ಸಾಹಸ ಸಿಂಹ ಡಾ ವಿಷ್ಣುವರ್ಧನ್‌ ಅಭಿಮಾನಿಗಳು ಜತೆಗೂಡಿ ಕಿಚ್ಚ ಸುದೀಪ್‌ ಸಾಂಸ್ಕೃತಿಕ ಪರಿಷತ್‌ ವತಿಯಿಂದ ‘ದೊಡ್ಮನುಷ್ಯ’ ಹೆಸರಿನಲ್ಲಿ 2021ರ ಹೊಸ ಕ್ಯಾಲೆಂಡರ್‌ ತಂದಿದ್ದಾರೆ.

ವಿಷ್ಣುದಾದಾ ಹಾಗೂ ಸುದೀಪ್‌ ಇಬ್ಬರ ಆಕರ್ಷಕ ಫೋಟೋಗಳನ್ನು ಒಳಗೊಂಡ ಈ ಕ್ಯಾಲೆಂಡರ್‌ ಅನ್ನು ನಿರ್ಮಾಪಕ ಸೂರಪ್ಪ ಬಾಬು ಬಿಡುಗಡೆ ಮಾಡಿದರು. ‘ಕ್ಯಾಲೆಂಡರ್‌ ತುಂಬಾ ಆಕರ್ಷಕವಾಗಿ ಮೂಡಿ ಬಂದಿದೆ.

ಜನಮೆಚ್ಚಿದ ಬಳೆಪೇಟೆ ಟೀಸರ್‌: ಭೂಗತ ಜಗತ್ತಿನ ಕಥೆ

ಅಭಿಮಾನಿಗಳೇ ಸೇರಿ ಮಾಡಿರುವುದರಿಂದ ಇದರ ಘತನೆ ಮತ್ತಷ್ಟುಹೆಚ್ಚಾಗಿದೆ. ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಬಹುದಾದ ಕಲರ್‌ಫುಲ್‌ ಕ್ಯಾಲೆಂಡರ್‌ ಇದಾಗಿದೆ’ ಎಂದು ಅಭಿಮಾನಿಗಳ ಈ ಸಾಹಸಕ್ಕೆ ಸೂರಪ್ಪ ಬಾಬು ಮೆಚ್ಚುಗೆ ಸೂಚಿಸಿದರು.

ಇತ್ತೀಚೆಗಷ್ಟೇ ಭರ್ಜರಿಯಾಗಿ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ದುಬೈನ ಬುರ್ಜ್ ಖಲೀಫಾದಲ್ಲಿ ಬಿಡುಗಡೆಯಾಗಿತ್ತು. ಕಾರ್ಯಕ್ರಮದ ವಿಡಿಯೋ, ಫೋಟೋಗಳು ವೈರಲ್ ಆಗಿವೆ.