ವಾಹ್! ಕಾಮಿಡಿ ಅಂದ್ರೆ ಇವರು ಹೊಟ್ಟೆ ನೋವು ಬರಿಸುವಷ್ಟು ನಕ್ಕು-ನಗಿಸುತ್ತಾರೆ. ಇವರು ಅಭಿನಯಿಸಿರುವ ಚಿತ್ರವನ್ನು ಒಂದು ಕಾಲದಲ್ಲಿ ಜನರು ಮಿಸ್‌ ಇಲ್ಲದೇ ನೋಡುತ್ತಿದ್ದರು. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

1.3 ಕೋಟಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ ನಟಿ ದಿಶಾ ಪಟಾನಿ!

ಹೌದು! ಆ ಹಾಸ್ಯ ಕಲಾವಿದ ಬೇರಾರು ಅಲ್ಲ ಒನ್ ಆ್ಯಂಡ್ ಒನ್ಲಿ ಟೆನ್ನಿಸ್ ಕೃಷ್ಣ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಜನರನ್ನು ಮನರಂಜಿಸಿರುವ ಟೆನ್ನಿಸ್ ಕೃಷ್ಣ ಕೆಲ ದಿನಗಳ ಹಿಂದೆ 'ರಾಜಲಕ್ಷ್ಮೀ' ಪ್ರೆಸ್ ಮೀಟ್‌ನಲ್ಲಿ ಹಿರಿಯ ಕಲಾವಿದರಿಗೆ ಅವಕಾಶ ಸಿಗದ ವಿಚಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

'ಎಲ್ಲೇ ಹೋದರೂ ಅಭಿಮಾನಿಗಳು ಯಾವ ಸಿನಿಮಾದಲ್ಲಿ ಮಾಡುತ್ತಿದ್ದೀರಿ? ಯಾಕೆ ಇಷ್ಟು ದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ? ಎಂದು ಕೇಳಿದಾಗ ನಾವೇನು ಪ್ರತಿಕ್ರಿಯಿಸಬೇಕು' ಎಂದು ಹೇಳುವ ಮೂಲಕ ಮಾತನ್ನು ಶುರು ಮಾಡಿದರು.

ತೆಲುಗು ಸಿನಿಮಾ 'ಭೀಷ್ಮ'ದಲ್ಲಿ ಅನಂತ್‌ನಾಗ್‌ ಟೈಟಲ್ ರೋಲ್!

 

'ಬೇರೆ ಭಾಷೆಗಳಲ್ಲಿ ಒಬ್ಬ ಕಲಾವಿದನಿಗೆ ಸಾಯುವವರೆಗೂ ಅವಕಾಶ ನೀಡುತ್ತಾರೆ. ಹಿರಿಯ ನಟ ಬ್ರಹ್ಮಾನಂದರಿಗೆ ಅನಾರೋಗ್ಯ ಆಗಿದ್ದಾಗಲೂ ಕಾಲ್‌ ಶೀಟ್‌ಗಾಗಿ ನಿರ್ದೇಶಕರು ಕಾಯುತ್ತಿದ್ದರು. ನಮ್ಮಲ್ಲಿ ಈ ರೀತಿ ಇಲ್ಲ ನಮ್ಮಂತ ಹಿರಿಯ ಕಲಾವಿದರಿಗೆ ಅವಕಾಶ ನೀಡುವುದಿಲ್ಲ. ಸಿನಿಮಾವಿಲ್ಲದೆ ನಾವು ಬೇರೆ ಕಾರ್ಯಕ್ರಮಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದೀವೆ. ಅದರೆ ಅಭಿಮಾನಿಗಳು ಈ ರೀತಿ ಪ್ರಶ್ನೆಗಳು ಕೇಳಿದಾಗ ಏನು ಉತ್ತರ ಕೋಡುವುದು ಅಂತಾನೆ ಗೊತ್ತಾಗಲ್ಲ' ಎಂದು ಹೇಳುವ ಮೂಲಕ ಬೇಸರವನ್ನು ಹೊರ ಹಾಕಿದ್ದಾರೆ.

'ನನಗೆ ಸಿನಿಮಾದಲ್ಲಿ ಅವಕಾಶ ನೀಡಿ ಎಂದು ನಾನು ಕೇಳುತ್ತಿಲ್ಲ. ಒಂದು ಸಿನಿಮಾಗೆ ನನ್ನನ್ನು ಹಾಕಿಕೊಳ್ಳಿ, ಮತ್ತೊಂದರಲ್ಲಿ ಸಿನಿಮಾಗೆ ಬ್ಯಾಂಕ್‌ ಜನಾರ್ಧನ್‌ ಹಾಕಿಕೊಳ್ಳಿ. ಇನ್ನೊಂದರಲ್ಲಿ ಸಿನಿಮಾಗೆ ಹೊನ್ನವಳ್ಳಿ ಕೃಷ್ಣರನ್ನು, ಬಿರಾದರ್‌ರನ್ನು ಹಾಕಿಕೊಳ್ಳಿ. ಚಿತ್ರರಂಗದಲ್ಲಿ ಹಿರಿಯ ಕಲಾವಿದರೂ ಇರಬೇಕು ಎನ್ನುವುದು ನನ್ನ ಮಾತು' ಎಂದು ಮಾತನಾಡಿದ್ದಾರೆ.