Asianet Suvarna News Asianet Suvarna News

ಪುನೀತ್‌ ರಾಜ್‌ಕುಮಾರ್‌ 49ನೇ ಹುಟ್ಟುಹಬ್ಬ: ಕುಟುಂಬ ಸಮೇತ ಅಪ್ಪು ಸಮಾಧಿ ದರ್ಶನಕ್ಕೆ ಬರುತ್ತಿರುವ ಅಭಿಮಾನಿಗಳು!

ಇಂದು (ಮಾರ್ಚ್‌ 17) ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ.. ಅಂಜನಿ ಪುತ್ರನಾಗಿ.. ರಾಜಕುಮಾರನಂತೆ ಮೆರೆದ ನಟ ಸಾರ್ವಭೌಮ, ಯುವರತ್ನ ಪುನೀತ್‌ ರಾಜ್‌ಕುಮಾರ್‌ ಅವರ 49ನೇ ವರ್ಷದ ಹುಟ್ಟುಹಬ್ಬದ ಸ್ಫೂರ್ತಿ ದಿನ ಇದು. 

Puneeth Rajkumar 49th birthday Fans visit Appu Samadhi with family gvd
Author
First Published Mar 17, 2024, 9:30 AM IST

ಬೆಂಗಳೂರು (ಮಾ.17): ಇಂದು (ಮಾರ್ಚ್‌ 17) ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ.. ಅಂಜನಿ ಪುತ್ರನಾಗಿ.. ರಾಜಕುಮಾರನಂತೆ ಮೆರೆದ ನಟ ಸಾರ್ವಭೌಮ, ಯುವರತ್ನ ಪುನೀತ್‌ ರಾಜ್‌ಕುಮಾರ್‌ ಅವರ 49ನೇ ವರ್ಷದ ಹುಟ್ಟುಹಬ್ಬದ ಸ್ಫೂರ್ತಿ ದಿನ ಇದು. ನಟ ಪುನೀತ್​ ರಾಜ್​ಕುಮಾರ್ ಅವರು ಭೌತಿಕವಾಗಿ ನಮ್ಮನಗಲಿ ಮೂರು ವರ್ಷಗಳು ಕಳೆದಿವೆ. ಆದರೆ ಆ ಕನ್ನಡದ ಕಂದ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಇನ್ನು ಹುಟ್ಟುಹಬ್ಬದ ಹಿನ್ನಲೆ ಅಪ್ಪು ಸಮಾಧಿಗೆ ಅಭಿಮಾನಿಗಳು ಕುಟುಂಬ ಸಮೇತ ದರ್ಶನಕ್ಕೆ ಬರುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೂ ಪುನೀತ್ ಸಮಾಧಿಯತ್ತ ಅಭಿಮಾನಿಗಳು ಆಗಮಿಸುತ್ತಿದ್ದು, ರಾತ್ರಿ 11 ಗಂಟೆಯಿಂದಲೇ ಕಂಠೀರವ ಸ್ಟೂಡಿಯೋಗೆ ಆಗಮಿಸಿದ್ದಾರೆ. 

ರಾಜ್ಯದ ಮೂಲೆ ಮೂಲೆಯಿಂದ  ಜನ ಬರುತ್ತಿದ್ದು, 9 ಗಂಟೆ ಬಳಿಕ ಅಪ್ಪು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಅಪ್ಪು ಸಮಾಧಿಗೆ ಆಗಮಿಸ್ತಿರುವ ಅಭಿಮಾನಿಗಳಿಗೆ ಕೆಎಂಎಫ್ ನಿಂದ ಮಜ್ಜಿಗೆ, ನೀರು ವಿತರಣೆ ಮಾಡಲಾಗುತ್ತಿದ್ದು, ಅಪ್ಪು ಫ್ಯಾನ್ಸ್ ಗೆ ಉಚಿತ ಮಜ್ಜಿಗೆ ನೀರು ಪ್ಯಾಕೆಟ್ ವಿತರಿಸಲಾಗುತ್ತಿದೆ. 10 ಲಕ್ಷ ನೀರು ಹಾಗೂ ಮಜ್ಜಿಗೆ ಪ್ಯಾಕೆಟ್ ವಿತರಣೆ ಮಾಡಲಾಗುತ್ತಿದ್ದು, ಈ ಹಿಂದೆ ಪುನೀತ್ ರಾಜ್‍ಕುಮಾರ್ ಕೆಎಂಎಫ್ ಬ್ರಾಂಡ್ ಅಂಬಾಸಿಡರ್ ಆಗಿದ್ದರು.

ರಗಡ್‌ ಪೊಲೀಸ್ ಗೆಟಪ್​​ನಲ್ಲಿ ಬಿಗ್​ಬಾಸ್ ತನಿಷಾ: ಲೇಡಿ ಸಿಂಗಂ ಬೆಂಕಿ ಗುರು ಎಂದ ಫ್ಯಾನ್ಸ್‌!

ನಟ ಪುನೀತ್ ರಾಜ್‌ಕುಮಾರ್ ಸರಳ ಸಜ್ಜನ ವ್ಯಕ್ತಿ: ದೇವರಲ್ಲಿ ಭಯ, ಭಕ್ತಿ ಇರುವುದರಿಂದ ಸಮಾಜದಲ್ಲಿ ಎಲ್ಲಾ ಸಮುದಾಯದ ಜನ ಅವರ ನಂಬಿಕೆಯಂತೆ ವಿವಿಧ ಬಗೆಯಲ್ಲಿ ದೇವರ ಪೂಜೆ ಮಾಡುತ್ತಿರುವುದು ದೇವನೊಬ್ಬ ನಾಮ ಹಲವು ಎಂಬುವುದಕ್ಕೆ ಪೂರಕ ಹಾಗೂ ಪ್ರೇರಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅಭಿಪ್ರಾಯಪಟ್ಟರು. ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಗಾಳಿಗುಡ್ಡೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ ಡಾ. ಪುನೀತ್ ರಾಜ್‌ಕುಮಾರ್ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ನಟ ಪುನೀತ್ ರಾಜ್‌ಕುಮಾರ್ ಸರಳ, ಸಜ್ಜನ ವ್ಯಕ್ತಿಯಾಗಿದ್ದವರು. 

ಅತ್ಯಂತ ವಿನಯ ಹಾಗೂ ಸಂಯಮದಿಂದ ಎಲ್ಲರೊಂದಿಗೆ ಮಾತನಾಡುವ ಸೌಜನ್ಯ ಮೈಗೂಡಿಸಿಕೊಂಡಿದ್ದರು. ಜೊತೆಗೆ ನನ್ನ ಪುತ್ರನ ಆಪ್ತ ಸ್ನೇಹಿತನಾಗಿದ್ದರು ಎಂದು ಹೇಳಿದರು. ಈ ಭಾಗದಲ್ಲಿ ಕಾಫಿ ತೋಟ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ವನ್ಯಜೀವಿ ಹಾಗೂ ಅರಣ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು, ಇಲ್ಲಿಗೆ ಬರಬೇಕೆಂಬ ಇಂಗಿತ ವ್ಯಕ್ತಪಡಿಸುತ್ತಿದ್ದ ಪುನೀತ್ ರಾಜ್‌ಕುಮಾರ್ ಅಗಲಿಕೆ ಇಡೀ ದೇಶ, ರಾಜ್ಯ, ವಿದೇಶಗಳಿಗೆ ತುಂಬಲಾರದ ನಷ್ಟ ಎಂದು ಹೇಳಿದರು.

ಖರ್ಚಿಗೂ ಹಣವಿಲ್ಲದಂತೆ ಕಾಂಗ್ರೆಸ್‌ ಬ್ಯಾಂಕ್‌ ಖಾತೆ ಸೀಜ್‌ ಮಾಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಕನ್ನಡ ಭಾಷೆ ಬೆಳವಣಿಗೆಗೆ ಎಲ್ಲಾ ರೀತಿ ಹೋರಾಟಕ್ಕೆ ಬದ್ಧವಾಗಿದ್ದೇನೆ, ಎಲ್ಲರ ಸಹಕಾರದೊಂದಿಗೆ ಜಿಲ್ಲೆ ಹಾಗೂ ಗಾಳಿಗುಡ್ಡೆ ಶಿರವಾಸೆ ಎಲ್ಲವನ್ನು ಅಭಿವೃದ್ಧಿ ಮಾಡೋಣ, ಗಾಳಿಗುಡ್ಡೆ ಗ್ರಾಮದ ಸರ್ಕಾರಿ ಶಾಲೆ ಅಭಿವೃದ್ಧಿ ಪಡಿಸಲು ಶ್ರಮಿಸುವ ಭರವಸೆ ನೀಡಿದರು. ಅಧಿಕಾರ ಇರಲಿ ಇಲ್ಲದಿರಲಿ ಜನಸೇವೆಗೆ ಹಾಗೂ ದೇವರ ಕಾರ್ಯಗಳಿಗೆ ನಾನು ಸದಾ ಸಿದ್ಧ. ನಿಮ್ಮೆಲ್ಲರ ಸಹಕಾರ ಕಾಂಗ್ರೆಸ್ ಮುಖಂಡರ ಆಶೀರ್ವಾದದ ಫಲವಾಗಿ ಇಂದು ನಿಮ್ಮ ಮುಂದೆ ಸಚಿವನಾಗಿ ಇದ್ದೇನೆ ಎಂದು ಹೇಳಿದರು.

Follow Us:
Download App:
  • android
  • ios