ ನಿರ್ಧರಿಸಿದ್ದಾರೆ.

ಇದೇ ಬಗ್ಗೆ ಮಾತನಾಡಿದ ನಿರ್ದೇಶಕ ಅವಿ, ‘ಸಿನಿಮಾ ನೋಡಿದವರು ಚೆನ್ನಾಗಿಲ್ಲ ಎನ್ನುತ್ತಿಲ್ಲ. ಆದರೆ, ಹೆಚ್ಚು ಜನಕ್ಕೆ ಸಿನಿಮಾ ತಲುಪಿಲ್ಲ. ಸಾಲದ್ದಕ್ಕೆ ಇಡೀ ಚಿತ್ರವನ್ನು ಪೈರಸಿ ಮಾಡಿದ್ದಾರೆ. ಚಿತ್ರ ಹೆಚ್ಚಿನ ಜನಕ್ಕೆ ತಲುಪಬೇಕು, ನಿರ್ಮಾಪಕರಿಗೆ ಹಾಕಿದ ಹಣ ಬರಬೇಕು ಎನ್ನುವ ಉದ್ದೇಶದಿಂದ ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ’ ಎಂದರು.

ಮತ್ತೆ ಬರ್ತಿದೆ 'ಪುನರ್ ವಿವಾಹ' ಧಾರಾವಾಹಿ!

ಚಿತ್ರದ ನಾಯಕ ನಟ ಏಕಲವ್ಯ ಮಾಧ್ಯಮಗಳು ಹಾಗೂ ಚಿತ್ರರಂಗದವರು, ಗೆಳೆಯರು ತೋರಿದ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು. ಛಾಯಾಗ್ರಾಹಕ ಹಾಲೇಶ್‌, ನಿರ್ಮಾಪಕ ಕೆಎಂಪಿ ಶ್ರೀನಿವಾಸ್‌ ಚಿತ್ರದ ಕುರಿತು ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾ ಮಾ ಹರೀಶ್‌ ಚಿತ್ರತಂಡಕ್ಕೆ ಶುಭ ಕೋರಿದರು. ಸದ್ಯ ಸಿನಿಮಾ ಬಿಡುಗಡೆಯಾಗಿ 25 ದಿನ ಪ್ರದರ್ಶನ ಕಂಡಿದೆ.

"