ಸಂಯುಕ್ತಾ ಹೆಗಡೆ ಅವರ ಶರ್ಟ್​ನ ಚಿತ್ರದ ಮೇಲೆ ಹಾಸ್ಯಮಯ ಪೋಸ್ಟ್​ ವೈರಲ್​ ಆಗಿದೆ. ಬಟನ್​ ತೆರೆದಿದ್ದರಿಂದ ಚಿತ್ರದಲ್ಲಿನ ಆನೆ ಸವಾರಿ ಮಾಡುವ ಬಾಲಕನ ಜೀವ ಉಳಿದಿದೆ ಎಂದು "ಅನ್​ನೋನ್​ ಅಡ್ಡಾ" ಪೇಜ್​ ತಮಾಷೆ ಮಾಡಿದೆ. ಈ ಪೋಸ್ಟ್​ಗೆ ನೆಟ್ಟಿಗರಿಂದ ರಂಜನೀಯ ಪ್ರತಿಕ್ರಿಯೆಗಳು ಬಂದಿವೆ.

ಇಂದು ಸೋಷಿಯಲ್​ ಮೀಡಿಯಾ ಬೆಳೆದಂತೆ, ಹಲವರಿಗೆ ಇದು ಉದ್ಯೋಗದ ಮಾರ್ಗವನ್ನು ತೋರಿಸಿಕೊಟ್ಟಿದ್ದರೆ, ಮತ್ತೆ ಕೆಲವರಿಗೆ ಮೀಮ್ಸ್​, ಜೋಕ್ಸ್​ಗಳಿಂದ ಜನರನ್ನು ನಕ್ಕುನಗಿಸುವ ದಾರಿಯನ್ನೂ ತೋರಿಸಿದೆ. ಸುಮ್ಮನೇ ಬೇಸರವಾದಾಗ ಮೊಬೈಲ್​ ಸ್ಕ್ರೋಲ್​ ಮಾಡುತ್ತಾ ಹೋದರೆ ಅಲ್ಲಿ ಕಾಣುವ ಮೀಮ್ಸ್​, ಜೋಕ್ಸ್​ಗಳು ಮನಸ್ಸನ್ನು ನಿರಾಳ ಮಾಡುವುದಂತೂ ಖಂಡಿತ. ಕೆಲವೊಂದು ರೀಲ್ಸ್​ಗಳು ನಮ್ಮನ್ನು ಬಿದ್ದೂ ಬಿದ್ದೂ ನಗುವಂತೆ ಮಾಡಿದರೆ, ಮತ್ತೆ ಕೆಲವರು ಹಾಕುವ ಪೋಸ್ಟ್​, ಕಮೆಂಟ್ಸ್​ ನೋಡಿ ಅಬ್ಬಾ ಇವರದ್ದು ಅದೆಂಥ ತಲೆ, ಇಂಥ ಐಡಿಯಾ ಎಲ್ಲಿಂದ ಬರತ್ತಪ್ಪಾ ಎಂದೂ ಎನ್ನಿಸುವುದು ಉಂಟು.

ಈಗ ಅಂಥದ್ದೇ ಒಂದು ಪೋಸ್ಟ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದರಲ್ಲಿ ನಟಿ ಸಂಯುಕ್ತಾ ಹೆಗಡೆ ಒಂದು ಡ್ರೆಸ್​ ಹಾಕಿಕೊಂಡಿದ್ದಾರೆ. ಅದರ ಮೇಲಿನ ಬಟನ್​ ಓಪನ್​ ಆಗಿದೆ. ಆ ಷರ್ಟ್ ಮೇಲೆ ಆನೆಯ ಮೇಲೆ ಬಾಲಕನೊಬ್ಬ ಕುಳಿತುಕೊಂಡಿರುವ ದೃಶ್ಯವಿದೆ. ಹಿಂದುಗಡೆಯಿಂದ ಒಬ್ಬ ಶೂಟ್​ ಮಾಡುತ್ತಿದ್ದಾನೆ. ಷರ್ಟ್​ ಬಟನ್​ ಬಿಚ್ಚಿದ್ದರಿಂದ ಶೂಟ್​ ಮಾಡುತ್ತಿರುವ ವ್ಯಕ್ತಿ ಒಂದು ಕಡೆ, ಆನೆಯ ಎದುರಿಗೆ ಕುಳಿತಿರುವ ಬಾಲಕ ಮತ್ತೊಂದು ಕಡೆ ಇದ್ದಾನೆ. ಇದನ್ನು ನೋಡಿ ಬಹುಶಃ ಎಲ್ಲರೂ ಸುಮ್ಮನೇ ಇರುತ್ತಿದ್ದರೋ ಏನೋ. ಆದರೆ ಅನ್​ನೋನ್​ ಅಡ್ಡಾ ಎನ್ನುವ ಪೇಜ್​ನಲ್ಲಿ ಈ ಷರ್ಟ್​ ಇಟ್ಟುಕೊಂಡು ಜೋಕ್​ ಮಾಡಲಾಗಿದೆ. ಗುಂಡಿ ಹಾಕದೇ ಜೀವ ಉಳಿಸಿದಾಕೆ ಎಂದು ಬರೆಯಲಾಗಿದೆ.

