ಬೆಂಗಳೂರು(ಫೆ.19): ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ನಟ ರಾಘವೇಂದ್ರ ರಾಜ್‌ಕುಮಾರ್‌ ಗುರುವಾರ ಡಿರ್ಚಾರ್ಜ್‌ ಆಗಿ ಮನೆಗೆ ತೆರಳಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ, ‘ಆ್ಯಂಜಿಯೊಗ್ರಾಮ್‌ ಮಾಡಿದ ಬಳಿಕ ಹೃದಯಕ್ಕೆ ಪೇಸ್‌ಮೇಕರ್‌ (ಹೃದಯಬಡಿತ ನಿಯಂತ್ರಿಸುವ ಉಪಕರಣ) ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ಮತ್ತೆ ಶೂಟಿಂಗ್‌ಗೆ ವಾಪಾಸಾಗಲಿದ್ದೇನೆ’ ಎಂದು ತಿಳಿಸಿದ್ದಾರೆ. 

ರಾಘವೇಂದ್ರ ರಾಜ್‌ಕುಮಾರ್‌ ಆರೋಗ್ಯದಲ್ಲಿ ಚೇತರಿಕೆ;ಇಂದು ಆಸ್ಪತ್ರೆಯಿಂದ ಡಿಸ್‌ಚಾಜ್‌ರ್‍ ಸಾಧ್ಯತೆ!

‘ಶೂಟಿಂಗ್‌ ನನ್ನನ್ನು ಕಾಪಾಡಿತು. ಬೆಂಗಳೂರಿನ ಮಲ್ಲೇಶ್ವರದ ನೂರು ಅಡಿ ರಸ್ತೆಯಲ್ಲಿರುವ ಮಧು ಶೂಟಿಂಗ್‌ ಹೌಸ್‌ನಲ್ಲಿ ಬೆಳಕು ಹೆಸರಿನ ಚಿತ್ರದ ಶೂಟಿಂಗ್‌ನಲ್ಲಿದ್ದಾಗ ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರು ಕಾಣಿಸಿತು. ತಕ್ಷಣ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಹೋಗಿ ತಪಸಾಣೆ ಮಾಡಿಸಿಕೊಳ್ಳಲಾಯಿತು. ಶೂಟಿಂಗ್‌ ಇಲ್ಲದೆ ಬೇರೆ ಕಡೆ ಇದ್ದಿದ್ದರೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಬರಲು ಆಗುತ್ತಿರಲಿಲ್ಲ. ಈ ಹಿಂದೆ ಸ್ಟೊ್ರೕಕ್‌ ಆದಾಗ ಇದೇ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿದ್ದೆ. ಅಭಿಮಾನಿಗಳ ಆಶೀರ್ವಾದ, ಕುಟುಂಬದವರ ಪ್ರೀತಿ ನನ್ನನ್ನು ಕಾಪಾಡುತ್ತದೆ’ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅವರ ಪುತ್ರ ವಿನಯ್‌ ರಾಜ್‌ಕುಮಾರ್‌, ನಟ ಶಿವರಾಜ್‌ಕುಮಾರ್‌ ಹಾಗೂ ಕುಟುಂಬದವರು ಜತೆಯಲ್ಲಿದ್ದರು.