ರಾಕಿ ಅಂದ್ರೆ ಬೆಂಕಿ, ದುಶ್ಮನ್ ಅಂದ್ರೆ ಪೆಟ್ರೋಲ್; ಬೇರೆಯದೇ ಆ್ಯಂಗಲ್‌ನಲ್ಲಿ ಅರ್ಥ ಹೇಳ್ಬಿಟ್ರು ಯಶ್!
ತಮ್ಮದೇ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಬರುವ ಡೈಲಾಗ್ ಒಂದನ್ನು ಯಶ್ ನೆನಪಿಸಿಕೊಂಡು ಮಾತನಾಡಿದ್ದಾರೆ. 'ಕೆಜಿಎಫ್ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. ರಾಕಿ ಅಂದ್ರೆ ಅದು ಬೆಂಕಿ, ದುಶ್ಮನ್ ಅಂದ್ರೆ ಪೆಟ್ರೋಲ್..
ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಸಂದರ್ಶನವೊಂದರಲ್ಲಿ ಮಾತನಾಡುತ್ತ ತುಂಬಾ ಮುಖ್ಯವಾದ ಸಂಗತಿಯೊಂದನ್ನು ಹೇಳಿದ್ದಾರೆ. ಅದು ಅವರದೇ ಸಿನಿಮಾದ ಡೈಲಾಗ್‌ಗೆ ಸಂಬಂಧಿಸಿದ್ದೇ ಆಗಿದ್ದರೂ ಅದು ಸಿನಿಮಾ ಹೊರತಾಗಿಯೂ ತುಂಬಾ ಅರ್ಥಪೂರ್ಣವಾಗಿದೆ. ಆ ಸಂಗತಿಯನ್ನು ಕೆಜಿಎಫ್ (KGF) ಸಿನಿಮಾ ನಟ ಯಶ್ ಹೇಳಿದ್ದಾರೆ. ಹೊರಜಗತ್ತಿಗೆ ಯಶ್ ಅವರ ಮಾತುಗಳನ್ನು ಅನ್ವಯಿಸಿ ನೋಡಿದರೆ ಅದು ಸಿನಿಮಾಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನಬಹುದು. ಅದೇ ಅರ್ಥದಲ್ಲಿ ನಟ ಯಶ್ ಮಾತನಾಡಿದ್ದಾರೆ.
ತಮ್ಮದೇ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಬರುವ ಡೈಲಾಗ್ ಒಂದನ್ನು ಯಶ್ ನೆನಪಿಸಿಕೊಂಡು ಮಾತನಾಡಿದ್ದಾರೆ. 'ಕೆಜಿಎಫ್ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. ರಾಕಿ ಅಂದ್ರೆ ಅದು ಬೆಂಕಿ, ದುಶ್ಮನ್ ಅಂದ್ರೆ ಪೆಟ್ರೋಲ್. ಪೆಟ್ರೋಲ್ ಎಷ್ಟು ಹೆಚ್ಚು ಹಾಕ್ತೀರೋ ಅಷ್ಟು ಬೆಂಕಿ ಜೋರಾಗಿ ಉರಿಯುತ್ತೆ.. ಈ ಮಾತು ಅಕ್ಷರಶಃ ನಿಜ ಅನ್ನೋದು ಕೆಜಿಎಫ್ ಸಿನಿಮಾದ 'ಚಾಪ್ಟರ್-2'ದಲ್ಲಿ ಮನವರಿಕೆ ಆಗುತ್ತದೆ.
ಅನುಷ್ಕಾ ಶರ್ಮಾ ಕೊಟ್ಟ ಬಿಗ್ ಫ್ಲಾಪ್‌ನಿಂದ ಕಂಗಾಲಾಗಿ ನಟನೆಯನ್ನೇ ಬಿಟ್ಟ ವಿಲನ್ ಪಾತ್ರಧಾರಿ!