ಮಂಚದ ಮೇಲೇರಿದ ನಿವೇದಿತಾ ಇದೇನಿದು ಅವತಾರ? ಎದುರಿಗಿರೋ ವ್ಯಕ್ತಿ ಮೇಲೆ ನೆಟ್ಟಿಗರ ಕಣ್ಣು!

ಅಷ್ಟಕ್ಕೂ ಈ ಫೋಟೋ ಅನ್ನು ಆರಂಭದಲ್ಲಿ ಸಂಯುಕ್ತಾ ಅವರು ಶೇರ್​ ಮಾಡಿದ್ದಾರೆ. ಅದಕ್ಕೆ ದಿಲೀಪ್​ವಿಕೆ ಎನ್ನುವವರು ಈ ರೀತಿ ರಿಪ್ಲೈ ಮಾಡಿದ್ದಾರೆ. ಬಾಲಕ ಸಾಯುವುದರಿಂದ ನೀವು ತಪ್ಪಿಸಿದ್ದೀರಿ ಎಂದು. ಅದನ್ನೇ ಈಗ ಅನ್​ನೋನ್​ ಅಡ್ಡಾದಲ್ಲಿ ಶೇರ್​ ಮಾಡಲಾಗಿದೆ. ಇದಕ್ಕೆ ನಕ್ಕು ನಗಿಸುವ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ. 

ನಿನ್ನೊಂದು ಗುಂಡಿ ತೆಗೆದಿದ್ದರೆ ಆನೆ ಸತ್ತೋಗಿರೋದು ಎಂದು ಒಬ್ಬರು ಹೇಳಿದ್ರೆ, ಇನ್ನೊಂದ್ ಗುಂಡಿ ತೆಗ್ದಿದ್ರೆ ಆನೆ ನೆ ಎರಡು ಭಾಗ ಮಾಡ್ಬೋದಿತ್ತು, ಮುಂದೆ ಕುಳಿತಿರೋ ಹುಡುಗನನ್ನು ಮನೆಗೆ ಕಳ್ಸಿ ಹಿಂದೆ ಶೂಟ್​ ಮಾಡ್ತಿರೋರನ್ನು ಹಿಡ್ಕೋಬಹುದಿತ್ತು ಎಂದಿದ್ದಾರೆ. ಮತ್ತೊಬ್ಬ ಕಮೆಂಟಿಗ ಬಹುಶಃ ಸಂಯುಕ್ತಾ UI ಮೂವಿ ನೋಡಿರಬೇಕು ಎಂದಿದ್ದರೆ, ಇಂಥದ್ದೆಲ್ಲಾ ತಲೆ ಎಲ್ಲಿಂದ ಬರ್ತದೆ ಗುರೂ ಎಂದು ಕೆಲವರು ಪ್ರಶ್ನಿಸಿದ್ದಾರೆ. ನಿಮ್ಮ ಕಾಲನ್ನು ಪ್ಲೀಸ್​ ಕೊಡಿ, ಜೆರಾಕ್ಸ್​ ಮಾಡಿ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಮತ್ತೋರ್ವ ಕಮೆಂಟಿಗ ಕೇಳಿದ್ದಾರೆ. 

ಪಾರದರ್ಶಕ ಡ್ರೆಸ್​ ತೊಟ್ಟು ಸೂರ್ಯನ ಬೆಳಕಲ್ಲಿ ನಿವೇದಿತಾ ರೀಲ್ಸ್​: ನೆಟ್ಟಿಗರು ಸುಮ್ನೆ ಇರ್ತಾರಾ?

View post on Instagram