- ಹೀಗೆ ಹೇಳಿ​ಕೊಂಡಿದ್ದು ನಟ ಸೂರಜ್‌ ಗೌಡ. ಅದು ‘ನಿನ್ನ ಸನಿ​ಹ​ಕ್ಕೆ’ ಚಿತ್ರದ ಪತ್ರಿ​ಕಾ​ಗೋಷ್ಟಿ. ಚಿತ್ರೀ​ಕ​ರಣ ಮುಗಿ​ಸಿರುವ ಖುಷಿ​ಯಲ್ಲಿ ಚಿತ್ರ​ತಂಡ ಮಾಧ್ಯ​ಮ​ಗಳ ಮುಂದೆ ಬಂತು. ಅಂದ​ಹಾಗೆ ಈ ಚಿತ್ರಕ್ಕೆ ನಿರ್ದೇ​ಶ​ಕರು ಬದ​ಲಾ​ಗಿ​ದ್ದಾರೆ. ಸುಮನ್‌ ಜಾದೂ​ಗರ್‌ ಬದಲು, ಸೂರಜ್‌ ಗೌಡ ಅವರೇ ನಿರ್ದೇ​ಶ​ನದ ಕುರ್ಚಿ​ಯಲ್ಲಿ ಕೂತು ಸಿನಿಮಾ ಮುಗಿ​ಸಿ​ದ್ದಾರೆ. ಅದಕ್ಕೆ ಕಾರಣ ಸುನಿಲ್‌ ಜಾದೂ​ಗರ್‌ ಅವ​ರಿಗೆ ಆ್ಯಕ್ಸಿ​ಡೆಂಟ್‌ ಆಗಿದ್ದು. ಹೀಗಾಗಿ ಅವರು ಇಡೀ ಚಿತ್ರಕ್ಕೆ ಷೋ ರನ್ನರ್‌ ಎನ್ನುವ ಹೊಸ ಪಟ್ಟ​ದಲ್ಲಿ ಕೂತು ಸೂರಜ್‌ ಗೌಡ ಅವ​ರಿಂದ ಸಿನಿಮಾ ನಿರ್ದೇ​ಶನ ಮಾಡಿ​ಸಿ​ದ್ದಾರೆ.

ನಟನೆ, ನಿರ್ದೇ​ಶನ ಎರ​ಡನ್ನೂ ಒಟ್ಟಿಗೆ ನಿಭಾ​ಯಿ​ಸಿ​ರುವ ಸೂರಜ್‌ ಮಾತಿಗೆ ನಿಂತರು. ‘ಇಂಥ ಒಳ್ಳೆಯ ತಂಡ ಇದ್ದರೆ ಖಂಡಿತ ಸಿನಿಮಾ ನಿರ್ದೇ​ಶನ ಮಾಡ​ಬ​ಹುದು. ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾ. ನಾನು ಇಲ್ಲಿ​ಯವ​ರೆಗೂ ನಟಿ​ಸಿದ ಸಿನಿ​ಮಾ​ಗ​ಳಲ್ಲಿ ನಟ​ನೆ​ಗಿಂತ ಹೆಚ್ಚಾಗಿ ಸಿನಿಮಾ ಕಲಿ​ತು​ಕೊಂಡೆ. ಒಂದು ಸಿನಿಮಾ ಎಲ್ಲ ವಿಭಾ​ಗ​ಗ​ಳಲ್ಲಿ ಹೇಗೆ ಕೆಲಸ ಆಗು​ತ್ತದೆ ಎಂದು ತಿಳಿ​ದು​ಕೊಂಡೆ. ಅದೇ ತಿಳು​ವ​ಳಿಕೆ ನನಗೆ ನಿರ್ದೇ​ಶ​ನಕ್ಕೆ ಅನು​ಕೂ​ಲ​ವಾ​ಯಿತು. ನಿರ್ದೇ​ಶ​ಕರು ಆಸ್ಪ​ತ್ರೆ​ಯಿಂದ ಬಂದ ಮೇಲೆ ಫುಟೇಜ್‌ ನೋಡಿ, ನೀವೇ ನಿರ್ದೇ​ಶನ ಮುಂದು​ವ​ರಿಸಿ ಎಂದರು. ತಾತ್ಕಾ​ಲಿಕ ನಿರ್ದೇ​ಶ​ಕ​ನಾಗಿ ಬಂದ​ವನು ಇಡೀ ಚಿತ್ರಕ್ಕೆ ನಾನೇ ನಿರ್ದೇ​ಶ​ಕ​ನಾದೆ. ನಾನೇ ಕತೆ ಮತ್ತು ಚಿತ್ರ​ಕಥೆ ಬರೆ​ದಿ​ದ್ದ​ರಿಂದ ನಿರ್ದೇ​ಶ​ನ ಸುಲ​ಭ​ವಾ​ಯಿ​ತು’ ಎಂದರು ಸೂರಜ್‌ ಗೌಡ.

