ಚಾರ್ಲಿ ಟೀಸರ್‌ಗೆ ಸಖತ್ ರೆಸ್ಪಾನ್ಸ್ ಹಿಂದಿ, ಮಲಯಾಳಂ, ತೆಲುಗು, ಕನ್ನಡದಲ್ಲಿ ಟೀಸರ್ ಬಿಡುಗಡೆ ಎರಡು ಲಕ್ಷಕ್ಕೂ ಹೆಚ್ಚು ವ್ಯೂಸ್, ಬರ್ಜರಿ ರೆಸ್ಪಾನ್ಸ್

ಸ್ಯಾಂಡಲ್‌ವುಡ್‌ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಟೀಸರ್‌ಗೆ ಸಖತ್ ರೆಸ್ಪಾನ್ಸ್ ಬಂದಿದೆ. ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿರೋ ಸಿನಿಮಾದ ಕನ್ನಡ ಟೀಸರ್‌ಗೆ ಈಗಾಗಲೇ 299,666 ವ್ಯೂಸ್ ಬಂದಿದೆ.

ಸಖತ್ ರೆಸ್ಪಾನ್ಸ್ ಪಡೆಯುತ್ತಿರೋ ಟೀಸರ್ ಈ ಟ್ವಿಟರ್‌ನಲ್ಲೂ ಟ್ರೆಂಡ್ ಆಗಿದೆ. ರಕ್ಷಿತ್ ಶೆಟ್ಟಿ ಫ್ಯಾನ್ಸ್ ಟೀಸರ್ ನೋಡಿ ಸಿನಿಮಾ ಬಗ್ಗೆ ಇನ್ನಷ್ಟು ಥ್ರಿಲ್ ಆಗಿದ್ದಾರೆ. ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ಟೀಸರ್ ಬಿಡುಗಡೆಯಾಗಿದೆ.

777 ಚಾರ್ಲಿ ಚಿತ್ರದ ಮಲಯಾಳಂ ವಿತರಣೆ ಹಕ್ಕು ಪಡೆದ ಪೃಥ್ವಿರಾಜ್

ನಟ ರಕ್ಷಿತ್ 38ನೇ ಬರ್ತ್‌ಡೇ ಸಂದರ್ಭ ಟೀಸರ್ ಬಿಡುಗಡೆ ಮಾಡಲಾಗಿದ್ದು, ನಟನ ಫ್ಯಾನ್ಸ್ ಖುಷಿಯಾಗಿದ್ದಾರೆ. ಅವರ ಜನ್ಮದಿನದಂದು ರಕ್ಷಿ ಶೆಟ್ಟಿ ಮತ್ತು 777 ಚಾರ್ಲಿ ತಂಡ ಚಿತ್ರದ ಟೀಸರ್ ಹಂಚಿಕೊಂಡಿದ್ದಾರೆ.

YouTube video player

ಕೆ ಕಿರಣ್‌ರಾಜ್ ನಿರ್ದೇಶನದ ಈ ಚಿತ್ರವು ದಾರಿ ತಪ್ಪಿದ ಶ್ವಾನ ಚಾರ್ಲಿ ಮತ್ತು ಅವನ ಸಹಚರ ಧರ್ಮ (ರಕ್ಷಿತ್ ಶೆಟ್ಟಿ ನಿರ್ವಹಿಸಿದ ಪಾತ್ರ)ದ ಸುತ್ತದ ಕಥೆಯನ್ನು ಅನುಸರಿಸುತ್ತದೆ.

YouTube video player

ಟೀಸರ್ ಶೇರ್ ಮಾಡಿದ ರಕ್ಷಿತ್ ಶೆಟ್ಟಿ "ನಮ್ಮ ಪ್ರೀತಿಯ ಶ್ರಮವನ್ನು ನೀವು ಪ್ರೀತಿಯಿಂದ ಸ್ವೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ಕ್ಯಾಪ್ಶನ್ ಬರೆದಿದ್ದಾರೆ.

Scroll to load tweet…