Asianet Suvarna News Asianet Suvarna News

'ವಿಮರ್ಶೆ ಮಾಡ್ತೇವೆ..ಗಿಫ್ಟ್ ಕೊಡಿ ಅಂತಾರೆ' ಯೂಟ್ಯೂಬರ್ಸ್ ವಿರುದ್ಧ ಡೆಡ್ಲಿ ಗುಡುಗು

ಯೂಟ್ಯೂಬ್ ನಲ್ಲಿ ಕೆಲವರು ಎಲ್ಲಾ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ವಿಮರ್ಶೆ ನೀಡ್ತಿದ್ದಾರೆ/ ಅವರಿಗೆ ವಿಮರ್ಶೆ ಕೊಡೋ ಹಕ್ಕೂ ಸಹ ಇಲ್ಲ ಇದೊಂದು ಯೂಟ್ಯೂಬ್ ಲಿ ಮಾಫಿಯಾ ಆಗ್ಬಿಟ್ಟಿದೆ/ ಹೀಗಾದ್ರೆ ನಿರ್ಮಾಪಕರ ಗತಿ ಏನು? ಕೆಟ್ಟ ವಿಮರ್ಶೆ ಮಾಡುವ ಯೂಟ್ಯೂಬರ್ ಗಳ ವಿರುದ್ಧ ಆದಿತ್ಯ ಗರಂ

Sandalwood Actor Aditya complained about youtubers in  Karnataka film chamber mah
Author
Bengaluru, First Published Mar 23, 2021, 7:17 PM IST

ಬೆಂಗಳೂರು(ಮಾ. 23)  ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ಡೆಡ್ಲಿ ಆದಿತ್ಯ ಗುಡುಗಿದ್ದಾರೆ.  ಮುಂದುವರೆದ ಅಧ್ಯಾಯ ಚಿತ್ರದ ಬಗ್ಗೆ ಕಂಡ ಕಂಡ ಹಾಗೆ ವಿಮರ್ಶೆ ನೀಡಲಾಗಿದೆ ಎನ್ನುವುದು ಅವರ ಅಳಲು.

ಮಾರ್ಚ್19ಕ್ಕೆ ರಿಲೀಸ್ ಆಗಿರೋ ಮುಂದುವರೆದ ಅಧ್ಯಾಯ ಟ್ರೈಲರ್ ಹಾಗೂ ಕಂಟೆಂಟ್ ನಿಂದ ಗಮನ ಸೆಳೆದಿತ್ತು . ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ  ಮಾಡಲಾಗಿದೆ ಎಂದು ನಟ ಆದಿತ್ಯ ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ. ಲಿಖಿತ ರೂಪದಲ್ಲಿ ದೂರು ನೀಡಿದ ಆದಿತ್ಯ  ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಚಿತ್ರತಂಡವೂ ಜತೆಗಿತ್ತು.

ಮುಂದುವರೆದ ಅಧ್ಯಾಯ ಸಿನಿಮಾ ಹೇಗಿದೆ; ವಿಮರ್ಶೆ

ಯೂಟ್ಯೂಬ್ ನಲ್ಲಿ ಕೆಲವರು ಎಲ್ಲಾ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ವಿಮರ್ಶೆ ನೀಡ್ತಿದ್ದಾರೆ.  ಅವರು ಯಾರೂ  ರೆಪ್ಯೂಟೆಡ್ ಜರ್ನಲಿಸ್ಟ್ ಅಲ್ಲ. ಅವರಿಗೆ ವಿಮರ್ಶೆ ಕೊಡೋ ಹಕ್ಕೂ ಸಹ ಇಲ್ಲ. ಇದೊಂದು ಯೂಟ್ಯೂಬ್ ಲಿ ಮಾಫಿಯಾ ಆಗ್ಬಿಟ್ಟಿದೆ. ಹೀಗಾದ್ರೆ ನಿರ್ಮಾಪಕರ ಗತಿ ಏನು? ಯೂಟ್ಯೂಬ್ ವಿಮರ್ಶೆ ಮಾಡೋದ್ರಿಂದ ಕನ್ನಡ‌ಸಿನಿಮಾಗೆ ಸಮಸ್ಯೆ ಆಗಿದೆ  ಎಂದು ಆದಿತ್ಯ ವಾಸ್ತವ ಮುಂದಿಟ್ಟರು.

ನಮ್ಮ  ಸಿನಿಮಾ‌ ಮಾತ್ರವಲ್ಲ ಸಾಕಷ್ಟು ಸಿನಿಮಾಗೆ ಹೀಗೆ ಆಗಿದೆ  ಸಿನಿಮಾ‌ ರಿಲೀಸ್ ಗೂ ಮುಂಚೆ ಕಾಲ್ ಮಾಡಿ ವಿಮರ್ಶೆ ಮಾಡ್ತಿವಿ ಗಿಫ್ಟ್ ಸಿಗುತ್ತಾ ಅಂತ ಕೇಳಿದ್ರು ಆಗಲ್ಲ  ಅಂದಿದ್ವಿ ಈಗ ನೆಗೆಟಿವ್ ಮಾಡಿದ್ದಾರೆ. ಜೋಕರ್ ಮುಖ ಹಾಕೊಂಡು ವಿಮರ್ಶೆ ಮಾಡುತ್ತಾರೆ. ಅವನಿಗೆ ಮುಖ ತೋರಿಸೋ ಧೈರ್ಯ ಇಲ್ಲ ಎಂದು  ಕೆಂಡ ಕಾರಿದರು.

ಮುಂದುವರೆದ ಅಧ್ಯಾಯ ಸಿನಿಮಾ ನಿರ್ದೇಶಕ ಬಾಲು ಚಂದ್ರಶೇಖರ್, ನಟ ಸಂದೀಪ್ ಕುಮಾರ್, ನಿರ್ಮಾಪಕರು ಹಾಗೂ ಚಿತ್ರತಂಡದ ಜತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ ನಾಯಕ ಆದಿತ್ಯ, ಆರು ಮಂದಿ ಯೂಟ್ಯೂಬರ್​ಗಳ ಮೇಲೆ ದೂರು ಸಲ್ಲಿಸಿದ್ದಾರೆ. 

Follow Us:
Download App:
  • android
  • ios