Asianet Suvarna News Asianet Suvarna News

ತುಪ್ಪದ ಬೆಡಗಿ ರಾಗಿಣಿಗೆ ಮದ್ವೆ ಯಾವಾಗ? ಓಪನ್ನಾಗಿ ಮನದಾಳದ ಮಾತು ತೆರೆದಿಟ್ಟ ನಟಿ ಹೇಳಿದ್ದೇನು ನೋಡಿ...


ತುಪ್ಪದ ಬೆಡಗಿ ರಾಗಿಣಿಗೆ ಮದ್ವೆ ಯಾವಾಗ?  ಓಪನ್ನಾಗಿ ಮನದಾಳದ ಮಾತು ತೆರೆದಿಟ್ಟ ನಟಿ ಹೇಳಿದ್ದೇನು ನೋಡಿ...
 

Ragini Dwivedi opens up about her marriage and married life in Rapid Rashmi show suc
Author
First Published Aug 25, 2024, 4:32 PM IST | Last Updated Aug 26, 2024, 10:36 AM IST

 ತುಪ್ಪ ಬೇಕಾ ತುಪ್ಪ ಅನ್ನೋ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಸ್ಯಾಂಡಲ್​ವುಡ್​ ಚೆಲುವೆ ರಾಗಿಣಿ ದ್ವಿವೇದಿ.  ರಾಗಿಣಿ ಅಂದ್ರೆ ಸಾಕು ಪಡ್ಡೆ ಹುಡುಗರು ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಾರೆ.  ಏಕಾಏಕಿ ದಪ್ಪ ಆಗಿ ಸ್ವಲ್ಪ ಸಮಯ ಸಿನಿಮಾಗಳಿಂದ ದೂರ ಉಳಿದು ಸಮಾಜ ಸೇವೆ ಮಾಡಿಕೊಂಡು ಇದ್ದ ನಟಿ,  ಪುನಃ ತೂಕ ಇಳಿಸಿಕೊಂಡು ಸಿನಿಮಾಗಳಲ್ಲಿ ಬಿಜಿ ಆಗಿದ್ದಾರೆ. ಹಾಟ್​ ಫೋಟೋಶೂಟ್​ ಮಾಡಿಕೊಂಡು ಮತ್ತೆ ಯುವ ಹೃದಯಗಳಲ್ಲಿ ಕಚಗುಳಿ ಇಡುತ್ತಿದ್ದಾರೆ.  ಇದರ ಜೊತೆಗೆ ಯೋಗ, ಧ್ಯಾನದಲ್ಲಿಯೂ ತೊಡಗಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾಗಳ ಜೊತೆಗೆ  ರಾಜಕೀಯದಲ್ಲಿಯೂ ಗುರುತಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎನ್ನಲಾಗಿದೆ.  ಸಮಾಜಕ್ಕೆ, ಬಡವರಿಗೆ ಆದಷ್ಟು ಸಹಾಯ ಮಾಡಬೇಕು ಅನ್ನೋ ಮನಸ್ಥಿತಿ ಇರೋ ನಟಿಗೆ ಮದುವೆಯಾಗುವ ಆಸೆ ಇದ್ಯಾ? ಇವರ ಮದ್ವೆ ಯಾವಾಗ? ಈ ಬಗ್ಗೆ ಪ್ರತಿಬಾರಿಯೂ ಪ್ರಶ್ನೆಗಳ ಸುರಿಮಳೆಯೇ ಆಗ್ತಿದೆ. 

ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರೋ ನಟಿ, ಕೆಲ ದಿನಗಳ ಹಿಂದೆ ರೇಷ್ಮೆ  ಸೀರೆ ಧರಿಸಿ ದೊಡ್ಡ ದೊಡ್ಡ ಚಿನ್ನದ ಸರಗಳನ್ನು ಧರಿಸಿರುವ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಇದೇನಪ್ಪಾ ರಾಗಿಣಿ ಮದುವೆ ಆಗ್ತಿದ್ದಾರಾ? ಯಾರಿಗೂ ಹೇಳದೆ ಮದುವೆ ಮಾಡಿಕೊಳ್ಳುತ್ತಿದ್ದಾರೆ ಇದೆಲ್ಲಾ ಮದುಮಗಳು ಹಾಕುವ ಒಡವೆ ಅಲ್ವಾ ಅಂತ ನೆಟ್ಟಿಗರಲ್ಲಿ ಅನುಮಾನ ಶುರುವಾಗಿತ್ತು. ನಂತರ ಅದುದ  ಜ್ಯುವೆಲ್ಲರಿ ಅಂಗಳಿಯೊಂದರ ಓಪನಿಂಗ್​ ಜಾಹೀರಾತು ಎಂದು ತಿಳಿಯಿತು.  ಹೀಗೆ ಮದುವೆಯ ಕುರಿತು ರಾಗಿಣಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಬಟ್ಟೆ ಚೇಂಜ್‌ ಮಾಡೋ ಹಾಗಿಲ್ಲ, ವಾಷ್‌ರೂಮ್‌ಗೆ ಹೋಗೋದೂ ಕಷ್ಟ: ನೋವು ತೋಡಿಕೊಂಡ ರಾಗಿಣಿ

ಇದೀಗ ನಟ, ರ್ಯಾಪಿಡ್​ ರಶ್ಮಿ ಅವರ ಷೋನಲ್ಲಿ ಕೆಲವು ವಿಷಯಗಳ ಕುರಿತು ಮಾತನಾಡಿದ್ದು, ಅದರಲ್ಲಿ ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ. ಅಂದಹಾಗೆ ನಟಿಗೆ 34 ವರ್ಷ ವಯಸ್ಸು. ನಿಮ್ಮ ವಯಸ್ಸಿನವರು ಅಥವಾ ಸ್ನೇಹಿತರು ಮದುವೆಯಾಗಿ, ಮಕ್ಕಳು ಮಾಡಿಕೊಂಡು ಸೆಟ್ಲ್​ ಆದಾಗ ನಿಮಗೂ ಹಾಗೆಯೇ ಅನ್ನಿಸುತ್ತಾ ಎಂದು ಪ್ರಶ್ನಿಸಿದಾಗ ರಾಗಿಣಿ ಅವರು, ಅದು ನನಗೆ ತುಂಬಾ ಖುಷಿ ಕೊಡುತ್ತದೆ. ಮದುವೆಯಾಗುವುದು, ಮಕ್ಕಳು ಮಾಡಿಕೊಳ್ಳುವುದು ಖುಷಿಯ ವಿಚಾರ. ನನಗೂ ಮದುವೆ ಎಂದರೆ ಇಷ್ಟನೇ. ಹಾಗೆಂದು ಅವರು ಮದ್ವೆಯಾಗ್ತಿದ್ದಾರೆ, ಇವರು ಆಗ್ತಿದ್ದಾರೆ ಎಂದು ನಾವು ಆಗಬಾರದು. ಅದು ನ್ಯಾಚುರಲ್​  ಆಗಿ ಆಗಬೇಕು. ಬೇರೆಯವರು ಫೋರ್ಸ್​ ಮಾಡ್ತಾ ಇದ್ದಾರೆ ಎಂದು ಆದರೆ ಎಡವಟ್ಟು ಆಗುತ್ತದೆ ಎಂದಿದ್ದಾರೆ.
 
ಯಾರ ಡೆಸ್ಟಿನಿ ಹೇಗೋ ಗೊತ್ತಿಲ್ಲ. ಮದುವೆಯಾಗಿ ಒಂದರೆಡು ವರ್ಷಗಳಲ್ಲಿ ಬ್ರೇಕಪ್​, ಡಿವೋರ್ಸ್​ ಆಗ್ತಿದೆ. ಕೆಲವು ಸಂದರ್ಭಗಳಲ್ಲಿ ಸಂಗಾತಿ ಬೆಸ್ಟ್​ ಆಗಿದ್ದರೂ ಯಾರೋ ವರ್ಕ್​ಔಟ್​ ಆಗಲ್ಲ. ಆದ್ದರಿಂದ ಮದುವೆಗೆ ಗಡಿಬಿಡಿ ಮಾಡಬಾರದು ಅದು ಫ್ಲೋನಲ್ಲಿಯೇ ಆಗಬೇಕು ಎಂದಿದ್ದಾರೆ. ಈ ಮೂಲಕ ತಮಗೂ ಮದುವೆಯಾಗುವ ಆಸೆ ಇದೆ ಎನ್ನುವುದನ್ನು ಸ್ಪಷ್ಟಪಡಿಸಿರುವ ನಟಿ, ಆ ಬಗ್ಗೆ ಸಾಕಷ್ಟು ಗೊಂದಲಗಳಿಂದ ಕೂಡಿದ್ದಾರೆ. 

ಸೀರೆ ತೊಡುವ ಭರದಲ್ಲಿ ಒಳಗಿಂದೆಲ್ಲಾ ಮರೆತುಬಿಟ್ರಾ ಉರ್ಫಿ? ವಿಡಿಯೋ ನೋಡಿ ಕಣ್ಮುಚ್ಚಿದ ನೆಟ್ಟಿಗರು!

Latest Videos
Follow Us:
Download App:
  • android
  • ios