Asianet Suvarna News Asianet Suvarna News

ರಾಜ್ ಬಿ ಶೆಟ್ಟಿಗೆ ಜೋಡಿಯಾದ ರಮ್ಯಾ; ಮೋಹಕತಾರೆ ಹೊಸ ಚಿತ್ರಕ್ಕೆ 'ಸ್ವಾತಿ ಮುತ್ತಿನ ಮಳೆಹನಿಯೇ' ಟೈಟಲ್

ವಿಜಯದಶಮಿ ದಿನ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡುವ ಮೂಲಕ ಯಾವಾಗ ಬಣ್ಣ ಹಚ್ಚುತ್ತೀರಾ ಎಂದು ಕೇಳುತ್ತಿದ್ದ ಪ್ರಶ್ನೆಗೆ ರಮ್ಯಾ ಉತ್ತರ ನೀಡಿದ್ದಾರೆ. ಹೌದು, ನಟಿ ರಮ್ಯಾ ನಿರ್ಮಾಣ ಮಾಡಿ, ನಟಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಬಹಿರಂಗವಾಗಿದೆ. 

Ramya And raj b shetty starrer new movie titled swathi mutthina male haniye sgk
Author
First Published Oct 5, 2022, 11:19 AM IST

ಮೋಹಕತಾರೆ ರಮ್ಯಾ ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ವಾಪಾಸ್ ಆಗಿದ್ದಾರೆ. ಇತ್ತೀಚಿಗಷ್ಟೆ ಅಂದರೆ ಗಣೇಶ ಹಬ್ಬಕ್ಕೆ ರಮ್ಯಾ ತನ್ನದೆ ನಿರ್ಮಾಣ ಸಂಸ್ಥೆ ಘೋಷಣೆ ಮಾಡಿ, ಸದ್ಯದಲ್ಲೇ ಸಿನಿಮಾದ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದರು. ರಮ್ಯಾ ಕೇವಲ ನಿರ್ಮಾಪಕಿಯಾಗಿ ಮಾತ್ರ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿ ಇರ್ತಾರಾ ಎಂದು ಅಭಿಮಾನಿಗಳು ಬೇಸರ ಪಟ್ಟಿದ್ದರು. ಆದರೀಗ ವಿಜಯದಶಮಿ ದಿನ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡುವ ಮೂಲಕ ಯಾವಾಗ ಬಣ್ಣ ಹಚ್ಚುತ್ತೀರಾ ಎಂದು ಕೇಳುತ್ತಿದ್ದ ಪ್ರಶ್ನೆಗೆ ರಮ್ಯಾ ಉತ್ತರ ನೀಡಿದ್ದಾರೆ. ಹೌದು, ನಟಿ ರಮ್ಯಾ ನಿರ್ಮಾಣ ಮಾಡಿ, ನಟಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಬಹಿರಂಗವಾಗಿದೆ. 

ವಿಜಯದಶಮಿ ದಿನ ಚಿತ್ರದ ಮತ್ತೊಂದು ಸಿಹಿ ಸುದ್ದಿ ನೀಡುವುದಾಗಿ ರಮ್ಯಾ ಹೇಳಿದ್ದರು. ಇದೀಗ ರಮ್ಯಾ ನಟನೆಯ ಹೊಸ ಸಿನಿಮಾದ ಟೈಟಲ್ ಅನಾವರಣವಾಗಿದೆ. ಚಿತ್ರಕ್ಕೆ 'ಸ್ವಾತಿ ಮುತ್ತಿನ ಮಳೆಹನಿಯೇ' ಎಂದು ಸುಂದರವಾದ ಟೈಟಲ್ ಇಟ್ಟಿದ್ದಾರೆ. ಈ ಟೈಟಲ್ ಕ್ರೇಜಿ ಸ್ಟಾರ್ ರವಿಚಂದ್ರನ್ ನೆನಪು ತರಿಸುತ್ತಿದೆ. ಬಣ್ಣದ ಗೆಜ್ಜೆ ಸಿನಿಮಾದ ಸೂಪರ್ ಹಿಟ್ ಹಾಡಿನ ಸಾಲು ಇದಾಗಿದೆ. ಸ್ವಾತಿ ಮುತ್ತಿನ ಮಳೆಹನಿಯೇ ಹಾಡನ್ನು ಹಂಸಲೇಖ ಬರೆದು ಸಂಗೀತ ನೀಡಿದ್ದರು. ರವಿಚಂದ್ರನ್ ಮತ್ತು ಅಮಲಾ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಕನ್ನಡ ಎವರ್ ಗ್ರೀನ್ ಹಾಡು ಇದಾಗಿದೆ. ಈ ಸೂಪರ್ ಹಿಟ್ ಹಾಡಿನ ಸಾಲಿನ ಮೂಲಕ ರಮ್ಯಾ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿರುವುದು ವಿಶೇಷ.

ಕೊನೆಗೂ ಗುಡ್ ನ್ಯೂಸ್ ಕೊಟ್ಟ ರಮ್ಯಾ; ಮತ್ತೆ ಚಿತ್ರರಂಗಕ್ಕೆ ಮೋಹಕತಾರೆ ವಾಪಾಸ್

ಸದ್ಯ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. ವಿಶೇಷ ಎಂದರೆ ಸಿನಿಮಾದಲ್ಲಿ ರಮ್ಯಾ ಜೊತೆ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ರಾಜ್ ಬಿ ಶೆಟ್ಟಿ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ರಮ್ಯಾ ಅವರ ಆಪಲ್ ಬಾಕ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಕಾಂಬಿನೇಷನ್ ನಲ್ಲಿ ಸಿನಿಮಾ ಬರ್ತಿದೆ ಎನ್ನುವ ಸುದ್ದಿ ಈಗಾಗಲೇ ವೈರಲ್ ಆಗಿತ್ತು. ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಇದೀಗ ಆಕರ್ಷಕವಾದ ಟೈಟಲ್ ರಿಲೀಸ್ ಮಾಡುವ ಮೂಲಕ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. ಸದ್ಯ ಟೈಟಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ರಮ್ಯಾ ಸದ್ಯದಲ್ಲೇ ದೊಡ್ಡ ಪರದೆ ಮೇಲೆ ಮಿಂಚಲಿದ್ದಾರೆ.    
 

Follow Us:
Download App:
  • android
  • ios