10 ವರ್ಷ ಆದ್ಮೇಲೆ ಈಕೆ ಸಿಕ್ಕಿರುವುದು ನನ್ನ ಅದೃಷ್ಟ: ಲವ್‌ ಬಗ್ಗೆ ಹಿಂಟ್ ಕೊಟ್ಟ ರಕ್ಷಿತ್ ಶೆಟ್ಟಿ?

ರುಕ್ಮಿಣಿ ವಸಂತ್ ನಟನೆ ಮಾತ್ರವಲ್ಲ ವ್ಯಕ್ತಿತ್ವ ಮೆಚ್ಚಿಕೊಂಡ ರಕ್ಷಿತ್ ಶೆಟ್ಟಿ. ಪತ್ರಿಕಾಘೋಷ್ಟಿಯಲ್ಲಿ ರಕ್ಷಿತ್ ಹೇಳಿದ ಮಾತುಗಳು ವೈರಲ್... 

Rakshit Shetty appriciates Rukmini Vasanth acting and support in  Sapta sagaradaache ello film vcs

ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೆಪ್ಟೆಂಬರ್ 1ರಂದು ರಿಲೀಸ್‌ಗೆ ಸಜ್ಜಾಗಿದೆ. ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ಸಖತ್ ಬ್ಯುಸಿಯಾಗಿರುವ ಈ ಜೋಡಿ ಒಬ್ಬರ ನಟನೆಯನ್ನು ಮತ್ತೊಬ್ಬರು ಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು ರಕ್ಷಿತ್ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹರಿದಾಡುತ್ತಿದೆ. 

' ರುಕ್ಮಿಣಿ ವಸಂತ್ ನಟಿಸಿರುವ ಎರಡನೇ ಸಿನಿಮಾ ಇದಾಗಿರಬಹುದು ಆದರೆ ಆಕೆ ಈ ಚಿತ್ರಕ್ಕೆ ಹಾಕಿರುವ ಶಮ್ರ ತುಂಬಾ. ಸಿನಿಮಾದಲ್ಲಿರುವ ಕ್ಯಾರೆಕ್ಟರ್ ಬಗ್ಗೆ ರುಕ್ಮಿಣಿ ಬುಕ್ ಬರೆದುಕೊಂಡಿದ್ದಾರೆ ಆಗಾಗ ಪ್ರಶ್ನೆ ಕೇಳುವರು ಆಗ ನಾನು ಯೋಚನೆ ಮಾಡಲು ಶುರು ಮಾಡುತ್ತಿದ್ದೆ. ಕಥೆಗಾಗಿ ರುಕ್ಮಿಣಿ ಎಷ್ಟು ಪ್ರಿಯಾ ಆಗುವುದಕ್ಕೆ ಸಾಥ್ಯ ನಾನು ಅಷ್ಟೇ ಮನು ಆಗುವುದಕ್ಕೆ ಸಾಧ್ಯ ಏಕೆಂದರೆ ಕಲಾವಿದನಿಎ ಬಾಯಲ್ಲಿ ಏನು ಮಾತನಾಡುತ್ತೀವಿ ಅದಕ್ಕಿಂತ ಕಣ್ಣಿನಲ್ಲಿ ಮಾತನಾಡುವುದು ತುಂಬಾ ಮುಖ್ಯವಾಗುತ್ತದೆ. ಅಕ್ಟಿಂಗ್ ಅಂದ್ರೆ ಬೇರೆ ಏನೂ ಅಲ್ಲ ಅದು ರಿಯಾಕ್ಟಿಂಗ್ ಅಷ್ಟೆ..ಈ ವಿಚಾರ ನನಗೆ ಮೊದಲಿಂದ ಗೊತ್ತಿತ್ತು ಆದರೆ ನಿಜ ಹೇಳಬೇಕು ಅಂದ್ರೆ 10 ವರ್ಷಗಳ ನಂತರ ನಾನು ಇಂತಹ ಒಳ್ಳೆಯ ಕೋ-ಸ್ಟಾರ್‌ನ ಭೇಟಿ ಮಾಡಿರುವುದು ಏಕೆಂದರೆ ಅನೇಕ ರೀತಿಗಳಲ್ಲಿ ನನಗೆ ಸಪೋರ್ಟ್ ಮಾಡಿದ್ದಾರೆ. ರುಕ್ಮಿಣಿ ಇದ್ದ ರೀತಿ ಅಕೆ ಹಾಕುತ್ತಿದ್ದ ಶ್ರಮ ಮೆಚ್ಚಬೇಕು...ಧನ್ಯವಾದಗಳು ರುಕ್ಮಿಣಿ' ಎಂದು ರಕ್ಷಿತ್ ಮಾತನಾಡಿದ್ದಾರೆ.

ಅಬ್ಬಬ್ಬಾ! ನಟಿ ಖುಷ್ಬೂ ಹೇರ್‌ಸ್ಟೈಲ್ ನೋಡಿ...ಆದ್ರೆ ಕಾಮೆಂಟ್‌ ಮಾತ್ರ ನೋಡ್ಬೇಡಿ

ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ನಟಿಸಿದಾಗ ತಮ್ಮ ಕೋ-ಸ್ಟಾರ್ ರಶ್ಮಿಕಾ ಮಂದಣ್ಣ ಮೇಲೂ ಪ್ರೀತಿ ಆಗಿತ್ತು. ಪ್ರೀತಿ ಬೆಳೆದು ಇಬ್ಬರೂ ಮದುವೆ ಮಾಡಿಕೊಳ್ಳಲು ಮುಂದಾಗಿ ತಮ್ಮ ಫ್ಯಾಮಿಲಿಗಳನ್ನು ಒಪ್ಪಿಸಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಗೆ ಕೆಲವೇ ಕೆಲವು ತಿಂಗಳುಗಳು ಇದೆ ಎನ್ನುವಷ್ಟರಲ್ಲಿ ಬ್ರೇಕಪ್ ಮಾಡಿಕೊಂಡರು. ಆಗ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರೂ ರಿಯಾಕ್ಟ್ ಮಾಡಲಿಲ್ಲ...ರಶ್ಮಿಕಾ ಮಂದಣ್ಣ ತಾಯಿ ಕೊಟ್ಟ ಸ್ಪಷ್ಟನೆಗಳು ವೈರಲ್ ಆಗಿತ್ತು. ಬ್ರೇಕಪ್ ಆದ್ಮೇಲೆ ಸಿನಿಮಾಗಲ್ಲಿ ರಶ್ಮಿಕಾ ಬ್ಯುಸಿಯಾಗಿ ಬೇರೆ ಭಾಷೆಗೆ ಹಾರಲು ಶುರು ಮಾಡಿದರು ಹೀಗಾಗಿ ದಿನದಿಂದ ದಿನಕ್ಕೆ ಆಕೆ ಮೇಲೆ ಜನರಿಗೆ ಇದ್ದ ಪ್ರೀತಿ ಕರಗಿ ದ್ವೇಷ ಹುಟ್ಟಿಕೊಂಡಿತ್ತು. 

ಟ್ರೆಂಡ್‌ಗೆ ತಕ್ಕಂಥಾ ಸಿನಿಮಾ ಮಾಡೋ ಜಾಯಮಾನ ನಂದಲ್ಲ : ಹೇಮಂತ್‌ ರಾವ್

ಸಾಮಾನ್ಯವಾಗಿ ಕ್ಯಾಮೆರಾ ಮುಂದೆ ರಕ್ಷಿತಾ ಮಾತನಾಡುವುದು ತುಂಬಾ ಕಡಿಮೆ ಹೀಗಿರುವಾಗ ರುಕ್ಮಿಣಿ ವಸಂತ್‌ ವ್ಯಕ್ತಿತ್ವವನ್ನು ಎತ್ತಿಡಿಯುತ್ತಿದ್ದಾರೆ ಅಂದ್ಮೇಲೆ ಖಂಡಿತಾ ಏನೋ ಫೀಲಿಂಗ್ ಇದೆ ತಮ್ಮ ಲವ್ ಬಗ್ಗೆ ಹಿಂಟ್ ಕೊಡುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ದಯವಿಟ್ಟು ನಮ್ಮ ಒಳ್ಳೆ ಹುಡುಗ ರಕ್ಷಿತ್ ಮನಸ್ಸು ಮತ್ತೆ ಮುರಿಯದಂತೆ ನೋಡಿಕೊಳ್ಳಿ ತುಂಬಾ ಪ್ರೀತಿ ಕೊಡಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios