ಡಾ.ರಾಜ್ ಕುಮಾರ್ ತಾವು ನಟಿಸಿದ 200 ಸಿನಿಮಾಗಳನ್ನೂ ನೋಡಲಾರದ ಮೊದಲ ಹೀರೋ!
ಕನ್ನಡ ಚಿತ್ರರಂಗದ ವರನಟ ಡಾ. ರಾಜ್ ಕುಮಾರ್ ಅವರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರು ತಮ್ಮ ಯಾವುದೇ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಸಿನಿಮಾ ನೋಡಿ ಎಂದು ಪ್ರಮೋಷನ್ ಮಾಡಿಕೊಂಡಿಲ್ಲ. ಇದಕ್ಕೆ ಒಂದು ಚಿತ್ರ ಮಾತ್ರ ಅಪವಾದವಾಗಿದೆ.
ಬೆಂಗಳೂರು (ನ.07): ಕನ್ನಡ ಚಿತ್ರರಂಗದ ವರನಟ ಡಾ. ರಾಜ್ ಕುಮಾರ್ ಅವರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಕನ್ನಡದ ಕನ್ಮಣಿ ಆಗಿದ್ದಾರೆ. ಡಾ. ರಾಜ್ ಕುಮಾರ್ ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಆದರೂ, ಅವರು ತಮ್ಮ ಯಾವುದೇ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಸಿನಿಮಾ ನೋಡಿ ಎಂದು ಪ್ರಮೋಷನ್ ಮಾಡಿಕೊಂಡಿಲ್ಲ. ಆದರೆ, ಇದಕ್ಕೆ ಒಂದು ಚಿತ್ರ ಮಾತ್ರ ಅಪವಾದವಾಗಿದೆ. ಹಾಗಾದರೆ, ಡಾ.ರಾಜ್ ಪ್ರಮೋಷನ್ ಮಾಡಿದ ಸಿನಿಮಾ ಯಾವುದು ಗೊತ್ತಾ?
ನಾನು 200 ಚಿತ್ರಗಳಲ್ಲಿ ಅಭಿನಯ ಮಾಡಿದ್ದೇನೆ. ನಾನು ಯಾವ ಚಿತ್ರದಲ್ಲಿ ಚೆನ್ನಾಗಿ ಅಭಿನಯ ಮಾಡಿದ್ದೇನೆ. ಯಾವ ಚಿತ್ರ ನನಗೆ ಮೆಚ್ಚುಗೆ ಆಗಿದೆ, ಯಾವ ಚಿತ್ರಗಳಲ್ಲಿ ನಾನು ಚೆನ್ನಾಗಿ ಅಭಿನಯಿಸಿದ್ದೀನಿ ಎಂಬುದು ನನಗೆ ಇನ್ನೂ ಗೊತ್ತಾಗಿಲ್ಲ. ಇಷ್ಟು ಸಿನಿಮಾಗಳಲ್ಲಿ ನನಗೆ ಇಷ್ಟವಾಗಿರುವ ಹಾಗೂ ಉತ್ತಮವಾಗಿ ಅಭಿನಯಿಸಿದ ಚಿತ್ರ ಸಿಕ್ಕಿಲ್ಲ ಎಂದರೆ ತಪ್ಪಾಗುತ್ತದೆ. ಒಂದೇ ಒಂದು ಚಿತ್ರ 'ಮಂತ್ರಾಲಯ ಮಹಾತ್ಮೆ' ನನ್ನ ನೆಚ್ಚಿನ ಚಿತ್ರವಾಗಿತ್ತು. ಅದನ್ನು ಮಾತ್ರ ಕೆಲವು ವಾರಗಳ ಕಾಲ ಕೆಲವು ಅಭಿಮಾನಿಗಳಿಗೆ ಚಿತ್ರ ನೋಡಿ.., ಆ ಚಿತ್ರ ನೋಡಿ ಎಂದು ಹೇಳಿದ್ದೆ. ಬಾಕಿ ನಾನು ಮಾಡಿದ ಚಿತ್ರವನ್ನು ಯಾರಿಗೇ ಆಗಲಿ, ಯಾವುದೇ ಅಭಿಮಾನಿಗಳಿಗೆ ಆಗಲಿ ನೋಡಿ ಎಂದು ಹೇಳಿಲ್ಲ. ಸ್ವತಃ ನಾನೇ ನೋಡಿಲ್ಲ.
