Asianet Suvarna News Asianet Suvarna News

ವಿಶ್ವ ಸಿನಿಮಾದ ಮೇಲೆ ಟಾಕ್ಸಿಕ್ ಕಣ್ಣು! ಆಸ್ಕರ್​​​ನಲ್ಲಿ ಟಾಕ್ಸಿಕ್​-ಕಾಂತಾರ ರಾರಾಜಿಸೋದು ಪಕ್ಕನಾ..?

ಸ್ಯಾಂಡಲ್‌ವುಡ್‌ನಲ್ಲಿ ಒಂದು ದೊಡ್ಡ ಹೋಪ್ ಹುಟ್ಟಿಕೊಂಡಿದೆ. ಬಾಕ್ಸ್ಆಫೀಸ್ನಲ್ಲಿ ಸಿನಿಮಾ ಓಡ್ತಿವೆ. ಪ್ರಶಸ್ತಿಗಳು ಬಂದಿವೆ. ಇದನ್ನ ನೋಡಿ ಯಶ್ ಫ್ಯಾನ್ಸ್ ಮತ್ತು ರಿಷಬ್ ಶೆಟ್ಟಿ ಹಿರಿ ಹಿರಿ ಹಿಗ್ಗುತ್ತಿದ್ದಾರೆ. ಕಥೆ ಇನ್ನು ಮುಗಿದಿಲ್ಲ ಎನ್ನುತ್ತಿದ್ದಾರೆ...

Sandalwood hopes oscar award from actor rishab shetty and rocking star yash srb
Author
First Published Aug 21, 2024, 3:37 PM IST | Last Updated Aug 21, 2024, 6:17 PM IST

ರಾಷ್ಟ್ರ ಪ್ರಶಸ್ತಿ ಬಂದಾಯ್ತು, ಆ ಬೆಟ್ಟದ ಹೂವು ಸಿಗೋದು ಯಾವಾಗ.?  ಯಶ್​ ರಿಷಬ್ (Rishab Shetty) ಆ ಬೆಟ್ಟದ ಹೂವು ಕಿತ್ತುಕೊಳ್ಳೋಕೆ ಗುರಿ ಇಟ್ಟಿದ್ದಾರೆ.? ಬೇಟೆ ಇನ್ನೂ ಮುಗಿದಿಲ್ಲ, ಇವರಿಬ್ಬರೂ ಮುಂದುವರೆಸ್ತಾರೆ.!  ಯಶ್- ರಿಷಬ್ ಮೇಲೆ ಸೃಷ್ಟಿಯಾಗಿದೆ ಬಿಗ್ ಹೋಪ್.! 
ಯಶ್​-ರಿಷಬ್ ಮೇಲೆ ಹುಟ್ಟಿದೆ ದೊಡ್ಡ ನಂಬಿಕೆಯ ಬೆಟ್ಟ..!

ಒಂದೇ ಗುರಿ. ಒಂದೇ ಆಸೆ, ಒಂದೇ ಕನವರಿಗೆ.. ಕನ್ನಡ ಸಿನಿ ಪ್ರೇಮಿಗಳ ಮನಸ್ಸಲ್ಲಿ ಹುಟ್ಟಿದೆ ಆ ಬೆಟ್ಟದ ಹೂವು ಕಿತ್ತುಕೊಳ್ಳು ನಿರೀಕ್ಷೆ. ಆ ನಿರೀಕ್ಷೆಯನ್ನ ಹುಟ್ಟಿಸಿರೋದು ಸ್ಯಾಂಡಲ್​ವುಡ್​​ನ ದಿಗ್ಗಜ ಸ್ಟಾರ್ಸ್​​. ರಾಷ್ಟ್ರ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿರೋ ಹೀರೋಸ್​, ರಾಕಿಂಗ್ ಸ್ಟಾರ್ ಯಶ್​ (Rocking Star Yash) ಹಾಗೂ ಡಿವೈನ್ ಸ್ಟಾರ್​​ ರಿಷಬ್.. ಹಾಗಾದ್ರೆ ಏನದು ಆ ಆಸೆ, ನಿರೀಕ್ಷೆ, ಕನವರಿಕೆ..? ಇಲ್ಲಿದೆ ನೋಡಿ ಕಿಲಾಡಿ ಜೋಡಿಯ ಗುರಿಯ ರಹಸ್ಯ..

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಶೂಟಿಂಗ್ ಸೆಟ್‌ಗೆ ರಾಕಿಂಗ್ ಸ್ಟಾರ್ ಯಶ್ ಸರ್‌ಪ್ರೈಸ್ ಭೇಟಿ..!

