ಉಡುಪಿಯಿಂದ ಬರುವಾಗ ಗೋಲಿ ಸೋಡಾ ಕಂಡು ಮಗುವಿನಂತೆ ಹಠ ಮಾಡಿದ್ದ ವಿಷ್ಣುವರ್ಧನ್. "ಬೇಕು ಅಂದ್ರೆ ಬೇಕು" ಎಂದು ಪಟ್ಟು ಹಿಡಿದು, ಸಿಗದಿದ್ದರೆ ಬೇಸರಗೊಳ್ಳುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸರಳ ಸ್ವಭಾವದ, ಮುಗ್ಧ ಮನಸ್ಸಿನ ವಿಷ್ಣು ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದ ಮೇರು ನಟ, ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರು ಸಜ್ಜನ ಎಂಬ ಬಿರುದು ಪಡೆದವರು. ಅದರಲ್ಲೂ ಮಹಿಳೆಯರಿಗೆ ಗೌರವ ಕೊಡುವುದರಲ್ಲಿ ನಟ ವಿಷ್ಣು ಅವರು ಹೆಸರುವಾಸಿ. ಸ್ವಂತ ಹೆಂಡತಿಗೆ ಕೂಡ ಬಹುವಚನದಲ್ಲೆ ಸಂಬೋಧಿಸುತ್ತಿದ್ದ ವಿಷ್ಣುವರ್ಧನ್ ಅವರು ದೊಡ್ಡ ಸ್ಟಾರ್ ನಟರಾಗಿದ್ದರೂ ಸಾಕಷ್ಟು ಮುಗ್ಧತೆಯನ್ನು ಹೊಂದಿದ್ದರು. ಮುಗ್ಧತೆಯನ್ನು ಹೊಂದಿದ್ದರು ಎನ್ನುವುದಕ್ಕಿಂತ ಮಗುವಿನ ಮುಗ್ಧತೆ ಉಳಿಸಿಕೊಂಡಿದ್ದರು. ಅಂಥ ನಟ ವಿಷ್ಣುವರ್ಧನ್ ಅವರು ಒಮ್ಮೆ ಉಡುಪಿಯಿಂದ ಬರುವಾಗ ಚಿಕ್ಕಮಕ್ಕಳಂತೆ ಹಠ ಮಾಡಿದ್ದರಂತೆ!
ಹೌದು, ಅದನ್ನು ಸ್ವತಃ ನಟ ವಿಷ್ಣುವರ್ಧನ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಅವರು ಹೇಳಿದ್ದೇನು? ಇಲ್ಲಿದೆ ನೋಡಿ ಆ ಸ್ಟೋರಿ. 'ಉಡುಪಿನಲ್ಲಿ ಪರ್ಯಾಯ ಅಂತ ಆಗುತ್ತಲ್ಲಾ, ಅದನ್ನು ಮುಗಿಸಿಕೊಂಡು ಬರ್ತಾ ಇದ್ದೆ ನಮ್ ತಾಯಿ ಎಲ್ಲಾ ಇದ್ರು.. ಅಲ್ಲಿ ಆನ್ ದ ವೇ ಗೋಲಿ ಸೋಡಾ ನೋಡ್ದೆ.. ನೋಡ್ತಾ ಇದ್ದಂತೆ ನನ್ ವೆಹಿಕಲ್ ಮೂವ್ ಅಗ್ಬಿಟ್ಟಿತ್ತು.. ನಂಗೆ ಅದು ಬೇಕು ಅಂದೆ.. ನನ್ ಫ್ರೆಂಡ್, 'ಏನ್ ಸರ್ ನೀವೂ.., ಗೋಲಿ ಸೋಡಾಕ್ಕೆ ಇಷ್ಟು ಗಲಾಟೆ ಮಾಡೋದಾ' ಅಂದ.
ವಿಷ್ಣುವರ್ಧನ್-ಪ್ರೇಮಾ ಜೋಡಿಯ ಪರ್ವ ಮುಗ್ಗರಿಸಿತ್ತಾ? ಸೀಕ್ರೆಟ್ ಈಗ ಹೊರಬಿತ್ತು!
ನಾನು ಹೇಳ್ದೆ..' ನಂಗೆ ಬೇಕದು.., ಹುಡುಕ್ಬೇಕು ಈಗ..' ಹೇಳಿದ್ದೇ ತಡ, ಅವ್ರು ಫುಲ್ ಅಂಗಡಿನೇ ತಂದ್ಬಿಟ್ರು.. ಆಗ ಹೇಳಿದ್ರು, 'ಕುಡಿ ಎಷ್ಟು ಬೇಕು ಅಂತ..' ನಂಗೆ ಬೇಕು ಅಂತ ಅನ್ನಿಸಿದ್ರೆ ಮುಗಿತು, ನೋ ಕಾಸ್, ನೋ ಕ್ವಾಲಿಟಿ, ನಂಥಿಂಗ್.. ನಂಗೆ ಬೇಕು ಅಂದ್ರೆ ಬೇಕು ಅಷ್ಟೇ, ಯಾರೇನೇ ಅಂದ್ರೂ ನಂಗೆ ಬೇಕು ಅಂದ್ರೆ ಬೇಕು ಅಷ್ಟೇ.. ನಂಗೆ ಯಾವತ್ತು ಅಷ್ಟೇ, ಯಾರಾದ್ರೂ ಏನಾದ್ರೂ ಅಂದ್ರೆ, ಅಥವಾ ನಾನೇನಾದ್ರೂ ನೋಡಿದ್ರೆ, ಅದು ಎರಡು ನಿಮಿಷದಲ್ಲಿ ಬೇಕು.. ಸಿಕ್ಕಿಲ್ಲ ಅಂದ್ರೆ ನಂಗೆ ತುಂಬಾ ಅಪ್‌ಸೆಟ್ ಆಗ್ಬಿಡುತ್ತೆ.. 'ಎಂದಿದ್ದಾರೆ ನಟ, ಸಾಹಸಸಿಂಹ ಖ್ಯಾತಿಯ ವಿಷ್ಣುವರ್ಧನ್.
ಇಂದು ನಟ ವಿಷ್ಣುವರ್ಧನ್ ಅವರು ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳ ಮೂಲಕ ನಾವು ಅವರನ್ನು ಈಗಲೂ ಹಾಗೂ ಯಾವಾಗಲೂ ನೋಡಬಹುದು. ನಟಿ ಭಾರತಯವರನ್ನು ಮದುವೆಯಾಗಿದ್ದ ವಿಷ್ಣುವರ್ಧನ್ ಅವರು ಕೊನೆಯವರೆಗೂ ಸಿನಿಮಾವನ್ನೇ ಉಸಿರಾಡಿದ್ದವರು. ಬರೋಬ್ಬರಿ 200ಕ್ಕೂ ಮೀರಿ ಸಿನಿಮಾಗಳಲ್ಲಿ ನಟಿಸಿ, ಖ್ಯಾತಿಯ ಉತ್ತುಂಗಕ್ಕೆ ಏರಿದ್ದರೂ ಯಾವತ್ತೂ ತಮ್ಮ ಸರಳ ವ್ಯಕ್ತಿತ್ವ ಬಿಟ್ಟುಕೊಟ್ಟವರಲ್ಲ ನಟ ವಿಷ್ಣುವರ್ಧನ್. ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಸಿನಿಪ್ರೇಮಿಗಳಿಗೆ ನೀಡಿರುವ ವಿಷ್ಣುವರ್ಧನ್, ತಮ್ಮ ಕೊನೆಗಾಲದಲ್ಲಿ ಬಹಳಷ್ಟು ಧಾರ್ಮಿಕ ಹಾಗೂ ಆಧ್ಯಾತ್ಮಿಕತೆಯತ್ತ ವಾಲಿದ್ದರು.
ವಿಜಯಪುರದಲ್ಲಿ ಚಂದನ್ ಶೆಟ್ಟಿ ಮುಖ ರಂಗೇರುವಂತೆ ಮಾಡಿದ ಅಜ್ಜಿ ಹೇಳಿದ್ದಿಷ್ಟು!

