Asianet Suvarna News Asianet Suvarna News

ಶ್ವೇತಾ ಶ್ರೀವಾತ್ಸವ್​ ಸೆಕ್ಸಿ ಡ್ಯಾನ್ಸ್​: ಮದ್ವೆ- ಮಕ್ಳಾದ್ರೂ ಮೂರು ಬಿಟ್ಟೋರ್​ ಥರ ಆಡ್ತಿಯಲ್ಲಮ್ಮಾ ಎಂದ ಟ್ರೋಲಿಗರು

ಸ್ಯಾಂಡಲ್​ವುಡ್​ ನಟಿ ಶ್ವೇತಾ ಶ್ರೀವಾತ್ಸವ್​ ಸೆಕ್ಸಿ ಡ್ಯಾನ್ಸ್ ವಿಡಿಯೋ ವೈರಲ್​ ಆಗಿದ್ದು,  ಪರ- ವಿರೋಧ ನಿಲುವು ವ್ಯಕ್ತವಾಗಿದೆ. 
 

Sandalwood actress Shweta Srivatsav sexy dance video has gone viral suc
Author
First Published Nov 6, 2023, 9:28 PM IST

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದ ನಟಿ ಶ್ವೇತಾ ಶ್ರೀವಾತ್ಸವ್‌. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿಯರಲ್ಲಿ ಶ್ವೇತಾ ಶ್ರೀವಾತ್ಸವ್‌ ಕೂಡ ಒಬ್ಬರು. ಕೆಲವು ಸಮಯಗಳಿಂದ ವೈಯಕ್ತಿಕ ಕಾರಣಗಳಿಂದಾಗಿ ನಟನೆಯಿಂದ ದೂರವಿದ್ದ ಅವರು ಈಗ ಮತ್ತೆ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದಾರೆ.  ಮಗಳು ಅಶ್ಮಿತಾ ಹುಟ್ಟಿದ ಮೇಲೆ ಶ್ವೇತಾ ಶ್ರೀವಾತ್ಸವ್ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡರು. ಸದ್ಯ ಅವರು ಪುನಃ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಈಚೆಗೆ ಅವರು 'ಹೋಪ್‌' ಸಿನಿಮಾ ತೆರೆಕಂಡಿತ್ತು. ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಆಕ್ಷನ್‌ ಕಟ್‌ ಹೇಳುತ್ತಿರುವ ’ರಾಘವೇಂದ್ರ ಸ್ಟೋರ್ಸ್’ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್‌ಗೆ ನಾಯಕಿಯಾಗಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ.  'ಚಿಕ್ಕಿಯ ಮೂಗುತಿ' ಎಂಬ ಮಹಿಳಾ ಪ್ರಧಾನ ಸಿನಿಮಾವನ್ನು ಶ್ವೇತಾ ಶ್ರೀವಾತ್ಸವ್ ಒಪ್ಪಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶ್ವೇತಾ, ತಮ್ಮ ಫಿಟ್​ನೆಸ್​ ವಿಡಿಯೋ, ತಮಗಿಷ್ಟವಾದ ಡ್ಯಾನ್ಸ್ ವಿಡಿಯೋ, ಮುದ್ದಾದ ಮಗಳು ಅಶ್ಮಿತಾ ಜೊತೆಗಿನ ಫೋಟೋಗಳು, ದೇವಸ್ಥಾನ ಭೇಟಿ, ಟ್ರಾವೆಲ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಜನರೊಂದಿಗೆ ಹೆಚ್ಚಾಗಿ ಕನೆಕ್ಟ್ ಆಗುತ್ತಿರುತ್ತಾರೆ. ಇದೀಗ ಅವರು ಸೆಕ್ಸಿ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. 37 ವರ್ಷದ ಶ್ವೇತಾ ಈ ಹಿಂದೆಯೂ ಸೀರೆಯುಟ್ಟು ಸೆಕ್ಸಿ ಫೋಟೋಶೂಟ್​ ಮಾಡಿಸಿದ್ದು ಇದೆ. ಇದೀಗ ಟಿಪ್​ ಟಿಪ್​ ಬರ್ಸಾ ಪಾನಿಗೆ ಸೆಕ್ಸಿಯಾಗಿ ಡ್ಯಾನ್ಸ್​ ಮಾಡಿದ್ದು, ಹಲವರು ಇದಕ್ಕೆ ಬೆಂಕಿಯ ಎಮೋಜಿ ಹಾಕಿದ್ದರೆ, ಮತ್ತೆ ಕೆಲವರು ಹಾರ್ಟ್​ ಎಮೋಜಿ ಹಾಕಿದ್ದಾರೆ. ಆದರೆ ಈ ಡ್ಯಾನ್ಸ್​ ಶ್ವೇತಾ ಅವರ ಕೆಲವು ಫ್ಯಾನ್ಸ್​ಗೆ ಇಷ್ಟವಾಗಲಿಲ್ಲ. ಮದುವೆ, ಮಗಳು ಎಂದೆಲ್ಲಾ ಸಂಸಾರ ನಡೆಸಿಕೊಂಡು ಹೋಗುತ್ತಿದ್ದವಳು ಮೂರು ಬಿಟ್ಟವರ ಥರ ಆಡಬೇಡ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಇಂಥ ಕೆಟ್ಟ ಡ್ಯಾನ್ಸ್​ ನಿಮಗ್ಯಾಕೆ? ಬಿಗ್​ಬಾಸ್​ ಮನೆಗೆ ಹೋಗಬೇಕಾ ಅಂತ ಕೇಳುತ್ತಿದ್ದಾರೆ. ಅವರ ಇಷ್ಟ ಏನು ಬೇಕಾದ್ರೂ ಮಾಡ್ತಾರೆ, ನಿಮಗೇನು ಎಂದು ಇನ್ನು ಕೆಲವರು ರಿಪ್ಲೈ ಮಾಡಿದ್ದಾರೆ. ಒಟ್ಟಿನಲ್ಲಿ ಶ್ವೇತಾ ಅವರ ಈ ಡ್ಯಾನ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. 

