ರಕ್ಷಿತ್ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾದ ಮಲಯಾಳಂನ ವಿತರಣೆ ಹಕ್ಕುನ್ನು ಮಲಯಾಳಂ ನಟ ಪೃಥ್ವಿರಾಜ್ ಪಡೆದುಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾದ ಮಲಯಾಳಂ ವಿತರಣೆ ಹಕ್ಕುಗಳನ್ನು ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಪಡೆದಿದ್ದಾರೆ. ಈ ಕುರಿತು ಪೃಥ್ವಿರಾಜ್ ಸುಕುಮಾರ್, ‘ನಾನು ಈಗಾಗಲೇ 777 ಚಾರ್ಲಿ ಸಿನಿಮಾದ ಒಂದಿಷ್ಟು ದೃಶ್ಯಗಳನ್ನ ನೋಡಿ ಥ್ರಿಲ್ ಆದೆ. ಇಂಥದ್ದೊಂದು ಚಿತ್ರತಂಡದ ಜೊತೆ ನಮ್ಮ ಪೃಥ್ವಿರಾಜ್ ಪ್ರೊಡಕ್ಷನ್‌ಗೆ ಕೈಜೋಡಿಸುವ ಅವಕಾಶ ಸಿಕ್ಕಿದಾಗ ಆದ ಖುಷಿಯನ್ನು ಮಾತಿನಲ್ಲಿ ವಿವರಿಸೋದು ಕಷ್ಟ. ಹೃದಯ ತಟ್ಟುವ ಕಥೆಯನ್ನು ಮನ ಮುಟ್ಟುವಂತೆ ನಿರೂಪಿಸುವ ಕೆಲಸ ಈ ಚಿತ್ರದಲ್ಲಾಗಿದೆ’ ಎಂದಿದ್ದಾರೆ.

ನಾನು ನಾಯಿ ಪ್ರಿಯೆ, ಅದಕ್ಕೇ 777 ಚಾರ್ಲಿ ಆಡಿಶನ್‌ಗೆ ಹೋಗಿದ್ದೆ; ಸಂಗೀತಾ ಶೃಂಗೇರಿ ಜತೆ ಮಾತುಕತೆ 

View post on Instagram

ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ ಅಭಿನಯದ ಚಾರ್ಲಿ 777 ಚಿತ್ರದ ಸ್ಪೆಷಲ್ ಟೀಸರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ (ಜೂ.6)ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕಿರಣ್‌ರಾಜ್ ನಿರ್ದೇಶನದ ಸಿನಿಮಾವನ್ನು ಪರಂವಃ ಸ್ಟುಡಿಯೋಸ್ ನಿರ್ಮಿಸಿದೆ.