ರಾಮು ಅಗಲಿಕೆ ನಂತರ ಮಾಲಾಶ್ರೀ ಮೊದಲ ಪೋಸ್ಟ್ ಇನ್‌ಸ್ಟಾಗ್ರಾಂನಲ್ಲಿ ದೀರ್ಘ ಪತ್ರ ಶೇರ್ ಮಾಡಿದ ನಟಿ

ಸ್ಯಾಂಡಲ್‌ವುಡ್ ನಟಿ ಮಾಲಾಶ್ರೀ ಅವರು ಪತಿಯನ್ನು ಕಳೆದುಕೊಂಡ ನಂತರ ಮೊದಲಬಾರಿ ಸೋಷಿಯಲ್ ಮಿಡಿಯಾ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ನೋವಿನಲ್ಲಿ ಧೈರ್ಯ ತುಂಬಿದವರಿಗೆ ಧನ್ಯವಾದ ಹೇಳಿದ್ದಾರೆ.

ಕಳೆದ 12 ದಿನಗಳು ಅತ್ಯಂತ ನೋವಿನ ದಿನಗಳಾಗಿತ್ತು. ಸಂಪೂರ್ಣ ಅಸ್ಪಷ್ಟವಾಗಿತ್ತು. ನನ್ನ ಪ್ರೀತಿಯ ಪತಿ ರಾಮು ಅಗಲುವಿಕೆಯಿಂದ ನಮ್ಮ ಕುಟುಂಬವೇ ಬೇಸರದಲ್ಲಿದೆ. ಅವರು ಹಿಂದೆ ಮತ್ತು ಮುಂದೆಯೂ ನಮ್ಮ ಬೆನ್ನೆಲುಬಾಗಿರಲಿದ್ದಾರೆ, ನಮಗೆ ದಾರಿ ತೋರಿಸುವ ಬೆಳಕಾಗಿರಲಿದ್ದಾರೆ ಎಂದು ಬರೆದಿದ್ದಾರೆ.

ಗಾಡ್‌ಫಾದರ್‌ ಇಲ್ಲದೆ ಬೆಳೆದ ಸಾಧಕ ಕೋಟಿ ರಾಮು!

ಈ ನೋವಿನ ಸಂದರ್ಭದಲ್ಲಿ ಇಡೀ ಚಿತ್ರರಂಗವೇ ರಾಮು ಕುರಿತ ಪ್ರೀತಿ ತೋರಿಸಿ ನಮ್ಮ ಕುಟುಂಬವನ್ನು ಬೆಂಬಲಿಸಿದ್ದೀರಿ. ಮಾಧ್ಯಮ, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ಸ್ಟಾಫ್, ರಾಮು ಅವರ ಅಭಿಮಾನಿಗಳು ಸೇರಿ ಚಿತ್ರರಂಗದ ಎಲ್ಲರಿಗೂ ಧನ್ಯವಾದಗಳು. ನಮ್ಮ ಕಷ್ಟದ ಸಂದರ್ಭ ನಮಗಾಗಿ ಪ್ರಾರ್ಥಿಸಿ, ಪ್ರೀತಿ ಕಳುಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದಿದ್ದಾರೆ ನಟಿ

View post on Instagram

ಗೋಲಿಬಾರ್, ಎಕೆ 47, ಸಿಂಹದ ಮರಿಯಂತ ಚಿತ್ರಗಳನ್ನು ನಿರ್ಮಿಸಿ ಕನ್ನಡದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಅವರು ಕೊರೋನಾದಿಂದಾಗಿ ಸಾವನ್ನಪ್ಪಿದ್ದರು.