ಬೆಂಗಳೂರು (ಜ. 14): ಸಿನಿಮಾ ಪ್ರಚಾರ ಸಂಸ್ಥೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ತನ್ನ 43 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಹಿರಿಯ ನಿರ್ಮಾಪಕ ಕೆ. ಪ್ರಭಾಕರ್‌ ಹಾಗೂ ಹಿರಿಯ ಸಿನಿಮಾ ಪತ್ರಕರ್ತೆ ಎಸ್‌.ಜಿ.ತುಂಗಾ ರೇಣುಕಾ ‘ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಸಂಸ್ಥೆ ನೀಡುವ ಪ್ರತಿಷ್ಠಿತ ‘ಡಾ. ರಾಜ್‌ ಕುಮಾರ್‌ ಪ್ರಶಸ್ತಿ’ಗೆ ಹಿನ್ನೆಲೆ ಗಾಯಕ ಪಿ. ಸುಶೀಲಾ ಅವರನ್ನು ಆಯ್ಕೆ ಮಾಡಲಾಗಿದೆ.

ಕಮಲಿ ಕ್ಯಾತೆ; ಧಾರಾವಾಹಿ ನಿರ್ದೇಶಕನ ವಿರುದ್ಧ ಇದೆಂಥ ದೂರು

‘ಯಜಮಾನ’ ಚಿತ್ರದ ಖ್ಯಾತಿಯ ‘ಆರ್‌. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ’ಗೆ ನಿರ್ದೇಶಕ ಎಸ್‌.ಉಮೇಶ್‌, ‘ನಟಿ ಜಯಮಾಲ ಎಚ್‌.ಎಂ. ರಾಮಚಂದ್ರ ಪ್ರಶಸ್ತಿ’ಗೆ ನಟಿ ಪ್ರಮೀಳಾ ಜೋಷಾಯ್‌, ‘ಎಂ.ಎಸ್‌. ರಾಮಯ್ಯ ಮೀಡಿಯಾ ಆ್ಯಂಡ್‌ ಎಂಟರ್‌ಟೈನ್‌ಮೆಂಟ್‌’ ಪ್ರಶಸ್ತಿಗೆ ಸಂಗೀತ ನಿರ್ದೇಶಕ ಸಾಗರ್‌ ಗುರುರಾಜ್‌, ‘ನಿರ್ಮಾಪಕ ಹಾಗೂ ನಿರ್ದೇಶಕ ಕೆ. ಜಯರಾಂ ಪ್ರಶಸ್ತಿ’ಗೆ ಪಿ. ಶೇಷಾದ್ರಿ, ‘ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ’ ಪ್ರಶಸ್ತಿಗೆ ಶ್ರೀನಿವಾಸ ಪ್ರಭು, ಚೊಚ್ಚಲ ನಿರ್ದೇಶನಕ್ಕೆ ನೀಡುವ ನಿರ್ದೇಶಕ ಬಿ. ಸುರೇಶ್‌ ಪ್ರಶಸ್ತಿಗೆ ರಮೇಶ್‌ ಇಂದಿರಾ(ಪ್ರೀಮಿಯರ್‌ ಪದ್ಮಿನಿ) ಹಾಗೂ ರೂಪಾ ರಾವ್‌ (ಗಂಟು ಮೂಟೆ) ಅವರನ್ನು ಸಂಸ್ಥೆ ಆಯ್ಕೆ ಮಾಡಿದೆ.

ಐಷಾರಾಮಿ ಹೋಟೆಲ್‌ನಲ್ಲಿ ‘ದೊಡ್ಡವರಿಗೆ’ ಬಲೆ ಬೀಸ್ತಿದ್ದ ಬಿಗ್ ಬಾಸ್ ಸ್ಪರ್ಧಿಯ ಮಾಜಿ ಲವರ್!

ಹಿರಿಯ ಪತ್ರಕರ್ತ ಪಿ.ಜಿ. ಶ್ರೀನಿವಾಸ ಮೂರ್ತಿ ಸ್ಮರಣಾರ್ಥ ಪ್ರಶಸ್ತಿಗೆ ಗೀತ ರಚನೆಕಾರ ಕೀನಾಲ್‌ ರಾಜ್‌ ಹಾಗೂ ಹಿರಿಯ ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ನೀಡುವ ಪ್ರಶಸ್ತಿಗೆ ರಮೇಶ್‌ ಭಟ್‌ ಪಾತ್ರರಾಗಿದ್ದಾರೆ. ಜ.25ರಂದು ಸಂಜೆ 5.30ಕ್ಕೆ ಬೆಂಗಳೂರಿನ ಚಾಮರಾಜಪೇಟೆ ಕಲಾವಿದರ ಸಂಘದ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 43ನೇ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ಇದೇ ವೇಳೆ ಸಂಸ್ಥೆಯ ಸ್ಥಾಪಕರಾದ ಡಿ.ಸುಧೀಂದ್ರ ಅವರ ವೃತ್ತಿಜೀವನದ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನವಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್‌.