ಸೂರಜ್ ಗೌಡ ಕಂಡು ‘ನಿನ್ನ ಸನಿಹಕೆ...’ ಅಂತಿದ್ದಾರೆ ರಾಜ್ ಮೊಮ್ಮಗಳು

ಧನ್ಯಾ ರಾಮ್‌​ಕು​ಮಾರ್‌ ಮೊದಲ ಬಾರಿಗೆ ನಾಯಕಿ ಆಗಿ ಲಾಂಚ್‌ ಆಗು​ತ್ತಿ​ರುವ ಚಿತ್ರವಿದು. ‘ನಮ್ಮ ಸಿನಿಮಾ ಇಷ್ಟುಚೆನ್ನಾಗಿ ಬರು​ತ್ತದೆ ಎಂದು ನಿರೀಕ್ಷೆ ಮಾಡಿ​ರ​ಲಿಲ್ಲ. ಆದರೆ, ಶೂಟಿಂಗ್‌ ಆದ ಮೇಲೆ ದೃಶ್ಯ​ಗ​ಳನ್ನು ನೋಡಿ​ದಾಗ ನಮ್ಮ ಶ್ರಮ ಸಾರ್ಥಕ ಅನಿ​ಸಿತು. ನಾನು ಹೊಸ​ಬಳು. ಆದರೂ ಎಲ್ಲರ ಸಹ​ಕಾ​ರ​ದಿಂದ ತೆರೆ ಮೇಲೆ ನನ್ನ ಪಾತ್ರ​ವನ್ನು ತುಂಬಾ ಅಚ್ಚು​ಕ​ಟ್ಟಾಗಿ ನಿಭಾ​ಯಿ​ಸಿ​ದ್ದೇನೆ ಎಂದು​ಕೊ​ಳ್ಳು​ತ್ತೇನೆ. ಮೊದಲ ಚಿತ್ರ​ದಲ್ಲೇ ಒಳ್ಳೆಯ ಕೋ-ಸ್ಟಾರ್‌, ಒಳ್ಳೆಯ ಕತೆ ಸಿಕ್ಕಿದ್ದು ನನ್ನ ಅದೃ​ಷ್ಟ’ ಎಂದರು ಧನ್ಯಾ ರಾಮ್‌ಕುಮಾರ್‌.

'ಇಷ್ಟ ಇಲ್ಲದಿದ್ರೂ ಒತ್ತಾಯಕ್ಕೆ ಶಿವಣ್ಣ 'ಪೋಲೀಸ್‌ ಬೇಬಿ' ಹಾಡು ಒಪ್ಕೊಂಡೆ'!

ಈ ಚಿತ್ರದ ಮೊದಲ ಶೆಡ್ಯೂಲ್‌ ಶೂಟಿಂಗ್‌ ಮುಗಿ​ಸಿ​ಕೊಂಡ ಮೇಲೆ ಆ್ಯಕ್ಸಿ​ಡೆಂಟ್‌ ಆಗಿ ಕೈ, ಬೆನ್ನ ಮೂಳೆಗೆ ಪೆಟ್ಟಾಗಿ ಬೆಡ್‌ ವಿಶ್ರಾಂತಿ ತೆಗೆ​ದು​ಕೊ​ಳ್ಳ​ಬೇ​ಕಾ​ಯಿತು. ನಾಲ್ಕೈದು ವಾರ ಬೆಡ್‌ ಮೇಲೆ ಮಲ​ಗಿ​ರ​ಬೇ​ಕಾಯಿತು. ಆ ಕಾರ​ಣಕ್ಕೆ ಆಸ್ಪ​ತ್ರೆ​ಯಿಂದ ಮರಳಿ ಬಂದ ಮೇಲೂ ಸೂರಜ್‌ ಅವರೇ ನಿರ್ದೇ​ಶ​ಕ​ರಾಗಿ ಮುಂದು​ವ​ರಿ​ಯ​ಲಿ ಎಂದು ತಾವೇ ಹೇಳಿದ್ದು ಎಂಬುದು ಸುನೀ​ಲ್‌ ಜಾದೂ​ಗರ್‌ ಹೇಳಿ​ಕೊಂಡರು. ಚಿತ್ರಕ್ಕೆ ರಘು ​ಧೀ​ಕ್ಷಿತ್‌ ಸಂಗೀತ ನೀಡಿ​ದ್ದಾರೆ.ಅಭಿ​ಲಾಷ್‌ ಕಳತ್ತಿ ಕ್ಯಾಮೆರಾ ಹಿಡಿ​ದಿ​ದ್ದಾರೆ. ಮಂಜು​ನಾಥ್‌ ಹೆಗಡೆ, ಅರುಣಾ ಬಾಲ​ರಾಜ್‌, ಕರಿ​ಸುಬ್ಬು, ರಜ​ನಿ​ಕಾಂತ್‌, ಚಿತ್ಕಲಾ ಬಿರಾ​ದರ್‌, ಸೌಮ್ಯ ಭಟ್‌ ಚಿತ್ರ​ದಲ್ಲಿ ನಟಿ​ಸಿ​ದ್ದಾರೆ.

ಸೂರಜ್‌ನ ಮಿಸ್‌ ಮಾಡ್ಕೊಳ್ತೇನೆ, ರೊಮ್ಯಾನ್ಸ್‌ ಮಾಡೋಕೆ ಮುಜುಗರವಿಲ್ಲ; ರಾಜ್‌ ಮೊಮ್ಮಗಳ ಮಾತು!