ಕಾರ್ಮಿಕನಿಗೆ ಗುದ್ದಿದ ರಚಿತಾ ರಾಮ್ ಕಾರು, ಮಾನವೀಯತೆ ಮರೆತ್ರಾ ನಟಿ!
ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಅವರು ಪ್ರಯಾಣಿಸುತ್ತಿದ್ದ ಕಾರು ಕಾರ್ಮಿಕನಿಗೆ ಗುದ್ದಿದ್ದು, ಕ್ಷಣ ಮಾತ್ರದಲ್ಲೇ ಬಾರೀ ಅನಾಹುತ ತಪ್ಪಿದೆ.
ಬೆಂಗಳೂರು (ಆ.14): ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ (actress rachita ram) ಅವರು ಪ್ರಯಾಣಿಸುತ್ತಿದ್ದ ಕಾರು ಕಾರ್ಮಿಕನಿಗೆ ಗುದ್ದಿದ್ದು, ಕ್ಷಣ ಮಾತ್ರದಲ್ಲೇ ಬಾರೀ ಅನಾಹುತ ತಪ್ಪಿದೆ. ಕಾರು ಚಾಲಕನ ಯಡವಟ್ಟಿನಿಂದ ಲಾಲ್ ಬಾಗ್ ನಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದಾಗ ರಚಿತಾ ಕಾರಿನಲ್ಲೇ ಇದ್ದರು. ಚಾಲಕನ ನಿರ್ಲಕ್ಷ್ಯವೋ? ಕಾರ್ಮಿಕನ ನಿರ್ಲಕ್ಷ್ಯವೋ? ಗೊತ್ತಿಲ್ಲ. ಲಾಲ್ ಬಾಗ್ ಫ್ಲವರ್ ಶೋ ನೋಡಲು ರಚಿತಾ ರಾಮ್ ಬಂದಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!
ಕಾರ್ ಗುದ್ದಿದ್ದು ತಿಳಿದಿದ್ರು ಕ್ಯಾರೇ ಅನ್ನದೇ ಹೋದ ರಚಿತಾ ರಾಮ್ . ಮಾನವೀಯತೆ ಮರೆತ್ರಾ ಎಂದು ಪ್ರಶ್ನೆ ಎದ್ದಿದೆ. ಇದರ ಮಧ್ಯೆಯೂ ಕಾರ್ಮಿಕನ ಮೇಲೆ ರಚಿತಾ ಬಾಡಿಗಾರ್ಡ್ಸ್ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ನಟಿ ರಚಿತಾ ರಾಮ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಹೋಗಿದ್ದಾರೆ. ಕ್ಷಮೆ ಕೇಳುವ ಸೌಜನ್ಯವೂ ತೋರಿಸಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
ಅಭಿಮಾನಿ ಬುಲೆಟ್ ಮೇಲೆ ಆಟೋಗ್ರಾಫ್ ಹಾಕಿದ ರಚಿತಾ ರಾಮ್; ಫೋಟೋ ವೈರಲ್!