ಕಿರಿಕ್‌ ಪಾರ್ಟ್‌ ಸುಂದರಿ ರಶ್ಮಿಕಾ ಮಂದಣ್ಣ  ಚಿತ್ರರಂಗದಲ್ಲಿ ಉತ್ತುಂಗಕ್ಕೆ ಬೆಳೆಯುತ್ತಿದ್ದಂತೆ ತಮ್ಮ ಲೈಫ್‌ಸ್ಟೈಲ್‌ನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಅಷ್ಟೇ ಏಕೆ ಡವ್‌ ರಾಣಿ ಅಂತಿದ್ದ ನೆಟ್ಟಿಗರಿಗೆ ಈಗ ಆಕೆನೇ ಬೇಕಂತೆ...

ಹೌದು! ಟ್ಟಿಟರ್‌ನಲ್ಲಿ ಅಭಿಮಾನಿಗಳ ಪ್ರಶ್ನಗಳಿಗೆ ರಿಯಾಕ್ಟ್‌ ಮಾಡುತ್ತಿದ್ದ ರಶ್ಮಿಕಾ ಮಂದಣ್ಣ ಕೆಲ ದಿನಗಳಿಂದ ಯಾವುದೇ ಫೋಟೋ ಅಥವಾ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಏಕೆಂದರೆ ಆಕೆ ಅಕೌಂಟ್‌ ಪಾಸ್‌ವರ್ಡ್‌ ಮರೆತಿದ್ದಾರೆ ಎಂದು ತಿಳಿದು ಬಂದಿದೆ.

Hyderabad ಏರ್‌ಪೋರ್ಟಿನಲ್ಲಿ ಹುಚ್ಚೆದ್ದು ಕುಣಿದ ರಶ್ಮಿಕಾ; ವಿಡಿಯೋ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್‌ ಇರುವ ರಶ್ಮಿಕಾ ಈಗಾ ಪಾಸ್‌ವರ್ಡ್‌ ಜ್ಞಾಪಕ ಬರುವವರೆಗೂ ಟ್ಟಿಟರ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ಇದನ್ನು ಕೇಳಿ ಬೇಸತ್ತ ಅಭಿಮಾನಿಗಳು ಹೊಸ ಅಭಿಯಾನ ಶುರುಮಾಡಿದ್ದಾರೆ. ಅದುವೇ #ComeBackRashmika ಎಂದು. 

 

ಏನೇ ಮಾಡಿದ್ರು ಬೈಕೊಂಡು ಓಡಾಡುತ್ತಿದ್ದವರು ಈಗಾ ರಶ್ಮಿಕಾಳನ್ನು ಮಿಸ್‌ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಕೆಲವರಂತೂ 'ಕೊರೋನಾ ನೋಡಿ ನೋಡಿ ಬೇಜಾರ್‌ ಆಗಿದೆ ಮೇಡಂ ಪ್ಲೀಸ್‌ ಕಮ್‌ ಬ್ಯಾಕ್‌' ಎಂದು ಕಮೆಂಟ್‌ ಮಾಡುತ್ತಿದ್ದಾರೆ.