ಸ್ಯಾಂಡಲ್‌ವುಡ್‌ ರಾಕಿಂಗ್‌ ಕಪಲ್‌ನ ಜೊತೆಯಾಗಿ ಮತ್ತೆ ತೆರೆ ಮೇಲೆ ಕಾಣಬೇಕೆಂದು ಬಯಸುತ್ತಿದ್ದ ಅಭಿಮಾನಿಗಳಿಗೆ ಇಂದು ಬಿಗ್ ಸರ್ಪ್ರೈಸ್‌ ಸಿಕ್ಕಿದೆ. ಅದುವೇ  ಜಾಹೀರಾತೊಂದರಲ್ಲಿ ರಾಧಿಕಾ ಯಶ್‌ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಆನ್‌ ಸ್ಕ್ರೀನ್ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. 

ಯಶ್ ಮುಟ್ಟಿದ್ದೆಲ್ಲಾ ಚಿನ್ನ; ಮಾಡಿಟ್ಟಿರುವ ಆಸ್ತಿ ಎಷ್ಟು ಗೊತ್ತಾ ? 

'ಆದಿ ಲಕ್ಷ್ಮಿಪುರಾಣ' ಚಿತ್ರದ ನಂತರ ರಾಧಿಕಾ ಪಂಡಿತ್ ಸಿನಿಮಾ ಹಾಗೂ ಯಾವುದೇ ಜಾಹೀರಾತಿನಲ್ಲಿ ಅಭಿನಯಿಸಿರಲಿಲ್ಲ. ನಿಖರವಾಗಿ ಹೇಳಬೇಕೆಂದರೆ ಇದು ರಾಧಿಕಾ ಪತಿ ಜೊತೆ ಜೊತೆಯಾಗಿ ಕಾಣಿಸಿಕೊಂಡಿರುವ ಮೊದಲ ಜಾಹೀರಾತು. ಇದು ಗುಡ್‌ ನ್ಯೂಸ್‌ ಅಲ್ವಾ? ಅಭಿಮಾನಿಗಳು ಯಾಕೆ ಬೇಸರ ವ್ಯಕ್ತ ಪಡಿಸಿದ್ದಾರೆ?

ರಾಧಿಕಾ ಹಾಗೂ ಯಶ್  ಅಭಿನಯದ 'ಮಿಸ್ಟರ್  ಆ್ಯಂಡ್ ಮಿಸಸ್ ರಾಮಾಚಾರಿ ಸಿನಿಮಾ ಹಿಟ್ ಆದ ಬಳಿಕ ಇಬ್ಬರೂ ಸಂತು ಸ್ಟ್ರೈಟ್ ಫಾರ್ವರ್ಡ್‌' ಸಿನಿಮಾದಲ್ಲಿ ಒಂದಾಗಿದ್ದರು. ಅದಾದ ಬಳಿಕೆ ಆನ್‌ ಸ್ಕ್ರೀನ್‌ನಲ್ಲಿ ಈ ಹಿಟ್‌ ಜೋಡಿಗೆ ಸಾಕಷ್ಟು ಕಥೆಗಳು ರೆಡಿಯಾಗಿದ್ದರೂ ರಾಧಿಕಾ ಪರ್ಸನಲ್‌ ಲೈಫ್‌ನಲ್ಲಿ ಬ್ಯುಸಿಯಾಗಿದ್ದರು. 

ರಾಧಿಕಾಗೆ ಗುಲಾಬಿ ಹೂ ಕೊಟ್ಟ ಯಶ್; ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಶನ್ ಹೀಗಿತ್ತು 

ನೆಟ್ಟಿಗರ ಕಾಮೆಂಟ್:
'ನಿಮ್ಮಿಬ್ಬರನ್ನು ಒಟ್ಟಾಗಿ ನೋಡಿ ಖುಷಿಯಾಗುತ್ತಿದೆ' ಎಂದು ಒಬ್ಬರು ಹೇಳಿದರೆ ಮತ್ತೊಬ್ಬ ನೆಟ್ಟಿಗರ 'ಜಾಹೀರಾತಿನಲ್ಲಿ ಭಾಗಿಯಾಗುವ ಮುನ್ನ, ಉತ್ಪನ್ನದ ಗುಣಮಟ್ಟ ತಿಳಿದುಕೊಳ್ಳಿ'ಎಂದು ಹೇಳಿದ್ದಾರೆ. ಸಿನಿಮಾದಲ್ಲಿ ಇಬ್ಬರನ್ನೂ ನೋಡಬೇಕು ಎಂಬ ಆಸೆ ಇತ್ತು. ಆದರೆ ಜಾಹೀರಾತಿನಲ್ಲಿ ಅಲ್ಲ. ಆದಷ್ಟು ಬೇಗ ಸಿನಿಮಾ ಸಿಹಿ ಮಾಡಿ ಎಂದೂ, ಫ್ಯಾನ್ಸ್ ಅಗ್ರಹಿಸಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Yash (@thenameisyash)