ಹೆಚ್ಚು ಬಲಶಾಲಿಯಾಗಿರುವ ಪಾತ್ರಗಳು ಕೆಜಿಎಫ್ 2 ದಲ್ಲಿ ನಾಯಕ ರಾಕಿಗೆ ತೊಂದರೆ ಕೊಡಲು ಶುರು ಮಾಡಿದಾಗ ಸಹಜವಾಗಿಯೇ ರಾಕಿ ಇನ್ನೂ ಹೆಚ್ಚು ಶಕ್ತಿ ಪ್ರದರ್ಶನ ಮಾಡುತ್ತಾನೆ, ಹೆಚ್ಚು ಉಗ್ರ ಸ್ವರೂಪ ತಾಳುತ್ತಾನೆ. ಅದನ್ನು ನೋಡಿದವರು ನಿಜವಾಗಿಯೂ ಹುಚ್ಚರಾಗುತ್ತಾರೆ' ಎಂದಿದ್ದಾರೆ ನಟ ಯಶ್. ತಮ್ಮ ನಟನೆಯ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ ಚಿತ್ರದಲ್ಲಿ ಬರುವ ಡೈಲಾಗ್‌ಗಳು ಹೇಗೆ ಸಮಯೋಚಿತವಾಗಿವೆ ಎಂಬುದನ್ನು ಕೂಡ ನಟ ಯಶ್ ಈ ಮೂಲಕ ಹೇಳಿದ್ದಾರೆ.
ಗೌರಿ ಖಾನ್ ಜತೆ ಬೆಂಗಳೂರಿಗೆ ಬಂದಿದ್ದ ಶಾರುಖ್ ಖಾನ್ ಹಳೆಯ ಫೋಟೋ 'ಚಮತ್ಕಾರ' ಮಾಡ್ತಿದೆ ನೋಡ್ರೀ!
ನಿಜವಾಗಿಯೂ ನೋಡಿದರೆ, ಯಾವುದೇ ಸಿನಿಮಾದಲ್ಲಿ ನಾಯಕ ಸ್ಟ್ರಾಂಗ್ ಆಗುವುದು, ಆಗೋ ಅಗತ್ಯ ಬೀಳುವುದು ವಿಲನ್ ಹೆಚ್ಚು ಸ್ಟ್ರಾಂಗ್ ಆದಾಗ. ಅದು ಕೆಜಿಎಫ್ ನಲ್ಲಿ ಕೂಡ ಹಾಗೇ ಆಗಿದೆ. ಆದರೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸರಣಿ ಚಿತ್ರಗಳು ಮುಖ್ಯವಾಗಿ ಔಟ್ ಅಂಡ್ ಔಟ್ ಆಕ್ಷನ್ ಚಿತ್ರಗಳು ಆಗಿರುವುದರಿಂದ ಇಲ್ಲಿ ವಿಲನ್ ಮಾಮೂಲಿಗಿಂತ ಹೆಚ್ಚು ಶಕ್ತಿಯುತವಾಗಿದ್ದಾನೆ. ಈ ಕಾರಣಕ್ಕೆ ಹೀರೋ ಪಾತ್ರವನ್ನು ಅದಕ್ಕಿಂತ ಹೆಚ್ಚು ಶಕ್ತಿಯುತವಾಗಿ ಕಟ್ಟಿಕೊಡಲಾಗಿದೆ. ಈ ಸೀಕ್ರೆಟ್ ಅನ್ನು ಯಶ್ ರಿವೀಲ್ ಮಾಡಿದ್ದಾರೆ.
ಅಲ್ಲು ಅರ್ಜುನ್ ಡಾನ್ಸಿಂಗ್ ಸ್ಕಿಲ್ಸ್ ಕದಿಯುತ್ತೇನೆ; ರಶ್ಮಿಕಾ ಮಂದಣ್ಣ ಮಾತಿಗೆ ಆ್ಯಂಕರ್ ಕಕ್ಕಾಬಿಕ್ಕಿ!