Asianet Suvarna News Asianet Suvarna News

ಉಡಾಳ ಹುಡುಗನ ಬದುಕು ಬದಲಿಸಿದ ಪುನೀತ ‘ರಾಜಕುಮಾರ'

*  ವಿಕಲಚೇತನ ಶಿಕ್ಷಕರೊಬ್ಬರ ಮಾತುಗಳಿಂದ ಭಾವೋದ್ವೇಗಕ್ಕೊಳಗಾಗಿದ್ದ ಪುನೀತ್
*  ಅಪ್ಪು ಅಪ್ಪುಗೆಯಲ್ಲಿ ಬಡವರ ಕಾಳಜಿಯಿತ್ತು, ಕಕ್ಕುಲತೆಯಿತ್ತು
*  ಯಾದಗಿರಿಯ ರೈತ ಸಂಘದ ಮುದುಕಪ್ಪ ಚಾಮನಳ್ಳಿ ಮೆಲುಕು

Puneeth Movie Rajkumar Change Young Man Life in Yadgir grg
Author
Bengaluru, First Published Oct 30, 2021, 1:01 PM IST

ಯಾದಗಿರಿ(ಅ.30):   ಉಡಾಳ ಈ ಹುಡುಗನ ಬದುಕು ಬದಲಿಸಿದ್ದು ಪುನೀತರ ‘ರಾಜಕುಮಾರ’(Raajakumara) ಚಲನಚಿತ್ರ. ಅಪ್ಪುವಿನ ಈ ಚಲನಚಿತ್ರ(Movie) ನೋಡಿದ ಮೇಲೆ ಬದುಕಿನ ಬಗ್ಗೆ ಹೊಸದೊಂದು ಕನಸು ಕಂಡ, ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತಹ ಬಾಳು ಬಾಳಬೇಕೆಂಬ ಹೊಸ ಹೆಜ್ಜೆಯೊಂದಿಗೆ ಬದುಕು ಸಾಗಿಸುತ್ತಿರುವ ಯಾದಗಿರಿಯ ರೈತ ಸಂಘದ ಮುದುಕಪ್ಪ ಚಾಮನಳ್ಳಿ ಪುನೀತ್ ಮಾರ್ಗದರ್ಶನದಲ್ಲೇ ಬೆಳೆದು ಬಂದ ಹುಡುಗ. ತನ್ನ ಭವಿಷ್ಯವನ್ನೇ ಬದಲಿಸಿದ, ಬದುಕುವುದನ್ನು ಕಲಿಸಿದ ದೊಡ್ಮನೆಯ ‘ರಾಜಕುಮಾರ’ನ ಅಗಲಿಕೆ ಮುದುಕಪ್ಪನ ಕಣ್ಣೀರಾಗಿಸಿತ್ತು.

"

ಊರಲ್ಲಿ ಲಂಗಾ (ಉಡಾಳ) ಎಂದೇ ಕುಖ್ಯಾತಿಯಾಗಿದ್ದ ತನಗೆ ಪುನೀತ್ ಅವರ ರಾಜಕುಮಾರ ಚಲನಚಿತ್ರ ತನ್ನ ಬದುಕಿನ ದಿಕ್ಕನ್ನೇ ಬದಲಿಸಿ, ಮನುಷ್ಯತ್ವ ಕಲಿಸಿತಂತೆ. ಅಪ್ಪುವಿನಂತೆ(Appu) ಸಕಲರಿಗೂ ಲೇಸನ್ನೇ ಬಯಸುವ, ಮತ್ತೊಬ್ಬರ ಕಷ್ಟ-ಸುಖಕ್ಕೆ ಸ್ಪಂದಿಸುವ, ಅಪ್ಪುವನ್ನೇ ಆದರ್ಶವಾಗಿಟ್ಟುಕೊಂಡ ಯಾದಗಿರಿಯ ಮುದುಕಪ್ಪ ಚಾಮನಳ್ಳಿ, ಅಪ್ಪುವಿನ ಕಟ್ಟಾಭಿಮಾನಿಯೂ ಹೌದು. ಪುನೀತ್(Puneeth Rajkumar) ಅಗಲಿಕೆಯ ಕುರಿತು ತಮ್ಮನ್ನು ಸಂಪರ್ಕಿಸಿದ ‘ಕನ್ನಡಪ್ರಭ’ದೊಂದಿಗೆ(Kananda Prabha) ಮಾತನಾಡಿದ ಮುದುಕಪ್ಪರ ದನಿಯಲ್ಲಿ ದು:ಖದ ಕಟ್ಟೆಯೊಡೆದಿತ್ತು. ಅಪ್ಪುವಿನ ಅಪ್ಪುಗೆಯಲ್ಲಿ ಮಿಂದೆದ್ದ ಮುದುಕಪ್ಪ, ತಮಗೆ ಬದುಕು ಕಲಿಸಿದ ಹೆಮ್ಮೆಯ ನಟನ ನೆನೆದು ಕಣ್ಣೀರಾದರು.

ಗಂಗಾವತಿ: ಅಂಜನಾದ್ರಿ ದರ್ಶನವಾಗದೆ ನಿರಾಸೆಯಿಂದ ವಾಪಸಾಗಿದ್ದ ಪುನೀತ್

ಮದುವೆಗೆ ಹಾರೈಸಿ ರೇಷ್ಮೆ ಬಟ್ಟೆ ನೀಡಿದ್ದ ಪುನೀತ್: 

2019 ರಲ್ಲಿ ತನ್ನ ಮದುವೆಯ ಆಹ್ವಾನ(Wedding Invitation) ಪತ್ರ ನೀಡಲು ಬೆಂಗಳೂರಿನ(Bengaluru) ಪುನೀತರ ಮನೆಗೆ ತೆರಳಿದ್ದ ಮುದುಕಪ್ಪಗೆ ಅಲ್ಲಿ ಸಿಕ್ಕಿದ್ದ ಸತ್ಕಾರ ಅವಿಸ್ಮರಣೀಯವಂತೆ. ಅಪ್ಪುವಿನ ಹುಟ್ಟುಹಬ್ಬ(Birthday) ಆಚರಣೆಗೆ ಮುದುಕಪ್ಪ ಕಾಯಂ ಬೆಂಗೂಳೂರು ಪ್ರವಾಸಿ. ತನ್ನ ಲಗ್ನಪತ್ರಿಕೆ ನೀಡಲೆಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಅವರ ಮನೆಗೆ ತೆರಳಿದ್ದಾಗ ಆಗಷ್ಟೇ ಜಿಮ್ ಅಭ್ಯಾಸ ಮುಗಿಸಿಕೊಂಡು ಬಂದಿದ್ದ ಅಪ್ಪು, ವಿಷಯ ಕೇಳಿದ ಮೇಲೆ 10 ನಿಮಿಷ ಕೂಡಲು ಹೇಳಿದರಂತೆ. ಅಲ್ಲದೆ, ಒಳಗಿನಿಂದ ಟೀ ಕಳುಹಿಸಿದ್ದರು. 10-15 ನಿಮಿಷಗಳ ನಂತರ ಸ್ನಾನ ಮಾಡಿ ಹೊರಗೆ ಬಂದ ಅಪ್ಪು, ಒಳಗೆ ಕರೆದು ಮದುವೆಯ ಉಡುಗೊರೆ(Gift) ನೀಡಿದರು. ಅರಿಶಿನ-ಕುಂಕುಮ, ಬಳೆ, ರೇಷ್ಮೆ ಸೀರೆ-ಬಟ್ಟೆ, ಹೀಗೆ ಒಬ್ಬ ಸಾಮಾನ್ಯ ಅಭಿಮಾನಿ(Fan) ಮದುವೆ ಇದ್ದರೂ, ಸಂಪ್ರದಾಯದ(Tradition) ಪ್ರಕಾರ ನಡೆದುಕೊಂಡ ಅಪ್ಪು ನೀಡಿದ ಉಡುಗೊರೆ ಜೀವನದುದ್ದಕ್ಕೂ ಮರೆಯಲಾರೆ ಎಂದು ಮುದುಕಪ್ಪ ಅಂದಿನ ದಿನ ನೆನೆದರು. ರಾಘಣ್ಣನ ಮನೆಯಲ್ಲಿ ಮದುವೆಯಿದೆ(Marriage), ಹೀಗಾಗಿ ಯಾದಗಿರಿಗೆ(Yadgir) ಬರಲು ಆಗುವುದಿಲ್ಲ, ಮುಂದೊಂದು ದಿನ ರಾಯಚೂರು(Raichur) ಕಡೆ ಬಂದಾಗ ನಿಮ್ಮೂರಿಗೆ ಬಂದೇ ಬರುತ್ತೇನೆ ಎಂದು ಅಪ್ಪು ಹೇಳಿದ್ದರಂತೆ.

ಅಪ್ಪುವಿಗೆ ಭಗವದ್ಗೀತೆ ನೀಡಿದ್ದ ಮುದುಕಪ್ಪ: 

28 ದಿನಗಳ ಹಿಂದಷ್ಟೇ ಅಪ್ಪುವಿನ ಭೇಟಿಯಾಗಿ ಬಂದಿದ್ದ ಮುದುಕಪ್ಪ, ಅವರಿಗೊಂದು ಕಾಣಿಕೆ ಒಯ್ದಿದ್ದರಂತೆ. ಅಪ್ಪು ಓಪನ್ ಮಾಡಿ ನೋಡಿದಾಗ ಭಗವದ್ಗೀತೆ ಪುಸ್ತಕ ಅಲ್ಲಿತ್ತು. ಇದನ್ನು ಖುಷಿಯಿಂದ ಸ್ವೀಕರಿಸಿದ್ದ ಅಪ್ಪು, ಈವರೆಗೆ ನನಗೆ ಯಾರೂ ಭಗವದ್ಗೀತೆ(Bhagavad Gita) ಪುಸ್ತಕ ಕಾಣಿಕೆಯಾಗಿ ಕೊಟ್ಟಿರಲಿಲ್ಲ, ಇದನ್ನು ಖಂಡೀತವಾಗಿ ಓದುವೆ ಎಂದಿದ್ದರು ಎಂದು ಮುದುಕಪ್ಪ ಅಂದಿನ ಸನ್ನಿವೇಶ ಮೆಲುಕು ಹಾಕಿದರು. ಅಪ್ಪು ಅಪ್ಪುಗೆಯಲ್ಲಿ ಬಡವರ ಕಾಳಜಿಯಿತ್ತು, ಕಕ್ಕುಲತೆಯಿತ್ತು ಎಂದ ಮುದುಕಪ್ಪ, ಅವರ ಅಗಲಿಕೆ ಆಘಾತ ಮೂಡಿಸಿದೆ ಎನ್ನುತ್ತ ಅಂತಿಮ ದರುಶನಕ್ಕೆ ಬೆಂಗಳೂರಿನತ್ತ ಹೆಜ್ಜೆಯ ಮಾತಾಡಿದರು.

ಸಾಹಸಿ ವ್ಯಕ್ತಿತ್ವದ, ನೇರ ನುಡಿಯ ಸರಳ ಜೀವಿ : ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು

ಶೂಟಿಂಗ್‌ನ ಅರ್ಧದಲ್ಲೇ ಬ್ರೇಕ್ ಹೇಳಿದ್ದ ಕನ್ನಡದ ಕೋಟ್ಯಧಿಪತಿ

ಅಪ್ಪುವಿನ ಕಟುಮಸ್ತಾದ ದೇಹ ನೋಡಿದವರಿಗೆ, ಈ ಮನುಷ್ಯ ಭಾರಿ ಬಿರುಸು ಎಂದೆನಿಸುತ್ತಿದ್ದಾದರೂ, ಮನಸ್ಸು ಮಾತ್ರ ಮಗುವಿನಂತೆ ಶುದ್ಧ ಮುಗ್ಧ.. ಇನ್ನೊಬ್ಬರ ನೋವು ನಲಿವುಗಳಲ್ಲಿ ಭಾಗಿಯಾಗುತ್ತಿದ್ದ ದೊಡ್ಮನೆಯ ರಾಜಕುಮಾರ, ಕೆಲವರ ಕಷ್ಟ ಕಾರ್ಪಣ್ಯಗಳ ಬಗ್ಗೆ ಅರಿತು ಭಾವೋದ್ವೇಗಕ್ಕೊಳಗಾಗಿದ್ದ ಅನೇಕ ಪ್ರಸಂಗಗಳೂ ಇವೆ.

Puneeth Movie Rajkumar Change Young Man Life in Yadgir grg

ಇಂತಹುದ್ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು 2013ರಲ್ಲಿ ನಡೆದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ. ಯಾದಗಿರಿಯ ಶಿಕ್ಷಣ ಇಲಾಖೆಯಲ್ಲಿ ಸಿಆರ್‌ಪಿ (ಸಮೂಹ ಸಂಪನ್ಮೂಲ ವ್ಯಕ್ತಿ) ಎಂದು ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಗುಂಡೂರಾವ್ ಕುಲ್ಕರ್ಣಿ, ತಾವು ಭಾಗವಹಿಸಿದ್ದ ಕನ್ನಡದ ಕೋಟ್ಯಧಿಪತಿಯ ಜೊತೆಗಿನ ತಮ್ಮ ಅವಿಸ್ಮರಣೀಯ ಕ್ಷಣಗಳ ಮೆಲುಕು ಹಾಕಿದರು. ಅಪ್ಪುವಿನ ಅಕಾಲಿಕ ಅಗಲಿಕೆ ಗುಂಡೂರಾವ್ ಅವರಿಗೆ ಆಘಾತ ಮೂಡಿಸಿದೆಯೆಲ್ಲದೆ, ಸರಳ ಸಜ್ಜನ ವ್ಯಕ್ತಿಯ ಇಂತಹ ಸಾವು ಅಪಾರ ನೋವಿಗೂ ಕಾರಣವಾಗಿದೆ.

ಅದು 2013ರ ಮಾರ್ಚ್ 12ನೇಯ ತಾರೀಖು. ಕನ್ನಡದ ಕೋಟ್ಯಧಿಪತಿ(Kannadada Kotyadhipati) ಕಾರ್ಯಕ್ರಮದ ಚಿತ್ರೀಕರಣ ಚೆನ್ನೈನ(Chennai) ಎ.ಬಿ.ಎಂ. ಸ್ಟೂಡಿಯೋಸ್‌ನಲ್ಲಿ ನಡೆಯುತ್ತಿತ್ತು. ಯಾದಗಿರಿಯ ಗುಂಡೂರಾವ್ ಹಾಟ್ ಸೀಟ್ ಗಿಟ್ಟಿಸುವಲ್ಲಿ ಆಯ್ಕೆಯಾಗಿದ್ದರು.

10 ಗಂಟೆಗೆ ಚಿತ್ರೀಕರಣ(Shooting) ಆರಂಭವಾಗಲಿದೆ ಎಂದು ಕಾರ್ಯಕ್ರಮ ಆಯೋಜಕರು ಘೋಷಿಸಿದಾಗ ಬಹುದೊಡ್ಡ ನಟರಾಗಿರುವ ಪುನೀತ್ ಸರಿಯಾದ ಸಮಯಕ್ಕೆ ಬರುವರೇ ಎಂದು ಕಾಯ್ದಿದ್ದವರಿಗೆ ಅಚ್ಚರಿ ಮೂಡಿಸಿತ್ತು. 15 ನಿಮಿಷಗಳ ಮುಂಚೆಯೇ ಅಲ್ಲಿಗಾಗಮಿಸಿದ್ದ ಪುನೀತ್, ಶಾರ್ಪ್ 10 ಗಂಟೆಗೆ ಕಾರ್ಯಕ್ರಮ ನಡೆಸಿದ್ದರು.

ಅವರ ಜೊತೆ ಅನೌಪಚಾರಿಕವಾಗಿ ನಡೆದ ಮಾತುಕತೆಗಳ ಕುರಿತು ಕನ್ನಡಪ್ರಭದೊಡನೆ ಮೆಲುಕು ಹಾಕಿದ ಗುಂಡೂರಾವ್, ಅಂದಿನ ಕಾರ್ಯಕ್ರಮದಲ್ಲಿ ರೈತರೊಬ್ಬರು, ಶಿಕ್ಷಕರು, ವಿದ್ಯಾರ್ಥಿ, ಹೀಗೆಯೇ ವಿವಿಧ ವೃತ್ತಿಗಳಲ್ಲಿನ ಸ್ಪರ್ಧಿಗಳು ಬಂದಿದ್ದರು. ಮಗುವಿನಂತಹ ಅವರ ಮನದಾಳ ನಮ್ಮೆಲ್ಲರಿಗೂ ಹಿಡಿಸಿತ್ತು. ಶಿಕ್ಷಕ ವೃತ್ತಿಯ ನನಗೆ ಅಪ್ಪು ನೀಡಿದ ಗೌರವ ಸ್ಮರಣೀಯ. ಒಬ್ಬ ವಿಧೇಯಕ ವಿದ್ಯಾರ್ಥಿಯಂತೆ ನನ್ನೊಡನೆ ಅವರು ಮಾತನಾಡಿ ಎಲ್ಲ ಆಗುಹೋಗುಗಳನ್ನು ಕೇಳಿದ್ದರು ಎಂದು ಗುಂಡೂರಾವ್ ನೆನೆದರು.

ಬೆಳಗಾವಿ: ಪುನೀತ್‌ ರಾಜಕುಮಾರ್‌ ನಿಧನ, ಮನನೊಂದು ಇಬ್ಬರು ಯುವಕರ ಸಾವು

ನಾನು ಶಾಲೆಯಲ್ಲಿದ್ದಾಗ ಎರಡರ ಮಗ್ಗಿ ಅನ್ನಿಸುತ್ತಿದ್ದರು, ಈಗ್ಲೂ ಮಕ್ಕಳು ಹಾಗೆಯೇ ಕಲಿಯುತ್ತಾರೆಯೇ? ಎಂದು ಅಚ್ಚರಿಯಿಂದ ತಮ್ಮನ್ನು ಪ್ರಶ್ನಿಸಿದ ಅಪ್ಪು, ಕಲಿಕೆಯ ದಿನಗಳಲ್ಲಿನ ಕ.. ಕಾ... ಕಿ... ಕು ವರ್ಣಮಾಲೆಯ ಸ್ಮರಿಸಿದ್ದರು. ದೇಶ ವಿದೇಶಗಳಲ್ಲಿ ಖ್ಯಾತ ಒಬ್ಬ ಸೆಲೆಬ್ರೆಟಿಯಾಗಿದ್ದಾರೂ, ಅಪ್ಪುವಿನ ಸರಳತೆ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತ್ತು ಎಂದರು.

ಭಾವೋದ್ವೇಗಕ್ಕೊಳಗಾದ ಕಾರ್ಯಕ್ರಮ ಅರ್ಧಕ್ಕೆ ಬ್ರೇಕ್ ನೀಡಿದ ಅಪ್ಪು: 

ಅಂದಿನ ಕಾರ್ಯಕ್ರಮದಲ್ಲಿ ವಿಕಲಚೇತನ ಶಿಕ್ಷಕರೊಬ್ಬರ ಜೊತೆ ಅಪ್ಪು ಮಾತನಾಡುತ್ತಿದ್ದರು, ಚಿತ್ರೀಕರಣ ಅಷ್ಟೇ ಗಂಭೀರವಾಗಿ ಸಾಗುತ್ತಿತ್ತು. ಕಷ್ಟದ ದಿನಗಳು, ಅಂಗವಿಕಲತೆಯ ನಡುವೆಯೂ ಬದುಕಿನ ಅನಿವಾರ‌್ಯತೆ ಬಗ್ಗೆ ಆ ಶಿಕ್ಷಕರು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಂತೆಯೇ ಅರೆಕ್ಷಣ ಭಾವೋದ್ವೇಗಕ್ಕೊಳಗಾದಂತೆ ಕಂಡುಬಂದ ಪುನೀತ್, ಒಂದೈದು ನಿಮಿಷಗಳ ಕಾಲ ಬ್ರೇಕ್‌ ಪಡೆದರು.

ಮತ್ತೊಬ್ಬರ ಕಷ್ಟಗಳನ್ನು ಕೇಳಿದ ಅವರ ದನಿಯಲ್ಲಿ ಕನಿಕರವಿತ್ತು, ದು:ಖ ಉಮ್ಮಳಿಸಿದ ಬಂದರೂ ಅದನ್ನು ತಡೆದುಕೊಂಡು ಮೌನಕ್ಕೆ ಶರಣಾಗಿದ್ದ ಅಪ್ಪುವಿನ ಮುಗ್ಧ ಮನಸ್ಸು ಇಡೀ ಕಾರ್ಯಕ್ರಮದಲ್ಲಿರುವ ಎಲ್ಲರನ್ನ ಕಣ್ಣೀರಾಗಿಸಿತ್ತು, ಕೆಲ ನಿಮಿಷಗಳ ತರುವಾಯ ಮತ್ತೇ ರೀಶೂಟ್ ಆಯ್ತು ಎಂದು ಅಂದಿನ ಘಟನೆಯ ಸ್ಮರಿಸಿಕೊಂಡರು. ಡಾ.ರಾಜ್ ಕುಟುಂಬದ(Dr Rajkumar Family) ಈ ಅನರ್ಘ್ಯ ರತ್ನ ನಮ್ಮಿಂದ ಮರೆಯಾದದ್ದು ತುಂಬಲಾರದ ನಷ್ಟ ಎಂದ ಅವರ ಕಣ್ಣಾಲಿಗಳು ತುಂಬಿಬಂತಂತಿದ್ದವು.
 

Follow Us:
Download App:
  • android
  • ios