ಕನ್ನಡ ಚಿತ್ರರಂಗದ ಹಿರಿಯ ನಟ ಮಂಡ್ಯ ರಮೇಶ್ ಮೈಸೂರಿನಲ್ಲಿ ವಾಸವಿದ್ದಾರೆ. ಲಾಕ್‌ಡೌನ್ ಆಗಿರುವ ಕಾರಣ ಮಕ್ಕಳಿಗೆ ಆನ್‌ಲೈನ್‌ ಬೇಸಿಗೆ ಶಿಬಿರ ನಡೆಸುತ್ತಿದ್ದಾರೆ ಹಾಗೂ ಕುಟುಂಬದ ಸಮಯ ಕಳೆಯುತ್ತಿದ್ದಾರೆ. ಈ ವೇಳೆ ರಮೇಶ್ ಮನೆಗೆ ವಿಶೇಷ ಅತಿಥಿ ಆಗಮವಾಗಿದೆ. 

ಮಂಡ್ಯ ರಮೇಶ್‌ ಮಗಳು ದಿಶಾ ಹೇಗಿದ್ದಾರೆ ನೋಡಿ?

ಹೌದು! ಮಂಡ್ಯ ರಮೇಶ್ ನಿವಾಸದಲ್ಲಿ ಪುಟ್ಟ ಹಾವಿನ ಮರಿ ಕಾಣಿಸಿಕೊಂಡಿದೆ.  ತಕ್ಷಣವೇ ಉರಗ ರಕ್ಷಕರನ್ನು ಮನೆಗೆ ಕರೆಸಿ ಹಾವನ್ನು ಹಿಡಿಯಲಾಗಿದೆ. ಉರಗ ರಕ್ಷಕರ ಪ್ರಕಾರ ಇದು Wolf snake ಅಂದರೆ ವಿಷರಹಿತ ತೋಳದ ಹಾವೆಂದು ಕರೆಯಲಾಗುತ್ತದೆ. ಈ ಹಾವುಗಳು ರಾತ್ರಿ ಸಮಯದಲ್ಲಿ ಹೆಚ್ಚಾಗಿ ಸಂಚಾರ ಮಾಡುತ್ತದೆ ಎನ್ನಲಾಗಿದೆ. ಇದು ಪುಟ್ಟ ಮರಿ ಆಗಿದ್ದು ಮಂಡ್ಯ ರಮೇಶ್ ರಕ್ಷಕರ ಸಹಾಯದಿಂದ ಕೈಯಲ್ಲಿ ಹಿಡಿದುಕೊಂಡಿದ್ದಾರೆ. 

5 ಸಾವಿರ ಪ್ರೇಕ್ಷಕರ ಮುಂದೆ ಪ್ರದರ್ಶನ ಮಾಡಬಹುದು ಆದರೆ ಹಾವು ಎಂದರೆ ಭಯ ಎಂದಿದ್ದಾರೆ. ಈ ಹಿಂದೆಯೂ ರಮೇಶ್ ನಿವಾಸದ ಬಳಿ ನಾಗರ ಹಾವು ಹಿಡಿಯಲಾಗಿತ್ತು. ಈ ಸಲವೂ ಅದೇ ಹಾವು ಇರಬಹುದು ಎಂದು ರಮೇಸ್ ಗೆಸ್ ಮಾಡಿದ್ದರು. ಆದರೆ ಅದು ಪುಟ್ಟ ತೋಳದ ಹಾವಾಗಿತ್ತು.