ಫೆ.16ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಎರಡು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿಟ್ಟು ರಾಘವೇಂದ್ರ ರಾಜ್‌ಕುಮಾರ್‌ ಆರೋಗ್ಯ ತಪಸಾಣೆ ಮಾಡಲಾಗಿದ್ದು, ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬುಧವಾರ ಮಾಧ್ಯಮಗಳ ಜತೆಗೆ ಮಾತನಾಡಿದ ನಟ ಶಿವರಾಜ್‌ಕುಮಾರ್‌, ‘ಹೃದಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಕಂಡು ಬಂತು. ಮುನ್ನೆಚ್ಚರಿಕೆಯಿಂದ ಆಸ್ಪತ್ರೆಗೆ ದಾಖಲಿಸಿದ್ದೇವೆ. ಎಲ್ಲಾ ರೀತಿಯ ಆರೋಗ್ಯ ಪರೀಕ್ಷೆ ಆಗಿದೆ. ಏನೂ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇಂದು ಡಿಸ್ಚಾಜ್‌ರ್‍ ಆಗಲಿದ್ದಾರೆ’ ಎಂದರು.

ನಟ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು! 

ರಾಘು ಮಾಮ ಅವರನ್ನು ಭೇಟಿ ಮಾಡಿ ಮಾತನಾಡಿಸಿದ್ದೇನೆ. ಆರೋಗ್ಯವಾಗಿದ್ದಾರೆ. ಅಭಿಮಾನಿಗಳ ಆಶೀರ್ವಾದ, ಪ್ರೀತಿಯಿಂದ ಆದಷ್ಟುಬೇಗ ಗುಣಮುಖರಾಗುತ್ತಾರೆ.- ಶ್ರೀಮುರಳಿ, ನಟ

ರಾಘವೇಂದ್ರ ರಾಜ್‌ಕುಮಾರ್‌ ಅವರನ್ನು ನೋಡಲು ಬಂದ ಪುನೀತ್‌ ರಾಜ್‌ಕುಮಾರ್‌, ‘ರಾಘಣ್ಣ ಅವರಿಗೆ ಸ್ಟೊ್ರೕಕ್‌ ಆಗಿರುವ ಕಾರಣಕ್ಕೆ ಅವರಿಗೆ ಏನೇ ಸಣ್ಣ ಸಮಸ್ಯೆ ಆದರೂ ನಮಗೆ ಭಯ ಆಗುತ್ತದೆ. ಅದಕ್ಕೆ ಆಸ್ಪತ್ರೆಗೆ ಸೇರಿಸಿದ್ದೇವೆ. ಹುಷಾರಾಗಿದ್ದಾರೆ’ ಎಂದರು.