ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ನೆರವಾಗಲೆಂದು ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಖಾತೆಗೆ ನಟ ಪುನೀತ್‌ ರಾಜ್‌ಕುಮಾರ್‌ ಅವರು 10 ಲಕ್ಷ ರುಪಾಯಿಗಳನ್ನು ನೀಡಿದ್ದಾರೆ.

ಶನಿವಾರ ಹಣ ನೀಡಿದ್ದು, ಪುನೀತ್‌ರಾಜ್‌ಕುಮಾರ್‌ ಅವರ ಈ ಸಹಾಯ ಹಸ್ತಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ಹಾಗೂ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್‌ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ನಟ ಪ್ರಥಮ್ ಕಾರ್ಯ ಮೆಚ್ಚಿ 130 ಮೂಟೆ ಅಗತ್ಯ ವಸ್ತು ಕಳುಹಿಸಿದ MLA ಸಿ.ಎಸ್ ಪುಟ್ಟರಾಜು!..

ಇವರ ಜತೆಗೆ ಜತೆಗೆ ಮಾತನಾಡಿದ ನಂತರ ಪುನೀತ್‌ರಾಜ್‌ಕುಮಾರ್‌ ಹತ್ತು ಲಕ್ಷ ರುಪಾಯಿಗಳನ್ನು ಒಕ್ಕೂಟದ ಖಾತೆಗೆ ವರ್ಗಾವಣೆ ಮಾಡಿದ್ದು, ಈ ಹಣವನ್ನು ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ನೀಡುವಂತೆ ಸೂಚಿಸಿದ್ದಾರೆ.

ಈಗಾಗಲೇ ಸ್ಯಾಂಡಲ್‌ವುಡ್ ಸ್ಟಾರ್ ನಟ, ನಟಿಯರು ಕೊರೋದಾದಿಂದ ತೊಂದರೆ ಎದುರಿಸುತ್ತಿರುವ ಜನ ಸಮಾನ್ಯರಿಗೆ, ಸಿನಿ ಕಾರ್ಮಿಕರಿಗೆ ನೆರವಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಯಶ್ ಅವರೂ ಸಿನಿ ಕಾರ್ಮಿಕರಿಗೆ 1.5 ಕೋಟಿ ರೂಪಾಯಿ ನೆರವು.