Asianet Suvarna News Asianet Suvarna News

ಯಾರಿವಳು, ಸೂಜಿ ಮಲ್ಲೆ ಕಣ್ಣವಳು, 'ಗೋಪಿಲೋಲ'ನ ಜೊತೆ ಹೆಜ್ಜೆ ಹಾಕಿದ ಜಾಹ್ನವಿ ..!

ಮಂಜುನಾಥ್ ಗೆ ಜೋಡಿಯಾಗಿ ನಿಮಿಷಾ ಕೆ ಚಂದ್ರ ಅಭಿನಯಿಸ್ತಿದ್ದು, ನಟಿ ಜಾಹ್ನವಿ, ಎಸ್.ನಾರಾಯಣ್, ಪದ್ಮಾ ವಸಂತಿ, ನಾಗೇಶ್ ಯಾದವ್, ಸ್ವಾತಿ, ಹಿರಿಯ ನಿರ್ದೇಶಕ  ಜೋಸೈಮನ್ ಸೇರಿದಂತೆ ತೆಲುಗು ನಟ ಸಪ್ತಗಿರಿ ತಾರಾಬಳಗದಲ್ಲಿದ್ದಾರೆ.

Sandalwood actress Jahnavi dance for Gopilola kannada movie srb
Author
First Published Aug 5, 2024, 5:10 PM IST | Last Updated Aug 5, 2024, 5:10 PM IST

ಕನ್ನಡದಲ್ಲಿ ಹೊಸಬರ ಸಿನಿಮಾಗಳು ಸಾಲುಸಾಲಾಗಿ ತೆರೆಗೆ ಬರುತ್ತಿವೆ. ಅದ್ಯಾವಾಗ ಶೂಟಿಂಗ್ ಆಯ್ತೋ, ಅದ್ಯಾವಾಗ ಮುಹೂರ್ತ ಆಯ್ತೋ ಗೊತ್ತೇ ಇಲ್ಲ ಅಂತಿದಾರೆ ಪ್ರೇಕ್ಷಕರು. ಆದರೆ, ಸಿನಿಮಾ ಸಿದ್ಧವಾಗಿ ತೆರೆಗೆ ಬರುತ್ತಿದ್ದು, ಹೊಸಬರು ತಮ್ಮ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಆಟದಲ್ಲಿ ಸೋಲು ಯಾರಿಗೆ, ಗೆಲುವು ಯಾರಿಗೆ ಎಂಬುದನ್ನು ಯಾರೂ ಹೇಳಳಾಗದು. ಆದರೆ, ಪ್ರಯತ್ನವಂತೂ ನಡೆಯುತ್ತಿದೆ. ಒಳ್ಳೊಳ್ಳೆಯ ಸಿನಿಮಾಗಳು ತೆರೆಗೆ ಬರುತ್ತಿವೆ.

ಆರ್ ರವೀಂದ್ರ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಗೋಪಿಲೋಲ ಸಿನಿಮಾದ ಸ್ಪೆಷಲ್ ನಂಬರ್ ಬಿಡುಗಡೆಯಾಗಿದೆ. ಕಣ್ ಕಣ್ ಟಾಕಿಂಗ್, ಕೈ ಕೈ ಟಚ್ಚಿಂಗ್ ಎಂಬ ಹಾಡಿಗೆ ಕೇಶವ ಚಂದ್ರ ಸಾಹಿತ್ಯ ಬರೆದಿದ್ದು, ಮಿದುನ್ ಅಸೋಕನ್ ಚೆನ್ನೈ ಸಂಗೀತ ಒದಗಿಸಿದ್ದು, ಶಶಾಂಕ್ ಶೇಷಗಿರಿ ಹಾಗೂ ಗೀತಾ ಭಟ್ ಧ್ವನಿಯಾಗಿದ್ದಾರೆ. ಧನಂಜಯ್ ನೃತ್ಯ ಸಂಯೋಜನೆಗೆ ನಾಯಕ ಮಂಜುನಾಥ್ ಅರಸು ಹಾಗೂ ಜಾಹ್ನವಿ ಹೆಜ್ಜೆ ಹಾಕಿದ್ದಾರೆ. 

ಇದು ಎಂಥ ಲೋಕವಯ್ಯಾ ಅಂತಿರೋ ಅನಂತ್‌ ನಾಗ್: ಹಿರಿಯ ನಟ ಮತ್ತೇನ್ ಅಂದ್ರು ನೋಡಿ!

ಸಹಜ ಕೃಷಿ ಹಾಗೂ ಪ್ರೇಮ ಕಥಾ ಹಂದರ ಹೊಂದಿರುವ ಗೋಪಿಲೋಲ ಸಿನಿಮಾಗೆ ಎಸ್.ಆರ್.ಸನತ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸಹ ನಿರ್ಮಾಪಕರಾಗಿ ನಾಯಕ ಮಂಜುನಾಥ್ ಸಾಥ್ ಕೊಟ್ಟಿದ್ದಾರೆ‌. 

ಮಂಜುನಾಥ್ ಗೆ ಜೋಡಿಯಾಗಿ ನಿಮಿಷಾ ಕೆ ಚಂದ್ರ ಅಭಿನಯಿಸ್ತಿದ್ದು, ನಟಿ ಜಾಹ್ನವಿ, ಎಸ್.ನಾರಾಯಣ್, ಪದ್ಮಾ ವಸಂತಿ, ನಾಗೇಶ್ ಯಾದವ್, ಸ್ವಾತಿ, ಹಿರಿಯ ನಿರ್ದೇಶಕ  ಜೋಸೈಮನ್ ಸೇರಿದಂತೆ ತೆಲುಗು ನಟ ಸಪ್ತಗಿರಿ ತಾರಾಬಳಗದಲ್ಲಿದ್ದಾರೆ.

ಗೋಪಿಲೋಲ ಸಿನಿಮಾಗೆ ಕೇಶವಚಂದ್ರ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಕೆಎಂ ಪ್ರಕಾಶ್ ಸಂಕಲನ, ಮಿದುನ್ ಅಸೋಕನ್ ಚೆನ್ನೈ ಸಂಗೀತ, ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ, ಸೂರ್ಯಕಾಂತ್ ಎಚ್ ಕ್ಯಾಮೆರಾ ವರ್ಕ್, ಥ್ರಿಲ್ಲರ್ ಮಂಜು, ಜಾನಿ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಬಾಲಿವುಡ್ ಹಿರಿಯ ನಟನೊಂದಿಗೆ ಸಾಯಿ ಪಲ್ಲವಿ ಡೇಟಿಂಗ್ ಗಾಸಿಪ್‌; ಷ್ಯಡ್ಯಂತ್ರ ಯಾರದು? ಯಾಕೆ ಗೊತ್ತಾ?

ನಿರ್ದೇಶಕ ಆರ್ ರವೀಂದ್ರ ಈ ಹಿಂದೆ ಕನ್ನಡದಲ್ಲಿ ಛಲಗಾರ, ಸರ್ಕಾರಿ ಕೆಲಸ ದೇವರ ಕೆಲಸ, ಮನಸ್ಸಿನಾಟ, ಬಂಗಾರದ ಮಕ್ಕಳು, ಮರಾಠಿಯಲ್ಲಿ ಫೆಬ್ರವರಿ 14, ಮಿಷನ್ ಅಂಬ್ಯುಲೆನ್ಸ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇದೀಗ ಗೋಪಿಲೋಲ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಪ್ರಚಾರ ಕೆಲಸದಲ್ಲಿ ಬ್ಯುಸಿಯಾಗಿದೆ.

Latest Videos
Follow Us:
Download App:
  • android
  • ios