ಸ್ಯಾಂಡಲ್ ವುಡ್‌ಗೆ ಸಾವಿನ ಕಂಟಕ; ಕಾರಣ ಹೇಳುತ್ತಿದೆ ಜ್ಯೋತಿಷ್ಯ..!
ಸ್ಯಾಂಡಲ್‌ವುಡ್ ಕಳೆದ ಎರಡು ವರ್ಷಗಳಲ್ಲಿ ಪ್ರತಿಭಾನ್ವಿತ ನಟರನ್ನು ಕಳೆದುಕೊಂಡಿದೆ. ಹೃದಯಾಘಾತದಿಂದ ನಟ ಪುನೀತ್ ರಾಜ್ ಕುಮಾರ್ ಹಾಗೂ ಚಿರಂಜೀವಿ ಸರ್ಜಾ, ಅಪಘಾತದಲ್ಲಿ ಸಂಚಾರಿ ವಿಜಯ್ ಅಗಲಿದ್ದರು. ಇದಕ್ಕೆ ಕಾರಣ ಏನೆಂದು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ.
ಸ್ಯಾಂಡಲ್ ವುಡ್ ಇದೀಗ ಮತ್ತೊಂದು ಆಘಾತದ ಸುದ್ದಿಯಿಂದ ಬೆಚ್ಚಿ ಬಿದ್ದಿದೆ. ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದು, ಎಲ್ಲರಿಗೂ ಶಾಕ್ ಮೂಡಿಸಿದೆ. ಕೇವಲ 39ನೇ ವಯಸ್ಸಿಗೆ ಸ್ಪಂದನಾ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಸ್ಯಾಂಡಲ್‌ವುಡ್ ಕಳೆದ ಎರಡು ವರ್ಷಗಳಲ್ಲಿ ಪ್ರತಿಭಾನ್ವಿತ ನಟರನ್ನು ಕಳೆದುಕೊಂಡಿದೆ. ಹೃದಯಾಘಾತದಿಂದ ನಟ ಪುನೀತ್ ರಾಜ್ ಕುಮಾರ್ ಹಾಗೂ ಚಿರಂಜೀವಿ ಸರ್ಜಾ, ಅಪಘಾತದಲ್ಲಿ ಸಂಚಾರಿ ವಿಜಯ್ ಅಗಲಿದ್ದರು. ಇದಕ್ಕೆ ಕಾರಣ ಏನೆಂದು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ.
ಇತ್ತೀಚೆಗೆ ಪ್ರತಿಭಾನ್ವಿತ ಕಲಾವಿದರನ್ನು ಕಳೆದುಕೊಂಡ ನೋವನ್ನು ಕನ್ನಡ ಚಿತ್ರರಂಗ ಅನುಭವಿಸುತ್ತಲೇ ಬಂದಿದೆ. ಚಿರಂಜೀವಿ ಸಾವು ಕೊರೋನಾ ಸಂದರ್ಭ ಸ್ಯಾಂಡಲ್‌ವುಡ್‌ಗೆ ದೊಡ್ಡ ಆಘಾತವಾಗಿತ್ತು. ಅದರ ನೋವು ಮಾಸುವ ಮುನ್ನವೇ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅಪಘಾತದಿಂದ ಸಾವನ್ನಪ್ಪಿದರು. ಆ ಸಾವಿನ ನೋವು ಹಾಗೆಯೇ ಇರುವಾಗಲೇ ಸ್ಯಾಂಡಲ್‌ವುಡ್ ಮತ್ತೊಮ್ಮೆ ಬಹು ಪ್ರತಿಭಾನ್ವಿತ ನಟ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿತ್ತು. ಇದೀಗ ಆ ಸಾವಿನ ಸರಣಿಗೆ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಕೂಡ ಸೇರಿದ್ದಾರೆ. ಇದಕ್ಕೆ ಕಾರಣವನ್ನು ಜ್ಯೋತಿಷ್ಯದಲ್ಲಿ ಕಂಡು ಹಿಡಿಯುವ ಪ್ರಯತ್ನ ಮಾಡೋಣ.
ಹೃದಯಾಘಾತದಿಂದ ಅಪ್ಪು, ಚಿರು ಅಗಲಿಕೆ
ಎಲ್ಲ ವಯಸ್ಸಿನ ವೀಕ್ಷಕರನ ನೆಚ್ಚಿನ ನಟನಾಗಿದ್ದ ಪುನೀತ್ ರಾಜ್‌ಕುಮಾರ್, 2021ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮನೆಯಲ್ಲಿ ಕಸರತ್ತು ಮಾಡುವ ವೇಳೆ ಹೃದಯಾಘಾತದಿಂದ ಅವರು ಕುಸಿದು ಬಿದ್ದಿದ್ದರು. ಅವರನ್ನು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ದ ನಂತರ ಆಪ್ತರು ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಲ್ಲಿ ಕೊನೆಯುಸಿರೆಳೆದಿದ್ದರು. ಹಾಗೂ ಸ್ಯಾಂಡಲ್‌ವುಡ್‌ನ ಯುವ ನಟ ಚಿರಂಜೀವಿ ಸರ್ಜಾ ಕೊರೋನಾ ಸಂದರ್ಭ ಹೃದಯಾಘಾತದಿಂದ ಮೃತಪಟ್ಟಿದ್ದರು. ನಟನ ಗರ್ಭಿಣಿ ಪತ್ನಿ ಮೇಘನಾ ರಾಜ್ ಸರ್ಜಾ ಅವರ ನೋವಿಗೆ ಕನ್ನಡಿಗರ ಮನ ಮಿಡಿದಿತ್ತು.
ಈ ರಾಶಿಯ ಹುಡುಗಿಯನ್ನು ಮದುವೆಯಾಗಲು ಪುಣ್ಯ ಮಾಡಿರಬೇಕು; ಇವರಿಗೆ ಪತಿಯೇ ದೈವ..!
ಅಪಘಾತದಲ್ಲಿ ಸಂಚಾರಿ ವಿಜಯ್ ಸಾವು
ರಾತ್ರಿ ಔಷಧ ತರಲು ಹೋಗುತ್ತಿದ್ದಾಗ ಸಂಚಾರಿ ವಿಜಯ್ ಅವರಿದ್ದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ವಿಜಯ್ ಅವರ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಲ ತೊಡೆಯ ಮೂಳೆ ಮುರಿದಿದ್ದು, ಸರ್ಜರಿ ಮಾಡಲಾಗಿತ್ತು. ನಟ ಮೆದುಳು ನಿಷ್ಕ್ರಿಯವಾಗಿ ಜೂನ್.15 2021ರಂದು ಅವರು ಮೃತಪಟ್ಟಿದ್ದರು. ಯುವ ನಟನ ಅಕಾಲಿಕ ಸಾವು ಸಿನಿಪ್ರಿಯರನ್ನು ಶೋಕದಲ್ಲಿ ಮುಳುಗಿಸಿತ್ತು. ಇದೀಗ ಸ್ಪಂದನಾ ಅಕಾಲಿಕ ಮರಣ ಕೂಡ ಎಲ್ಲರಿಗೂ ಶಾಕ್ ನೋಡಿದೆ.
ಅಷ್ಠಮಸ್ಥಾನದಿಂದ ಆಯುಷ್ಯ ನಿರ್ಧಾರ
ಒಬ್ಬ ವ್ಯಕ್ತಿಯ ಹುಟ್ಟು ಸಾವುಗಳಿಗೆ ಗ್ರಹಗಳ ಪ್ರೇರಣೆಯೇ ಕಾರಣ. ಒಬ್ಬ ಮನುಷ್ಯನ ಸಾವು ಮೊದಲೇ ನಿರ್ಧಾರವಾಗಿರುತ್ತದೆ. ಯಾರ ಸಾವು ಕೂಡ ಆಕಸ್ಮಿಕ ಆಗಿರುವುದಿಲ್ಲ. ಅಷ್ಠಮಾಧಿಪತಿಯ ಉಚ್ಛ, ನೀಚ, ಮಿತ್ರ ಹಾಗೂ ಶತ್ರು ಸ್ಥಾನಗಳಿಂದ ಆಯಷ್ಯನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಅಷ್ಠಮ ಸ್ಥಾನವನ್ನು ಆಯುಷ್ಯ ಸ್ಥಾನ ಎಂದು ಕರೆಯುತ್ತಾರೆ. ಇದರ ಮೂಲಕ ವ್ಯಕ್ತಿಯ ಸಾವು ನಿರ್ಧಾರವಾಗಿರುತ್ತದೆ. ಆದ್ದರಿಂದ ಚಿತ್ರರಂಗದವರು ಸೇರಿದಂತೆ ಅನೇಕ ಯುವಕರ ಸಾವಿಗೆ ಬೇರೆ ಅರ್ಥ ಕೊಡುವ ಅಗತ್ಯವಿಲ್ಲ. ಅವರ ಗ್ರಹಗತಿಗಳೇ ಅವರ ಸಾವಿಗೆ ಕಾರಣ ಅನ್ನುತ್ತಾರೆ ಅನೇಕ ಜ್ಯೋತಿಷಿಗಳು.
ಭದ್ರ ರಾಜಯೋಗದಿಂದ ಬದುಕು ಬಂಗಾರ; ಈ ರಾಶಿಯವರ ಕಷ್ಟವೆಲ್ಲ ಮಾಯ..!