ರಕ್ಷಿತಾ ಪ್ರೇಮ್ ಸಹೋದರ ರಾಣಾ ವಿವಾಹಕ್ಕೆ ದರ್ಶನ್ ಮತ್ತು ವಿಜಯಲಕ್ಷ್ಮೀ ಆಗಮಿಸುವ ನಿರೀಕ್ಷೆಯಿದೆ. ರಕ್ಷಿತಾ ಅವರಿಗೆ ಆಮಂತ್ರಣ ನೀಡಿದ್ದು, ದರ್ಶನ್ ಬರುವುದಾಗಿ ತಿಳಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಕ್ಷಿತಾ ಮತ್ತು ದರ್ಶನ್ ನಡುವಿನ ಉತ್ತಮ ಬಾಂಧವ್ಯದಿಂದಾಗಿ ಈ ವಿಷಯ ಹೆಚ್ಚು ಗಮನ ಸೆಳೆದಿದೆ.
ಒಂದು ಕಾಲದ ಸ್ಟಾರ್ ನಟಿ ರಕ್ಷಿತಾ (ರಕ್ಷಿತಾ ಪ್ರೇಮ್) ಅದೊಂದು ಪೋಸ್ಟ್ ಮಾಡಿದ್ದಾರೆ. 'ನನ್ನ ಸಹೋದರ ರಾಣಾ ವಿವಾಹ ಆಗುತ್ತಿದ್ದಾರೆ. ಇದಕ್ಕೆ ದರ್ಶನ್-ವಿಜಯಲಕ್ಷ್ಮೀಗೆ ಆಹ್ವಾನ ಕೊಟ್ಟಿದೀನಿ. ನಾನು ದರ್ಶನ್ ಹಾಗೂ ವಿಜಿ (ವಿಜಯಲಕ್ಷ್ಮೀ) ಇಬ್ಬರಿಗೂ ಆಮಂತ್ರಣ ಕೊಟ್ಟಿದ್ದೇನೆ. ಅವನು ಬರ್ತೀನಿ ಅಂದಿದ್ದಾನೆ. ಅವನು ಮದುವೆಗೆ ಬಂದೇ ಬರ್ತಾನೆ' ಎಂದು ರಕ್ಷಿತಾ (Rakshitha Prem) ಹೇಳಿದ್ದಾರೆ.
ವಿಜಯಲಕ್ಷ್ಮೀ ಹಾಗೂ ದರ್ಶನ್, ತಮ್ಮ ಮಗ ವಿನೀಶ್ ಜೊತೆಗೆ 'ನನ್ನ ತಮ್ಮ'ನ ಮದುವೆಗೆ ಬಂದೇ ಬರ್ತಾರೆ ಅಂತ ರಕ್ಷಿತಾ ಪ್ರೇಮ್ ಕಾಯುತ್ತಿದ್ದಾರೆ. ಅವರು ಈ ಬಗ್ಗೆ ಹೇಳಿರುವ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಅಂದ್ರೆ, ನೆಗೆಟಿವ್ ವೇದಲ್ಲಿ ಅಲ್ಲ! ಯಾಕಂದ್ರೆ, ನಟಿ ರಕ್ಷಿತಾ ಪ್ರೇಮ್ ಅವರು ದರ್ಶನ್ ಜೊತೆ ನಟಿಸಿದ್ದಾರೆ. ಜೊತೆಗೆ, ಅವರಿಬ್ಬರ ಫ್ಯಾಮಿಲಿ ಮಧ್ಯೆ ಉತ್ತಮ ಬಾಂಡಿಂಗ್ ಇದೆ. ಪರ್ಸನಲಿ ಕೂಡ ನಟಿ ರಕ್ಷಿತಾ ಹಾಗೂ ನಟ ದರ್ಶನ್ ಬೆಸ್ಟ್ ಫ್ರೆಂಡ್ಸ್.
ರಕ್ಷಿತಾ ತಮ್ಮ ರಾಣಾ ಮದುವೆಗಿಂತ ಹೆಚ್ಚಿನ ಸುದ್ದಿ ಇದೇ ಆಗಬಹುದೋ ಏನೋ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಅದರಲ್ಲೇನು ವಿಶೇಷ? ರಾಣಾ ಅವರು ಈಗಷ್ಟೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರುವ ಯಂಗ್ ನಟ. ಆದರೆ, ರಕ್ಷಿತಾ ಪ್ರೇಮ್ ಹಾಗೂ ನಟ ದರ್ಶನ್ ಇಬ್ಬರೂ ಸ್ಟಾರ್‌ಗಳು. ಜೊತೆಗೆ, ಸ್ಟಾರ್ ನಿರ್ದೇಶಕರಾದ ಪ್ರೇಮ್ ಅವರ ಪತ್ನಿ ನಟಿ ರಕ್ಷಿತಾ. ಹೀಗಿರುವಾಗ ಸಕತ್ ಸುದ್ದಿ-ಸದ್ದು ಗ್ಯಾರಂಟಿ ತಾನೇ?
ಹೌದು, ನಟ ಹಾಗೂ ರಕ್ಷಿತಾ ತಮ್ಮ ರಾಣಾ ಮದುವೆಗೆ ನಟ ದರ್ಶನ್ ಆಗಮನಕ್ಕಾಗಿ ರಕ್ಷಿತಾ ಪ್ರೇಮ್ ಕುಟುಂಬ ಕಾಯುತ್ತಿದೆ. ದರ್ಶನ್ ಕೂಡ 'ಬಂದೇ ಬರ್ತೀನಿ' ಎಂದು ಹೇಳಿದ್ದಾರೆ ಎಂದಮೇಲೆ ಅಲ್ಲಿ ದರ್ಶನ್ ಹಾಜರಿ ಪಕ್ಕಾ ಬಿಡಿ. ಬೇಲ್ ಪಡೆದು ಜೈಲಿನಿಂದ ಹೊರಗೆ ಬಂದಿರುವ ನಟ ದರ್ಶನ್ ನಿಧಾನವಾಗಿ ಹಳೆಯ ಜೀವನಕ್ಕೆ ಮರಳುತ್ತಿದ್ದಾರೆ. ಸ್ವಲ್ಪ ಕಾಲದಲ್ಲೇ ಮತ್ತೆ ಅರ್ಧಕ್ಕೇ ನಿಂತಿರುವ 'ಡೆವಿಲ್' ಸಿನಿಮಾ ಶೂಟಿಂಗ್ ಶುರು ಮಾಡಲಿದ್ದಾರೆ ಎನ್ನಲಾಗುತ್ತಿದೆ.
