Asianet Suvarna News Asianet Suvarna News

ಪರಪ್ಪನ ಜೈಲಿನಲ್ಲಿರೋ ರಾಗಿಣಿಗೆ ಬೆನ್ನು ನೋವು..!

ನಟಿ ರಾಗಿಣಿಗೆ ವಿಪರೀತ ಬೆನ್ನು ನೋವು | ಆಸ್ಪತ್ರೆಗೆ ಹೋಗಬೇಕು ಎಂದ ನಟಿ | ರಾಗಿಣಿಗೆ ನೆರವಾದ್ರಾ ಸಂಜನಾ

Sandalwood Drug Scandal: Ragini Dwivedi gets help for back pain in Parappana Agraharas prison jail dpl
Author
Bangalore, First Published Oct 17, 2020, 9:45 AM IST
  • Facebook
  • Twitter
  • Whatsapp

ನಟಿ ರಾಗಿಣಿ ಮತ್ತು ಸಂಜನಾಗೆ ಜೈಲಿನಲ್ಲಿ ಸರಿಹೊಂದುತ್ತಿಲ್ಲ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಇದೀಗ ರಾಗಿಣಿ ಬೆನ್ನುನೋವಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಬ್ಬರ ನಡುವೆ ಭಾರೀ ವಾಗ್ವಾದ ನಡೆದಿದ್ದರೂ ಬೆನ್ನು ನೋವಿನ ಸಂದರ್ಭ ಸಂಜನಾ ಅವರೇ ರಾಗಿಣಿಗೆ ನೆರವಾಗಿದ್ದಾರೆನ್ನುವುದು ವಿಶೇಷ.

ರಾಗಿಣಿಗೆ ಜೈಲಿನಲ್ಲಿ ವಿಪರೀತ ಬೆನ್ನುನೋವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು ಎಂದಿದ್ದಾರೆ ನಟಿ. ಆದರೆ ರಾಗಿಣಿಯ ಈ ಬೇಡಿಕೆಯನ್ನು ನಿರಾಕರಿಸಲಾಗಿದೆ. ಹಾಗೆಯೇ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಲಾಗಿದೆ.

ಜೈಲಿಗೆ ಹೋದ್ರೂ ಬುದ್ದಿ ಬಂದಿಲ್ಲ; ಕಿತ್ತಾಡೋದು ನಿಲ್ಸೋದು ಇಲ್ಲ..!

ಇದೀಗ ಚಿಕಿತ್ಸೆಯ ನಂತರ ರಾಗಿಣಿಯ ಆರೋಗ್ಯ ಮೊದಲಿಗಿಂತಲೂ ಚೇತರಿಸಿಕೊಂಡಿದೆ ಎನ್ನಲಾಗಿದೆ. ಜೈಲಿಗೆ ಹೋಗುವ ಮುನ್ನ ರಾಗಿಣಿ ಸುಮಾರು 11 ದಿನಗಳ ಕಾಲ ಸಿಸಿಬಿ ವಶದಲ್ಲಿದ್ದರು.

ಡೋಪ್ ಟೆಸ್ಟ್ ಸಂದರ್ಭ ಮೂತ್ರ ಪರೀಕ್ಷೆಗೆ ನಕಲಿ ಮಾದರಿ ಕೊಟ್ಟು ಸುದ್ದಿಯಾಗಿದ್ದರು. ಕಳೆದ ತಿಂಗಳು ಎನ್‌ಡಿಪಿಎಸ್‌ ವಿಶೇಷ ಕೋರ್ಟ್ ರಾಗಿಣಿಯ ಜಾಮೀನು ನಿರಾಕರಿಸಿತ್ತು. ನಾಲ್ಕು ವಾರದ ಹಿಂದೆ ನಟಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. 

Follow Us:
Download App:
  • android
  • ios