Asianet Suvarna News Asianet Suvarna News

ಪುಕ್ಸಟ್ಟೆ ಲೈಫ್ ಪ್ರೀಮಿಯರ್ ಶೇ: ಸಂಚಾರಿ ವಿಜಯ್‌ಗೆ ಸೀಟು ಮೀಸಲು!

'ಪುಕ್ಸಟ್ಟೆ ಲೈಫ್' ಪ್ರೀಮಿಯರ್ ಶೋನಲ್ಲಿ ಇತ್ತೀಚೆಗೆ ಕೊನೆಯುಸಿರೆಳೆದ ನಟ ಸಂಚಾರಿ ವಿಜಯ್‌ಗೆ ಸಪರೇಟ್‌ ಚೇರ್ ಮೀಸಲಿಟ್ಟಿತ್ತು ಚಿತ್ರತಂಡ. ಆತ್ಮೀಯ ಗೆಳೆಯನಿಗೆ ಭಾವುಕ ನಮನ....

Puksatte lifu team dedicates special seat for Late actor Sanchari Vijay vcs
Author
Bangalore, First Published Sep 23, 2021, 4:12 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ ಅದ್ಭುತ ನಟ ಸಂಚಾರಿ ವಿಜಯ್ (Sanchri Vijay) ನಟಿಸಿರುವ ಕೊನೆಯ ಚಿತ್ರ 'ಪುಕ್ಸಟ್ಟೆ ಲೈಫ್' ಬಿಡುಗಡೆ ಆಗುತ್ತಿದೆ. ನಿನ್ನೆ ಚಿತ್ರದ ಪ್ರೀಮಿಯರ್ ಶೋ ಮೈಸೂರಿನಲ್ಲಿ ಇತ್ತು. ಒಂದು ಕುರ್ಚಿಗೆ ಸಂಚಾರಿ ವಿಜಯ್ ಎಂದು ಹೆಸರು ಬರೆದು, ಗೆಳೆಯರು ಮೀಸಲಿಟ್ಟಿದ್ದರು.  

ಮೈಸೂರಿನಲ್ಲಿ ನಡೆದಿರುವ ಪ್ರೀಮಿಯರ್ ಶೋನಲ್ಲಿ ಸೀಟ್‌ ಮೀಸಲಿಟ್ಟಿರುವ ಫೋಟೋವನ್ನು ವಿಜಯ್ ಸ್ನೇಹಿತರು ಹಂಚಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ ನಟನಿಗೆ ಚಿತ್ರತಂಡ ಈ ರೀತಿ ಗೌರವ ಸಲ್ಲಿಸಿದೆ. ಫೋಟೋ ವೈರಲ್ ಅಗುತ್ತಿದ್ದಂತೆ ಸಿನಿ ರಸಿಕರು ಚಿತ್ರತಂಡ ಮಾಡಿರುವುದನ್ನು ನೋಡಿ ಭೇಷ್ ಎಂದಿದ್ದಾರೆ. 

Puksatte lifu team dedicates special seat for Late actor Sanchari Vijay vcs

'ಪುಕ್ಸಟ್ಟೆ ಲೈಫ್ ಪುರುಸೊತ್ತೇ ಇಲ್ಲ' (Puksatte Lifu Pursotte Illa) ಚಿತ್ರದಲ್ಲಿ ಸಂಚಾರಿ ಮುಸ್ಲಿಂ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಕೆಳ ಮಧ್ಯಮ ವರ್ಗದ ಹುಡುಗನ ