Asianet Suvarna News Asianet Suvarna News

ನೆಚ್ಚಿನ ಮನೆಯನ್ನು ಖಾಲಿ ಮಾಡಿದ ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್

ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ, ಸಿನಿಮಾನೇ ಉಸಿರು ಎಂದು ನಂಬಿರುವ, ಕನಸಿನಲ್ಲೂ ಸಿನಿಮಾದ ಬಗ್ಗೆಯೇ ಯೋಚಿಸುವ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಇದೀಗ ತಮ್ಮ ನೆಚ್ಚಿನ ಮನೆಯನ್ನು ಖಾಲಿ ಮಾಡಿದ್ದಾರೆ. 

sandalwood actor v ravichandran leave his favourite house gvd
Author
First Published Sep 24, 2022, 8:45 PM IST

ಬೆಂಗಳೂರು (ಸೆ.24): ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ, ಸಿನಿಮಾನೇ ಉಸಿರು ಎಂದು ನಂಬಿರುವ, ಕನಸಿನಲ್ಲೂ ಸಿನಿಮಾದ ಬಗ್ಗೆಯೇ ಯೋಚಿಸುವ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಇದೀಗ ತಮ್ಮ ನೆಚ್ಚಿನ ಮನೆಯನ್ನು ಖಾಲಿ ಮಾಡಿದ್ದಾರೆ. ಹೌದು! ರಾಜಾಜಿನಗರದಲ್ಲಿರೋ ಮನೆಯನ್ನು ಬಿಟ್ಟು ಹೊಸಕೆರೆ ಹಳ್ಳಿಯಲ್ಲಿರೋ ಮತ್ತೊಂದು ಮನೆಗೆ ರವಿಚಂದ್ರನ್ ಕುಟುಂಬ ತೆರಳಿದ್ದಾರೆ. 

ಮನೆ ಖಾಲಿ ಮಾಡಲು ಕಾರಣ ಏನೆಂದು ತಿಳಿದಿಲ್ಲ. ಆದರೆ ಮನೆ ಖಾಲಿ ಮಾಡಿದ್ದು, ರಿನೋವೇಷನ್ ಮಾಡಿಸೋದಕ್ಕೆಂದು ಆಪ್ತ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೆ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ರವಿಚಂದ್ರನ್ ಮದುವೆಯಾಗಿದೆ.  ಹೀಗಾಗಿ ಮನೆ ರೂಂಗಳನ್ನ ರಿನೋವೇಷನ್ ಮಾಡಿಸೋಕೆ ಅಂತ ಬದಲಾಯಿದ್ದಾರಂತೆ. ಮಾತ್ರವಲ್ಲದೇ ಇದರ ಜೊತೆ ರಾಜಾಜಿನಗರ ಮನೆಯಲ್ಲಿ ವಾಸ್ತು ಸರಿ ಇಲ್ಲ ಹೀಗಾಗಿ ಸ್ವಲ್ಪ ದಿನದ ಮಟ್ಟಿಗೆ ಮನೆ ಬಿಡಿ ಎಂದು ಆಪ್ತರು ಹೇಳಿದ್ರಂತೆ. ಈ ಎಲ್ಲಾ ಕಾರಣದಿಂದ ಸದ್ಯದ ಮಟ್ಟಿಗೆ ರಾಜಾಜಿನಗರದ ಮನೆಯನ್ನು ರವಿಚಂದ್ರನ್ ಖಾಲಿ ಮಾಡಿದ್ದಾರೆ. 

ಇನ್ನು ರಾಜಾಜಿನಗರದಲ್ಲಿರೋ ಮನೆಯಲ್ಲಿ ಸಕ್ಸಸ್ ಜೊತೆ ಫೆಲ್ಯೂರ್ ಅನ್ನೂ ಕಂಡಿರೋ ರವಿಚಂದ್ರನ್, ಅದೇ ಮನೆಯಲ್ಲೇ ಇದ್ದುಕೊಂಡು ಮಗಳು ಹಾಗೂ ಮಗನ ಮದುವೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸಿನಿಮಾ ಸಕ್ಸಸ್ ಸಿಗುತ್ತಿರಲಿಲ್ಲ. ಹಾಗೂ ಸಿನಿಮಾಗಳ ಶೂಟಿಂಗ್ ಅನ್ನ ರಾಜಾಜಿನಗರದ ಮನೆಯಲ್ಲೇ ರವಿಚಂದ್ರನ್ ಮಾಡುತ್ತಿದ್ದರು. ಆದರೆ  ಈಗ ದಿಢೀರ್ ಅಂತ ಮನೆ ಖಾಲಿ ಮಾಡಿ ಹೊಸಕೆರೆ ಹಳ್ಳಿಯಲ್ಲಿ ನೆಲೆಸಿದ್ದಾರೆ.

ಅದ್ಧೂರಿಯಾಗಿತ್ತು ರವಿಚಂದ್ರನ್ ಪುತ್ರ ಮನೋರಂಜನ್‌ ಆರತಕ್ಷತೆ: ಫೋಟೋಗಳಿವು!

ರವಿಚಂದ್ರನ್ ಅವರಿಗೆ ಮೂವರು ಮಕ್ಕಳು. ಒಬ್ಬಳು ಮಗಳು ಮತ್ತು ಇಬ್ಬರು ಗಂಡು ಮಕ್ಕಳು.  2019 ಮೇ ತಿಂಗಳಲ್ಲಿ ರವಿಚಂದ್ರನ್ ಪುತ್ರಿ ಗೀತಾಂಜಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದ್ದೂರಿಯಾಗಿ ಮದುವೆ ನೆರವೇರಿತ್ತು. ಚಿತ್ರರಂಗದ, ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇದೀಗ ಮಗನ ಮದುಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಅಂದಹಾಗೆ ಕ್ರೇಜಿಸ್ಟಾರ್‌ ಇಬ್ಬರು ಗಂಡು ಮಕ್ಕಳು ಸಹ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ.

Follow Us:
Download App:
  • android
  • ios