ರಾಷ್ಟ್ರ ಪ್ರಶಸ್ತಿ ಬಂದಾಯ್ತು, ಆ ಬೆಟ್ಟದ ಹೂವ ಸಿಗೋದು ಯಾವಾಗ.? ಯಶ್​ ರಿಷಬ್ ಆ ಬೆಟ್ಟದ ಹೂವು ಕಿತ್ತುಕೊಳ್ಳೋಕೆ ಗುರಿ ಇಟ್ಟಿದ್ದಾರಾ..?
ಯಾವುದೇ ನಿರೀಕ್ಷೆ ಇರಲಿಲ್ಲ. ಆದ್ರೂ ಯಶ್​ ಪ್ಯಾನ್​ ಇಂಡಿಯಾದಲ್ಲಿ ಸೂಪರ್​ ಸ್ಟಾರ್ ಆಗಿ ಮೆರೆದಾಡಿದ್ರು, ಕೆಜಿಎಫ್​​ಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂದುಕೊಟ್ರು. ಯಾವುದೇ ಆಸೆ ಇರಲಿಲ್ಲ, ರಿಷಬ್ ಶೆಟ್ಟಿ ಕಾಂತಾರದಿಂದ ಭಾರತ ಸಿನಿಮಾ ಜಗತ್ತಿನ ಮನಸ್ಸು ಗೆದ್ರು. ಉತ್ತುತ್ತಮ ನಟ ರಾಷ್ಟ್ರ ಪ್ರಶಸ್ತಿಯ ಕಿರೀಟವನ್ನೂ ಹಾಕಿಕೊಂಡ್ರು. ಆದ್ರೆ ಈಗ ಎಲ್ಲರಿಗೂ ನಿರೀಕ್ಷೆ ಇದೆ. ಆ ಬೆಟ್ಟದ ಹೂವನ್ನ ಈ ಇಬ್ಬರು ದಿಗ್ಗಜರು ಕಿತ್ತುಕೊಂಡು ಬರುತ್ತಾರೆ ಅನ್ನೋ ನಿರೀಕ್ಷೆ.

ಬೇಟೆ ಇನ್ನೂ ಮುಗಿದಿಲ್ಲ, ಇವರಿಬ್ಬರೂ ಮುಂದುವರೆಸ್ತಾರೆ.! ಯಶ್- ರಿಷಬ್ ಮೇಲೆ ಸೃಷ್ಟಿಯಾಗಿದೆ ಬಿಗ್ ಹೋಪ್.! 
ಸ್ಯಾಂಡಲ್‌ವುಡ್‌ನಲ್ಲಿ ಒಂದು ದೊಡ್ಡ ಹೋಪ್ ಹುಟ್ಟಿಕೊಂಡಿದೆ. ಬಾಕ್ಸ್ಆಫೀಸ್ನಲ್ಲಿ ಸಿನಿಮಾ ಓಡ್ತಿವೆ. ಪ್ರಶಸ್ತಿಗಳು ಬಂದಿವೆ. ಇದನ್ನ ನೋಡಿ ಯಶ್ ಫ್ಯಾನ್ಸ್ ಮತ್ತು ರಿಷಬ್ ಶೆಟ್ಟಿ ಹಿರಿ ಹಿರಿ ಹಿಗ್ಗುತ್ತಿದ್ದಾರೆ. ಕಥೆ ಇನ್ನು ಮುಗಿದಿಲ್ಲ ಎನ್ನುತ್ತಿದ್ದಾರೆ. ಯಾಕಂದ್ರೆ ಐದಾರು ದಶಕಗಳಿಂದ ಇರೋ ಒಂದೇ ಒಂದು ಆಸೆ ಕನ್ನಡದಲ್ಲಿ ಇನ್ನೂ ಕೈಗೂಡಿಲ್ಲ. ಅದಿನ್ನು ಬೆಟ್ಟದ ಹೂವಿನಂತೆ ಇದೇ. 