ನಾನು ಅಭಿನಯ ಮಾಡಿ ಚಿತ್ರಗಳನ್ನು ನಾನೇ ನೋಡುವುದುಕ್ಕೆ ಆಗಿಲ್ಲ. ನಾನು ಇವಾಗ ಅನಾರೋಗ್ಯಕ್ಕೆ ತುತ್ತಾದ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ ನೋಡುತ್ತಿದ್ದೇನೆ. ಟಿವಿಯಲ್ಲಿ ಪ್ರಸಾರವಾಗುವ ಚಿತ್ರಗಳನ್ನು ಇವಾಗ ನೋಡುತ್ತಿದ್ದೇನೆ. ಅದರಲ್ಲಿಯೂ ಸ್ವಲ್ಪ ಹೊತ್ತು ನೋಡಿ ನಂತರ ನನ್ನ ಬಗ್ಗೆ ನನಗೆ ನಾಚಿಕೆ ಆಗಿಬಿಟ್ಟು ಚಿತ್ರ ನೊಡುವುದನ್ನು ನಿಲ್ಲಿಸಿಬಿಡುತ್ತೇನೆ. ಏಕೆಂದರೆ ನಾನು ಮಾಡಿದ ಕರ್ತವ್ಯಗಳಲ್ಲಿ ಲೋಪಗಳೇ ಹೆಚ್ಚಾಗಿ ಕಂಡುಬರುತ್ತಿದ್ದವು ಹೊರತು, ಉತ್ತಮವಾಗಿ ಕಾಣುವಂತದ್ದು ಬಹಳ ಕಷ್ಟವಾಗಿ ಕಾಣಿಸುತ್ತಿತ್ತು. ಆದ್ದರಿಂದ ಇಂತಹ ವಿಚಾರವನ್ನು ನಿಮ್ಮ ಮುಂದೆ ಹೇಳಿಕೊಳ್ಳುವುದಕ್ಕೆ ನಗೆ ಹೆಮ್ಮೆ ಅನಿಸುತ್ತದೆ.
ಇದನ್ನೂ ಓದಿ: ವಿಷ್ಣುವರ್ಧನ್ ಜೊತೆಗಿನ ಆ ಸಿನಿಮಾ ರಿಜೆಕ್ಟ್ ಮಾಡಿದ್ಯಾಕೆ ಸುಧಾರಾಣಿ? ಅವರೇ ಹೇಳಿದ ಕಾರಣ ಇದು!
ನನ್ನ ಬಗ್ಗೆ ನಾನು ಹೊಗಳಿಕೊಳ್ಳುವುದಕ್ಕೆ ಬರುವುದಿಲ್ಲ. ಏಕೆ ಬರುವುದಿಲ್ಲ ಎಂದರೆ ನನ್ನ ಅಪ್ಪ ನನಗೆ ಹೇಳಿಕೊಟ್ಟಿದ್ದೇ ಹಾಗೆ. ನನ್ನಪ್ಪ ಹೇಳಿದ್ದೇನೆ ಇಂದು ಏನು ನಡೆಯುತ್ತದೆಯೇ ಅದೆಲ್ಲವೂ ನನ್ನ ತಂದೆ ತಾಯಿ ಕನಸು ಇಂದು ನನಸಾಗಿದೆ. ಆ ನನಸನ್ನು ಇಂದು ನೀವು ನೋಡುತ್ತಿದ್ದೀರಿ ಎಂದು ಹೇಳಿದ್ದಾರೆ.
