ಕೊರೋನಾ ಹೆಚ್ಚುತ್ತಿರುವ ಸಂದರ್ಭವೇ ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ವ್ಯಾಕ್ಸೀನ್ ಪಡೆದಿದ್ದಾರೆ. ಕೊರೋನಾ ವ್ಯಾಕ್ಸೀನ್‌ನ ಫಸ್ಟ್ ಡೋಸ್ ಪಡೆದ ನಟ ಇದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

ನಾನು ಕೊರೋನಾ ವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದೇನೆ. ನೀವೂ 45 ವರ್ಷ ಮೇಲ್ಪಟ್ಟವರಾಗಿದ್ದರೆ ವ್ಯಾಕ್ಸಿನೇಷನ್ ಪಡ್ಕೊಳ್ಳಿ ಎಂದು ಫೋಟೋ ಜೊತೆ ಕೇಳಿಕೊಂಡಿದ್ದಾರೆ ನಟ.

ಬಾಡಿ ಶೇಮಿಂಗ್ ವಿರುದ್ಧ ದನಿ ಎತ್ತಿದ ಶೀತಲ್ ಶೆಟ್ಟಿ

ಯುವರತ್ನ ಸಿನಿಮಾ ರಿಲೀಸ್ ಸಂದರ್ಭವೇ ಕೊರೋನಾ ಕೂಡಾ ಹೆಚ್ಚಾಗಿದ್ದು, ಸಿನಿಮಾ ಪ್ರದರ್ಶನಕ್ಕೂ ತೊಂದರೆಯಾಗಿತ್ತು. ನಟ ಸಿಎಂ ಅವರನ್ನು ಭೇಟಿಯಾಗಿ ಕಾಲಾವಕಾಶ ನೀಡುವಂತೆ ಕೇಳಿಕೊಂಡಿದ್ದರು.

ಸದ್ಯ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಭಾರತದಲ್ಲಿ ಒಂದು ದಿನದ ಕೊರೋನಾ ಸಂಖ್ಯೆ 1 ಲಕ್ಷ ದಾಟಿದೆ. ಹಾಗೆಯೇ ಸಾವಿನ ಸಂಖ್ಯೆಯೂ ಹೆಚ್ಚಾಗಿರುವುದು ಆತಂಕ ಹೆಚ್ಚಿಸಿದೆ.