ಟಾಕ್ಸಿಕ್ ಶೂಟಿಂಗ್ ಶುರುವಿನಲ್ಲೇ ಯಶ್‌ಗೆ ಶುರುವಾಯ್ತು ಟೆನ್ಷನ್: ನಮ್ಮ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಎಂದ ರಾಕಿಂಗ್ ಸ್ಟಾರ್

ಅದೇ ಆಸ್ಕರ್ ಅನ್ನೋ ಬೆಟ್ಟದ ಹೂವು. ಹೀಗಾಗೆ ಬೇಟೆ ಇನ್ನೂ ಮುಗಿದಿಲ್ಲ, ಇವರಿಬ್ಬರೂ ಮುಂದುವರೆಸ್ತಾರೆ ಅಂತ ಯಶ್-ರಿಷಬ್ ಮೇಲೆ ಇಬ್ಬರ ಫ್ಯಾನ್ಸ್ ಬಿಗ್ ಹೋಪ್ ಇಟ್ಟುಕೊಂಡಿದ್ದಾರೆ. ಆಸ್ಕರ್​​​ನಲ್ಲಿ ಟಾಕ್ಸಿಕ್​-ಕಾಂತಾರ ರಾರಾಜಿಸೋದು ಪಕ್ಕನಾ..? ಯಶ್​-ರಿಷಬ್ ಮೇಲೆ ಹುಟ್ಟಿದೆ ದೊಡ್ಡ ನಂಬಿಕೆಯ ಬೆಟ್ಟ..!

ಕಥೆ ಇನ್ನು ಮುಗಿದಿಲ್ಲ.ಅವರಿಬ್ಬರು ಬಂದು ಮುಂದುವರೆಸುತ್ತಾರೆ ಅನ್ನೋ ಯಶ್​ ರಿಷಬ್ ಶೆಟ್ಟಿ ಅಭಿಮಾನಿಗಳ ಪಾಸಿಟಿವ್ ಯೋಚನೆ ನಿಜಕ್ಕು ಗ್ರೇಟ್ ಅನ್ನಿಸುತ್ತಿದೆ. ಅದಕ್ಕೆ ಕಾರಣ ಟಾಕ್ಸಿಕ್​ ಸಿನಿಮಾದ ಕಂಟೆಂಟ್ ಮತ್ತು ಕಾಂತಾರಾ ಚಾಪ್ಟರ್​ ಒನ್ ಸಿನಿಮಾ ಮಾಡಬಹುದಾದ ಮೋಡಿ. ವಿಶ್ವ ಸಿನಿಮಾ ಮಾರ್ಕೆಟ್​ ಮೇಲೆ ಟಾಕ್ಸಿಕ್ ಕಣ್ಣು ಇಟ್ಟಿದೆ. ಅಂತದ್ದೇ ಸ್ಟೋರಿಯ ಎಳೆ ಟಾಕ್ಸಿಕ್ ನಲ್ಲಿದೆ ಪ್ರಪಂಚವೇ ಎದುರಿಸುತ್ತಿರೋ ಡ್ರಗ್ ಮಾಫಿಯಾದ ಕತೆ ಟಾಕ್ಸಿಕ್​​ ಸ್ಟೋರಿ ಹೀಗಾಗಿ ಆಸ್ಕರ್​ಗೆ ಈ ಸಿನಿಮಾ ಹತ್ತಿರತ್ತಿರವಾಗೆ ಇದೆ. 

ರಶ್ಮಿಕಾ ಮಂದಣ್ಣ ಡಯಟ್ ಸೀಕ್ರೆಟ್ ಬಯಲಾಯ್ತು, ನಟಿ ಏನೇನೆಲ್ಲ ತಿಂತಾರೆ ನೋಡಿ!

ಈ ಕಡೆ ರಿಷಬ್ ಶೆಟ್ಟಿಯ ಕಾಂತಾರ.. ರಿಷಬ್ ಅಂದ್ರೆನೆ ಪ್ರಶಸ್ತಿಗಳ ಸರಧಾರ. ಯಾಕಂದ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದ್ರು. ಕಾಂತಾರ ಮಾಡಿ ಎರಡೆರದು ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡ್ರು. ಈಗ ಕಾಂತಾರ ಚಾಪ್ಟರ್​ ಒನ್ ಬರುತ್ತಿದೆ. ಇಲ್ಲಿ ರಿಷಬ್ ಯಾವ್ದಾದ್ರು ಒಂದು ಕೆಟಗರಿಯಲ್ಲಾದ್ರು ಆಸ್ಕರ್​​ಗೆ ಮುತ್ತಿಡುತ್ತಾರೆ ಅನ್ನೋ ಭರವಸೆ ಹುಟ್ಟಿಸಿದ್ದಾರೆ. ಹೀಗಾಗಿ ಆ ದಿನ ಆ ಕ್ಷಣಕ್ಕಾಗಿ ಇಡೀ ಕನ್ನಡ ಸಿನಿ ಕುಲವೇ ಕಾಯುತ್ತಿದೆ.

Latest Videos
Follow Us:
Download App:
  • android
  • ios