ಸಂಭಾಷಣೆಕಾರ ಗುರು ಕಶ್ಯಪ್‌ (45)ನ ನಿಧನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲೇ ಕೊನೆಯುಸಿರು

ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಭಾಷಣೆಕಾರ ಗುರು ಕಶ್ಯಪ್‌ (45) ಸೋಮವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುರು ಅವರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ರಾತ್ರಿ ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಗುರು ಕಶ್ಯಪ್‌ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರು ಎಳೆದಿದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಹೆಡ್‌ಬುಷ್ ಚಿತ್ರದಲ್ಲಿ ರವಿಚಂದ್ರನ್

ಗಣೇಶ್‌ ಅಭಿನಯದ ‘ಸುಂದರಾಂಗ ಜಾಣ’, ರಮೇಶ್‌ ಅರವಿಂದ್‌ ನಟನೆಯ ‘ಪುಷ್ಪಕ ವಿಮಾನ’ ಹಾಗೂ ಬಿಡುಗಡೆ ಆಗಬೇಕಿರುವ ‘100’, ಪ್ರಿಯಾಂಕಾ ಉಪೇಂದ್ರ ಅಭಿನಯದ ‘ದೇವಕಿ’ ಮುಂತಾದ ಸಿನಿಮಾಗಳಿಗೆ ಗುರು ಕಶ್ಯಪ್‌ ಸಂಭಾಷಣೆ ಬರೆದಿದ್ದಾರೆ.

ಗುರು ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ‘ನಾನು ಕಂಡ ಅತ್ಯಂತ ಪ್ರತಿಭಾವಂತರಲ್ಲಿ ಗುರು ಕಶ್ಯಪ್‌ ಕೂಡ ಒಬ್ಬರು. ನನ್ನ ಪುಷ್ಪಕ ವಿಮಾನ, ಸುಂದರಾಂಗ ಜಾಣ ಹಾಗೂ 100 ಚಿತ್ರಗಳ ಸಂಭಾಷಣೆಗಾರ ಇವರು. ಸಂಜೆ ನಗುತ್ತಾ ಚೆನ್ನಾಗಿದ್ದವರು ರಾತ್ರಿ ಜೀವ ತೊರದಿದ್ದಾರೆ. ಒಬ್ಬ ಒಳ್ಳೆಯ ವ್ಯಕ್ತಿ, ಶ್ರೇಷ್ಠ ಬರಹಗಾರನನ್ನು ಕಳೆದು ಕೊಂಡಿದ್ದೇವೆ’ ಎಂದು ರಮೇಶ್‌ ಅರವಿಂದ್‌ ಶೋಕ ವ್ಯಕ್ತಪಡಿಸಿದ್ದಾರೆ.