Asianet Suvarna News Asianet Suvarna News

Kantara ಪ್ರೀಕ್ವೆಲ್ ಶೂಟಿಂಗ್ ಬಗ್ಗೆ ರಿಷಬ್‌ಗೆ ಟೆನ್ಷನ್: ಮಂಗಳೂರಿನಲ್ಲಿ ಮಾಡೋಕಾಗ್ತಿಲ್ಲಂತೆ 'ಕಾಂತಾರ 2' ಚಿತ್ರೀಕರಣ!

ರಿಷಬ್ಗೆ ಹೊಸ ಟೆನ್ಷನ್ ಅಂದ್ರೆ ಶೂಟಿಂಗ್ ಮಾಡೋ ಜಾಗದಲ್ಲಿ ಎದುರಾಗ್ತಿರೋ ಪ್ರಾಬ್ಲೆಂ ಕಾಂತಾರದಲ್ಲಿ ಬರೋ ಪಂಜುರ್ಲಿ, ಗುಳಿಗ ದೈವದ ಮೂಲ ಮಂಗಳೂರು. ಆದ್ರೆ ಅಲ್ಲೇ ಕಾಂತಾರ ಚಾಪ್ಟರ್ 2 ಚಿತ್ರೀಕರಣ ಮಾಡೋಕೆ ಸಾಧ್ಯವಾಗ್ತಿಲ್ಲವಂತೆ. 

Rishab Shetty is tensed about Kantara prequel shooting gvd
Author
First Published Nov 24, 2023, 8:22 PM IST

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಂತು ಇಂತು ಮತ್ತೆ ಕಾಂತಾರ 2 ಟ್ರ್ಯಾಕ್ಗೆ ಬಂದಿದ್ದಾರೆ. ಕಾಂತಾರ ಪಾರ್ಟ್ ಒನ್ ಬಿಡುಗಡೆ ಆಗಿ ಒಂದು ವರ್ಷ ಕಳೆದು ಹೋಗಿದೆ. ಆದ್ರೆ ರಿಷಬ್ ಕಾಂತಾರ ಚಾಪ್ಟರ್ 2 ಶೂಟಿಂಗ್ ಶುರು ಮಾಡೋ ಬಗ್ಗೆ ಯಾವ್ದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ದೈವದ ಸಿನಿಮಾ ಶೂಟಿಂಗ್ ಬಗ್ಗೆ ಹೊಸ ಅಪ್ಡೇಟ್ ಇಂದು ಬಂದಿದೆ. ಕಾಂತಾರ ಪಾರ್ಟ್2 ಶೂಟಿಂಗ್ ಮುಂದಿನ ವರ್ಷ ಜನವರಿಯಿಂದ ಅನ್ನೋದು ಕನ್ಫರ್ಮ್. ಈ ಶೂಟಿಂಗ್ ಹೋಗೋಕೆ ಲೊಕೇಷನ್ ಹಂಟಿಂಗ್ ಕೂಡ ನಡೆದಿದೆ. 

ಆದ್ರೆ ರಿಷಬ್ಗೆ ಹೊಸ ಟೆನ್ಷನ್ ಅಂದ್ರೆ ಶೂಟಿಂಗ್ ಮಾಡೋ ಜಾಗದಲ್ಲಿ ಎದುರಾಗ್ತಿರೋ ಪ್ರಾಬ್ಲೆಂ ಕಾಂತಾರದಲ್ಲಿ ಬರೋ ಪಂಜುರ್ಲಿ, ಗುಳಿಗ ದೈವದ ಮೂಲ ಮಂಗಳೂರು. ಆದ್ರೆ ಅಲ್ಲೇ ಕಾಂತಾರ ಚಾಪ್ಟರ್ 2 ಚಿತ್ರೀಕರಣ ಮಾಡೋಕೆ ಸಾಧ್ಯವಾಗ್ತಿಲ್ಲವಂತೆ. ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ಇಮೇಜ್ಅನ್ನ ಆಗಸದೆತ್ತರಕ್ಕೆ ಹಾರಿಸಿದೆ. ಕರಾವಳಿಯಿಂದ ಕನ್ಯಾಕುಮಾರಿ, ಉತ್ತರದಿಂದ ದಕ್ಷಿಣ, ಫೂರ್ವ ಪಶ್ಚಿಮದ ತುಂಬೆಲ್ಲಾ ರಿಷಬ್ ಈಗ ಚಿರು ಪರಿಚಿತ. ಈ ಇಮೇಜ್ ರಿಷಬ್ ಶೆಟ್ಟಿಗೆ ಕಾಂತಾರ 2 ಶೂಟಿಂಗ್ ಮಾಡಲು ತುಂಬಾ ತೊಂದರೆ ಕೊಡ್ತಿದೆಯಂತೆ. 

ರಿಷಬ್ ಶೆಟ್ಟಿ ಶೂಟಿಂಗ್ಗಾಗಿ ಲೊಕೇಷನ್ ಹಂಟಿಂಗ್ಗೆ ಹೋದಲ್ಲಿ ಬಂದಲ್ಲೆಲ್ಲಾ ಜನ ಮುತ್ತಿಕೊಳ್ತಿದ್ದಾರೆ. ಇದು ಚಿತ್ರೀಕರಣ ಸಮಯದಲ್ಲಿ ತುಂಬಾ ತೊಂದರೆ ಆಗುತ್ತೆ ಅನ್ನೋದು ರಿಷಬ್ ವಾದ. ಹೀಗಾಗಿ ಶೆಟ್ರು ಈಗ ಕಾಂತಾರ2 ಶೂಟಿಂಗ್ಗೆ ಹೊಸ ಮಾರ್ಗ ಹುಡುಕಿದ್ದಾರೆ. ಅದೇ ಉಡುಪಿ ಟು ಶ್ರೀಲಂಕಾ ರಹಸ್ಯ ಪ್ರಯಾಣ. ಹೌದು, ಕಾಂತಾರ ಚಿತ್ರೀಕರಣಕ್ಕೆ ಶೆಟ್ರು ಗ್ಯಾಂಗ್ ಶ್ರೀಲಂಕಾಗೆ ಹಾರ್ತಾರಂತೆ. ದೈವದ ನೆಲೆ ಕರಾವಳಿ ಭಾಗದಲ್ಲಿ ಶೂಟಿಂಗ್ ಮಾಡಿದ್ರೆ ಆ ಜಾಗಕ್ಕೆ ಜನ ಹುಡುಕಿಕೊಂಡು ಬರುತ್ತಾರೆ. ಇದರಿಂದ ಚಿತ್ರೀಕರಣದ ದೃಶ್ಯಗಳು ಲೀಕ್ ಆಗುತ್ತೆ ಅಂತ ಯೋಚ್ನೆ ಮಾಡಿರೋ ರಿಷಬ್ ಕಾಂತಾರದ ಮೇಜರ್ ಪೋಷನ್ಅನ್ನ ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡೋಕೆ ಪ್ಲಾನ್ ಮಾಡಿದ್ದಾರೆಂತೆ. 

ನನಗೆ ಗೊತ್ತು, ದಯವಿಟ್ಟು ತಾಳ್ಮೆ ಇಟ್ಕೊಳ್ಳಿ: Yash 19 ಚಿತ್ರದ ಬಗ್ಗೆ ರಾಕಿಭಾಯ್ ಹೀಗೆ ಅನ್ನೋದಾ!

ಕಾಂತಾರ ಸಿನಿಮಾ ಮಹೂರ್ಥ ಇದೇ ನವೆಂಬರ್ 27ಕ್ಕೆ ಉಡುಪಿಯ ಆನೆಗುಡ್ಡೆಯ ವಿಗ್ನೇಶ್ವರನ ಸನ್ನಿಧಿಯಲ್ಲಿ ನಡೆಯುತ್ತಿದೆ. ಅರೆ ಎಲ್ಲಾ ಸಿನಿಮಾಗಳ ಮಹೂರ್ತ ಬೆಂಗಳೂರಲ್ಲೇ ಆಗ್ತಾವೆ. ಈ ಸಿನಿಮಾದ ಮಹೂರ್ಥ ಯಾಕೆ ಆನೆಗುಡ್ಡೆಯಲ್ಲಿ ಆಗುತ್ತೆ ಅಂತ ನಿಮಗನ್ನಿಸಬಹುದು. ಅದಕ್ಕೆ ಕಾರಣವೂ ಇದೆ. ಕಾಂತಾರ ನಿರ್ಮಾಪಣ ಸಂಸ್ಥೆ ಹೊಂಬಾಳೆ ಹಾಗು ರಿಷಬ್ ಶೆಟ್ಟಿಗೆ ಆನೆಗುಡ್ಡೆ ಗಣಪನ ಮೇಲೆ ಅಗಾದ ನಂಬಿಕೆ. ಕೆಜಿಎಫ್ ಸಿನಿಮಾ ಹಾಗು ಕಾಂತಾರ ಪಾರ್ಟ್1 ಸಿನಿಮಾಗಳ ಮಹೂರ್ತ ಇಲ್ಲೇ ಆಗಿತ್ತು. ಈ ಸಿನಿಮಾಗಳು ಸೂಪರ್ ಹಿಟ್ ಆದ್ವು. ಈಗ ಕಾಂತಾರ ಚಾಪ್ಟರ್2ಗೂ ಇಲ್ಲೇ ಪೂಜೆ ನಡೆಯಲಿದೆ. 

Follow Us:
Download App:
  • android
  • ios