ಬೆಂಗಳೂರು(ಏ. 07) ಮದಗಜ ಶೂಟಿಂಗ್ ವೇಳೆ ನಟ ಶ್ರೀ ಮುರುಳಿಗೆ ಏಟಾಗಿದೆ. ಚಿಕಿತ್ಸೆ ನಂತರ  ಹದಿನೈದು ದಿನಗಳ ಬೆಡ್ ರೆಸ್ಟ್  ಸೂಚಿಸಲಾಗಿದೆ.

ಮದಗಜ ಮಹೇಶ್ ನಿರ್ದೇಶನದ ಚಿತ್ರ. ಮದಗಜ ಶೂಟಿಂಗ್ ವೇಳೆ ಶ್ರೀಮುರುಳಿ ಗಾಯವಾಗಿದೆ. ಆಕ್ಷನ್ ಸೀನ್ ವೇಳೆ ಕಾಲಿಗೆ ಬಲವಾಗಿ ಪೆಟ್ಟಾಗಿದೆ.

ಉಪ್ಪಿ ತಲೆಗೆ ಕಬ್ಜ ಶೂಟಿಂಗ್ ವೇಳೆ ಗಾಯ.. ರಾಡ್ ನಿಂದ ಏಟು

ಚಂದ್ರ ಚಕೋರಿ ಮೂಲಕ ಹೆಸರು ಮಾಡಿದ ಶ್ರೀಮುರುಳಿ ಅವರಿಗೆ ಉಗ್ರಂ ಮತ್ತೊಂದು ಪುನರ್ ಜನ್ಮ ನೀಡಿತ್ತು. ರಥಾವರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಜತೆ ಹೆಜ್ಜೆ ಹಾಕಿದ್ದರು . ಕಬ್ಜ ಚಿತ್ರದ ಶೂಟಿಂಗ್ ವೇಳೆ ರಿಯಲ್ ಸ್ಟಾರ್ ಉಪೇಂದ್ರ ಅವರಿಗೂ ಏಟಾಗಿತ್ತು. ಕೊಂಚದರಲ್ಲಿ ಬುದ್ಧಿವಂತ ಪಾರಾಗಿದ್ದರು.