ಕನ್ನಡ ಪ್ರೇಮ ಮೆರೆದ ನಟಿ ಪೂಜಾ ಗಾಂಧಿ: ವಿಡಿಯೋ ನೋಡಿಯಾದ್ರೂ ಬುದ್ಧಿ ಕಲೀರಿ ಅಂತಿದ್ದಾರೆ ಅಭಿಮಾನಿಗಳು

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಶ್ವೇತಾ ವಿದ್ಯಾಭ್ಯಾಸವನ್ನು ಸಹ ಇಲ್ಲೇ ಪೂರ್ಣ ಮಾಡಿ, ಮೀಡಿಯಾ ವಿಷಯವನ್ನು ಸಹ ಕಲಿತು ಅನೇಕ ಟಿವಿ ಕಾರ್ಯಕ್ರಮಗಳಿಗೆ ನಿರೂಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇದಲ್ಲದೆ ಅನೇಕ ಕನ್ನಡ, ತೆಲುಗು, ಧಾರಾವಾಹಿಗಳಲ್ಲಿ ಅಭಿನಯಿಸಿ, ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಶ್ವೇತಾ 2013 ರಲ್ಲಿ ಬಿಡುಗಡೆಯಾದ ಸಿಂಪಲ್ಲಾಗೊಂದು ಲವ್ ಸ್ಟೋರಿ (Simple ag ondu love story) ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಸಿಂಪಲ್ ಆದ ಜೊತೆಗೆ ಅದ್ಭುತವಾದ ಪಾತ್ರದ ಮೂಲಕ ಶ್ವೇತಾ ಶ್ರೀವಾತ್ಸವ್ ಕರ್ನಾಟಕದ ಮನೆ ಮನ ತಲುಪಿದ್ದರು. 

ಸಿನಿಮಾ ವಿಷಯಕ್ಕೆ ಬಂದ ಶ್ವೇತಾ ಇದುವರೆಗೆ ನಟಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ, ಇವರು ಹೆಚ್ಚಾಗಿ ಫ್ಯಾಮಿಲಿ, ಮಗು ಎಂದು ಬ್ಯುಸಿಯಾಗಿರ್ತಾರೆ, ಆಗೊಮ್ಮೆ ಈಗೊಮ್ಮೆ ಸಿನಿಮಾದಲ್ಲಿ ಕಾಣಿಸಿಕೊಂಡರೂ ಇಂದಿಗೂ ತಮ್ಮ ಬೇಡಿಕೆಯ ನಟಿಯಾಗಿ ಉಳಿದುಕೊಂಡಿದ್ದಾರೆ. ಆತ್ಮಸಾಕ್ಷಿ, ಫೇರ್ ಅಂಡ್ ಲವ್ಲಿ, ಕಿರಗೂರಿನ ಗಯ್ಯಾಳಿಗಳು, ಹೋಪ್ ಚಿತ್ರಗಳಲ್ಲಿ ಇಲ್ಲಿವರೆಗೆ ನಟಿಸಿದ್ದಾರೆ. ಇವರ ನಟನೆಯ ರಾಘವೇಂದ್ರ ಸ್ಟೋರ್ಸ್ ಈ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಇವರು ಜಗ್ಗೇಶ್  ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಇವರ ನಟನೆಯ ಚಿಕ್ಕಿಯ ಮೂಗುತ್ತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. 

ಸಿಂಪಲ್​ ಅವಲಕ್ಕಿಗೆ ಟೇಸ್ಟಿ ಬೆಂಡೇಕಾಯಿ ಫ್ರೈ: ನಟಿ ಅದಿತಿ ಪ್ರಭುದೇವ ರೆಸಿಪಿ ನೋಡಿದ್ರೆ ಬಾಯಲ್ಲಿ ನೀರೂರತ್ತೆ!

Follow Us:
Download App:
  • android
  • ios