ತಾವು ಮಾಡಿದ 200 ಸಿನಿಮಾಗಳನ್ನು ನೊಡಲಾಗದ ಮೊದಲ ವ್ಯಕ್ತಿ: ಡಾ. ರಾಜ್ ಕುಮಾರ್ ಅವರು 70ರ ದಶಕದಿಂದ 90ರ ದಶಕದವರೆಗೆ ವಾರ್ಷಿಕ 8-10 ಸಿನಿಮಾಗಳನ್ನು ಅಭಿನಯಿಸುತ್ತಿದ್ದರು. ಬಹುಕಾಲ ಅವರು ಸಿನಿಮಾ ಶೂಟಿಂಗ್ ಸೆಟ್‌ನಲ್ಲಿಯೇ ಇರುತ್ತಿದ್ದರು. ಹಾಗಾಗಿ ತಮ್ಮ ಸಿನಿಮಾಗಳನ್ನು ಕೂಡ ತಮಗೆ ಮನೆಯಲ್ಲಿ ಕುಳಿತು ನೋಡಲಾಗಿರಲಿಲ್ಲ. ಇನ್ನು ವಯಸ್ಸಾದ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ ಕೆಲವು ಸಿನಿಮಾ ನೋಡಿದ್ದಾರೆ. ಅದೂ ಕೂಡ ತಮ್ಮ ನಟನೆ ನೋಡಿ ತಾವೇ ನಾಚಿಕೊಳ್ಳುತ್ತಿದ್ದರಂತೆ. ಉಳಿದ ಚಿತ್ರಗಳನ್ನು ನೋಡಬೇಕೆಂದರೆ ವೃದ್ದಾಪ್ಯ ವಯಸ್ಸಿನಲ್ಲಿ ಕಾಡುಗಳ್ಳ ವೀರಪ್ಪನ್‌ನಿಂದ ಡಾ.ರಾಜ್ ಕುಮಾರ್ ಅವರನ್ನು ಕಿಡ್ನಾಪ್ ಮಾಡಿಕೊಂಡು ಕೆಲವು ತಿಂಗಳ ಕಾಲ ಕಾಡಿನಲ್ಲಿ ಇಟ್ಟುಕೊಂಡು ನಂತರ ಬಿಡುಗಡೆ ಮಾಡಿದರು. ಇದರಿಂದ ಅವರಿಗೆ ಸಿನಿಮಾ ನೋಡಲು ಸಮಯವೇ ಸಿಗಲಿಲ್ಲ.
ಇದನ್ನೂ ಓದಿ: 'ಆನೆ ಮುಂದೆ ಬೊಗಳುವ ನಾಯಿಗಳು': ಟೀಕಾಕಾರರಿಗೆ ಜಗ್ಗೇಶ್ ತಿರುಗೇಟು
ತಿಂಗಳಿಗೊಂದು ಸಿನಿಮಾ ಮಾಡುವ ಕಾಲವಿತ್ತು: ಕನ್ನಡ ಚಿತ್ರರಂಗ ಸೇರಿದಂತೆ ಹಿಂದಿ, ಮರಾಠಿ, ತಮಿಳು, ತೆಲುಗು ಸೇರಿದಂತೆ ಎಲ್ಲ ಭಾಷೆಗಳಲ್ಲಿ 1970ರ ದಶಕಗಳಲ್ಲಿ ಸಿನಿಮಾ ಮಾಡುವಾಗ ತಿಂಗಳಿಗೊಂದರಂತೆ ವಾರ್ಷಿಕ 10 ರಿಂದ 12 ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದರು. ಇದು ಬರಬರುತ್ತಾ 5 ರಿಂದ 10ಕ್ಕೆ ಇಳಿಕೆ ಆಯಿತು. ಈಗಿನ ನಟರು 1 ವರ್ಷಕ್ಕೆ ಒಂದು ಅಥವಾ 4-5 ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಈಗ ಒಂದು ಸಿನಿಮಾ ಹಿಟ್ ಆದಲ್ಲಿ ಜೀವಮಾನ ಪೂರ್ತಿ ಕುಳಿತು ತಿನ್ನುವಷ್ಟು ಹಣ ಮಾಡಿಕೊಳ್ಳುತ್ತಾರೆ. ಕಾರಣ ಈಗಿನ ನಟರು ಸಿನಿಮಾಗಾಗಿ ಸಂಭಾವನೆ ಪಡೆಯುವ ಹಣಕ್ಕಿಂತ ಆದಾಯದಲ್ಲಿ ಇಂತಿಷ್ಟು ಪಾಲು ಎಂದು ಕೇಳುತ್ತಿದ್ದಾರೆ. ಸಿನಿಮಾ ಹಿಟ್ ಆದರೆ, ಲೈಫ್ ಸೆಟಲ್ ಆಗಿಬಿಡುದತ್ತದೆ. ಆದರೆ, ಅಂದಿನ ಕಾಲ ಹೀಗಿರಲಿಲ್ಲ. ಸಿನಿಮಾಗಳಲ್ಲಿ ನಟಿಸಿ ಬರುವ ಸಣ್ಣಪುಟ್ಟ ಆದಾಯವೇ ಅವರ ಜೀವನಕ್ಕೆ ಆಸರೆ ಆಗುತ್ತಿತ್ತು.