ರಕ್ತದಲ್ಲಿ ಪತ್ರ ಬರೆಯುವ, ಕೈಗೆ ಗಾಯ ಮಾಡಿಕೊಂಡು ಹೆಸರು ಬರೆಯುವ ಎಲ್ಲಾ ಅಭಿಮಾನಿಗಳ ವಿರುದ್ಧ ಕಿಚ್ಚ ಸುದೀಪ್ ಬೇಸರ ಮಾಡಿಕೊಂಡಿದ್ದಾರೆ. ನೀವು ಇದೇ ಥರ ಮಾಡುವುದಾದರೆ ನಾನು ಟ್ವೀಟರ್‌ನಲ್ಲಿ, ಸೋಷಲ್ ಮೀಡಿಯಾವನ್ನು ತೊರೆಯಬೇಕಾಗುತ್ತದೆ ಎಂದು
ಬರೆದುಕೊಂಡಿದ್ದಾರೆ.

ಕಿಚ್ಚನ ಅಭಿಮಾನಿಯೊಬ್ಬರು ಕೈಗೆ ಗಾಯಮಾಡಿಕೊಂಡು ರಕ್ತದಲ್ಲಿ ಕಿಚ್ಚ ಎಂದು ಬರೆದು ಫೋಟೋ ತೆಗೆದು ಟ್ವೀಟರ್‌ನಲ್ಲಿ ಸುದೀಪ್‌ಗೆ ಟ್ಯಾಗ್ ಮಾಡಿದ್ದರು. ಅದನ್ನು ನೋಡಿದ ಸುದೀಪ್ ಅಸಹಾಯಕತೆಯಿಂದ, ನೋವಿನಿಂದ ಪತ್ರ ಬರೆದಿದ್ದಾರೆ. ಆ ಪತ್ರ ಇಲ್ಲಿದೆ.

ಇದು ಪ್ರೀತಿ ತೋರಿಸುವ ವಿಧಾನವಲ್ಲ. ಈ ಥರ ಫೋಟೋ ನೋಡುವುದಕ್ಕೆ ತುಂಬಾ ಹಿಂಸೆ ಆಗುತ್ತದೆ. ನೀವು ನನ್ನ ಮಾತಿಗೆ ಬೆಲೆ ಕೊಡುವುದೇ ಆದರೆ ದಯವಿಟ್ಟು ಈ ಥರಮಾಡಿಕೊಳ್ಳಬೇಡಿ. ನಾನು ಟ್ವೀಟರ್‌ನಲ್ಲಿ ಇರುವದರಿಂದ
ತಾನೇ ನೀವು ಈ ರೀತಿ ಮಾಡಿಕೊಳ್ಳುವುದು. ನೀವು ಇದನ್ನೇ ಮುಂದುವರಿಸುವುದಾದರೆ ನಾನು ಟ್ವೀಟರ್, ಸೋಷಲ್ ಮೀಡಿಯಾ ತೊರೆಯಬೇಕಾಗುತ್ತದೆ. ಕಿಚ್ಚ ಬೇಸರ ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ತಮ್ಮನ್ನು ತಾವು ಹಿಂಸೆ ಮಾಡಿಕೊಳ್ಳುವ ಅಭಿಮಾನಿಗಳ ಕುರಿತು ನೋವು ವ್ಯಕ್ತಪಡಿಸಿದ್ದರು. ಈಗ ಮತ್ತೆ ಅಭಿಮಾನಿಗಳ ಪರವಾಗಿ ಟ್ವೀಟರ್ ತೊರೆಯುವ ಮಾತುಗಳನ್ನಾಡಿದ್ದಾರೆ. ಈಗಲಾದರೂ ಅಭಿಮಾನಿಗಳು ಮನಸ್ಸು ಬದಲಿಸಿ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಬಹುದು ಅನ್ನುವ ಆಶಯ ಅವರದು.