ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕೊಡಗಿನ ಸುಂದರಿ, ಮಿಸ್ ಬೆಂಗಳೂರು ಫ್ರೆಶ್ ಫೇಸ್‌ ರಶ್ಮಿಕಾ ಮಂದಣ್ಣ ಇಂದು 25ರ ವಸಂತಕ್ಕೆ ಕಾಲಿಟ್ಟಿದ್ದಾರೆ.  ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣಗೆ ಭಾರತದ ಮೂಲೆ ಮೂಲೆಯಲ್ಲೂ ಫ್ಯಾನ್ಸ್‌ ಇದ್ದಾರೆ. 25ರ ಹುಟ್ಟುಹಬ್ಬ ಅಂದ್ರೆ ಎಲ್ಲರಿಗೂ ತುಂಬಾನೇ ಸ್ಪೇಷಲ್ ಹೀಗಾಗಿ ರಶ್ಮಿಕಾ ಅಭಿಮಾನಿಗಳು ಕ್ರಿಯೇಟಿವ್ ಆಗಿ ಕಾಮನ್ ಡಿಪಿ ಮಾಡಿದ್ದಾರೆ. 

ಪಂಚ್ ಡೈಲಾಗ್‌ ಹೇಳೋ 'ಕಿರಿಕ್' ಹುಡುಗಿ ಉಳುಮೆ ಮಾಡ್ತಿದ್ದಾರೆ ನೋಡಿ

ಕೆಂಪು ಲೆಹೆಂಗಾ ಧಿರಿಸಿ ಸಮುದ್ರದ ಮುಂದೆ ನಿಂತಿರುವ ರಶ್ಮಿಕಾ ಮಂದಣ್ಣ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪಕ್ಕದಲ್ಲಿ ಮರವಿದೆ. ಹಿಂದೆ ಸೂರ್ಯಾಸ್ತವಾಗುತ್ತಿದೆ. ಫೋಟೋ ನೋಡಲು ತುಂಬಾನೇ ಕ್ರಿಯೇಟಿವ್ ಆಗಿದೆ.  ನಿರ್ದೇಶಕ ವೆಂಕಿ ಕುಡುಮುಲು ಈ ಫೋಟೋ ಬಿಡುಗಡೆ ಮಾಡಿದ್ದಾರೆ. 

'ನನ್ನ ಆಪ್ತ ಸ್ನೇಹಿತೆ ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬಕ್ಕೆ ಕಾಮನ್ ಡಿಪಿ ಬಿಡುಗಡೆ ಮಾಡುವುದಕ್ಕೆ ಖುಷಿಯಾಗುತ್ತಿದೆ. ನೀನು ದೊಡ್ಡ ಮಟ್ಟಕ್ಕೆ ಹೆಸರು ಮಾಡುತ್ತಿರುವುದನ್ನು ನೋಡಿ ತುಂಬಾ ಖುಷಿಯಾಗುತ್ತಿದೆ. ಹ್ಯಾಪಿ ಬರ್ತಡೇ ರಶ್ಮಿಕಾ,' ಎಂದು ವೆಂಕಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ವೆಂಕಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

ರಶ್ಮಿಕಾ ನಿದ್ದೆ ಕೆಡಿಸಿದ ಜಿರಳೆ: ಕಿರಿಕ್ ಚೆಲುವೆ ಬಿಚ್ಚಿಟ್ರು ನಿದ್ದೆ ಇಲ್ಲದ ರಾತ್ರಿ ಕಥೆ

ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ 'ಪುಷ್ಪ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಹಿಂದಿಯ 'ಮಿಷನ್ ಮಜ್ನು' ಚಿತ್ರದಲ್ಲಿ ಅಭಿನಯಿಸುತ್ತಲೇ ಬಾಲಿವುಡ್‌ ಬಿಗ್‌ ಬಿ ಅಮಿತಾಬ್ ಬಚ್ಚನ್‌ ಜೊತೆ 'ಗುಡ್ ಬಾಯ್' ಚಿತ್ರಕ್ಕೆ ಸಿಹಿ ಮಾಡಿದ್ದಾರೆ. ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಹೀಗೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಆಶಿಸೋಣ..