Asianet Suvarna News Asianet Suvarna News

5 ವರ್ಷಗಳ ಬಳಿಕ ರಾಜಹಂಸ ಖ್ಯಾತಿಯ ಗೌರಿ ಶಂಕರ್‌ ರೀ-ಎಂಟ್ರಿ: ಅ.24ರಂದು ಚಿತ್ರದ ಶೀರ್ಷಿಕೆ ಬಿಡುಗಡೆ

‘ಜೋಕಾಲಿ’ ಹಾಗೂ ‘ರಾಜಹಂಸ’ ಚಿತ್ರಗಳ ನಾಯಕ ನಟ ಗೌರಿಶಂಕರ್‌ ಮತ್ತೊಂದು ವಿಭಿನ್ನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಹಳ್ಳಿ ಸೊಗಡಿನ ಚಿತ್ರದ ಶೀರ್ಷಿಕೆ ಬಿಡುಗಡೆ ವಿಜಯ ದಶಮಿ ಹಬ್ಬದ ಪ್ರಯುಕ್ತ ಅ.24ರಂದು ನಡೆಯಲಿದೆ.

Rajahamsa Hero Gowrishankar New Movie First Look Poster Release On October 24th gvd
Author
First Published Oct 23, 2023, 8:43 PM IST

‘ಜೋಕಾಲಿ’ ಹಾಗೂ ‘ರಾಜಹಂಸ’ ಚಿತ್ರಗಳ ನಾಯಕ ನಟ ಗೌರಿಶಂಕರ್‌ ಮತ್ತೊಂದು ವಿಭಿನ್ನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಹಳ್ಳಿ ಸೊಗಡಿನ ಚಿತ್ರದ ಶೀರ್ಷಿಕೆ ಬಿಡುಗಡೆ ವಿಜಯ ದಶಮಿ ಹಬ್ಬದ ಪ್ರಯುಕ್ತ ಅ.24ರಂದು ನಡೆಯಲಿದೆ. ಮಲೆನಾಡು ಭಾಗದ ಕತೆಯನ್ನು ಒಳಗೊಂಡ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದೆ. ಈ ಸಿನಿಮಾದ ನಿರ್ಮಾಣವನ್ನು ಜನಮನ ಸಿನಿಮಾಸ್ ಮಾಡಿದೆ.  'ರಾಜಹಂಸ' ಸಿನಿಮಾ ಬಿಡುಗಡೆಯಾಗಿ ಐದು ವರ್ಷದ ಬಳಿಕ ಗೌರಿಶಂಕರ್ ಒಂದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾದ ಮೂಲಕ ರೀ-ಎಂಟ್ರಿ ನೀಡುವುದಕ್ಕೆ ಸಜ್ಜಾಗಿದ್ದಾರೆ. 

'ನಾನು ಈ ಹಿಂದೆ ನಟಿಸಿದ್ದ 'ರಾಜಹಂಸ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದಭಿರುಚಿಯ ಕೌಟುಂಬಿಕ ಸಿನಿಮಾ ಎಂಬ ಅಭಿಪ್ರಾಯ ಪಡೆದುಕೊಂಡಿತ್ತು. ಆ ಸಿನಿಮಾದ ಹಾಡುಗಳು ಕೂಡ ಯಶಸ್ವಿಯಾಗಿದ್ದವು. ನನ್ನ ನಟನೆಗೂ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು. ಕಲರ್ಸ್ ಕನ್ನಡ ವಾಹಿನಿಯಲ್ಲಿ 190ಕ್ಕೂ ಅಧಿಕ ಬಾರಿ ರಾಜಹಂಸ ಸಿನಿಮಾ ಪ್ರಸಾರವಾಗಿದೆ. ಇದೀಗ ಮತ್ತೊಂದು ಒಳ್ಳೆಯ ಕಂಟೆಂಟ್ ಇರುವ ಸಿನಿಮಾದ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದೇನೆ'. 'ಇದೊಂದು ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಎಂದು ಹೇಳುವುದಕ್ಕೆ ಖುಷಿಯಾಗುತ್ತದೆ. 

Madonna Sebastian: ಬ್ಲ್ಯಾಕ್​ ಡ್ರೆಸ್​ನಲ್ಲಿ ಎದೆಸೀಳು ತೋರಿಸಿದ ಕಿಚ್ಚನ ಬೆಡಗಿ: ಕಣ್ಣು ಕೆಂಪಗೆ ಮಾಡಿಕೊಂಡ ನೆಟ್ಟಿಗರು!

ಈವರೆಗೂ ಎಲ್ಲಿಯೂ ಬಂದಿರದ, ಯಾರೂ ಕೂಡ ಟಚ್ ಮಾಡದಂತಹ ವಿಷಯವನ್ನ ಸಿನಿಮಾದಲ್ಲಿ ಹೇಳುತ್ತಿದ್ದೇನೆ. ಖಂಡಿತವಾಗಿ ಇದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗೆ ಇದೆ ಎಂದು  ಗೌರಿಶಂಕರ್ ತಿಳಿಸಿದರು. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ಸದ್ಯ ಫಸ್ಟ್ ಲುಕ್ ಪೋಸ್ಟರ್ ಮೂಲಕ ಸಿನಿಪ್ರಿಯರ ಕುತೂಹಲ ಕೆರಳಿಸಲು ಗೌರಿಶಂಕರ್ ಸಜ್ಜಾಗಿದ್ದಾರೆ. ಶಿವಮೊಗ್ಗ ಸುತ್ತಮುತ್ತ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಚಿತ್ರದಲ್ಲಿ ಸಾಕಷ್ಟು ಮಂದಿ ಅನುಭವಿ ಕಲಾವಿದರು ಬಣ್ಣ ಹಚ್ಚಿದ್ದು, ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಚಿತ್ರತಂಡ ನೀಡಲಿದೆ. 

ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್‌ ಸಂತೂರ್ ಮಮ್ಮಿ Shwetha Changappa: 1 ಮಿಲಿಯನ್ ಹೃದಯದ ಪ್ರೀತಿ ಸಿಕ್ಕಿದೆಯಂತೆ!

ಮಲೆನಾಡು ಭಾಗದ ಒಂದಷ್ಟು ಹೊಸ ವಿಚಾರಗಳನ್ನು ಈ ಸಿನಿಮಾದ ಮೂಲಕ ಹೇಳುವುದಕ್ಕೆ ಗೌರಿಶಂಕರ್ ಅಣಿಯಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.  ಗೌರಿಶಂಕರ್ ಅವರ 'ಜನಮನ ಸಿನಿಮಾ' ಬ್ಯಾನರ್ ಮೂಲಕ ಸಿದ್ಧಗೊಂಡಿರುವ ಈ ಹಳ್ಳಿ ಸೊಗಡಿನ ಸಿನಿಮಾವು ರಿಲೀಸ್‌ಗೆ ಸಜ್ಜಾಗಿದೆ. ಹೀರೋ ಆಗಿ ನಟಿಸುವುದರ ಜೊತೆಗೆ ಇದರ ನಿರ್ಮಾಣವನ್ನೂ ಕೂಡ ಗೌರಿಶಂಕರ್ ಮಾಡಿದ್ದಾರೆ. ಇದೇ ಅಕ್ಟೋಬರ್ 24ರಂದು ಫಸ್ಟ್ ಲುಕ್ ಟೈಟಲ್ ಪೋಸ್ಟರ್ ರಿಲೀಸ್ ಮಾಡುವುದಕ್ಕೆ ಅವರು ರೆಡಿ ಆಗಿದ್ದಾರೆ. ಈ ಹೊಸ ಸಿನಿಮಾಗೆ ಸಂಪೂರ್ಣ ಶೂಟಿಂಗ್ ಮುಕ್ತಾಯವಾಗಿದೆ. 

Follow Us:
Download App:
  • android
  • ios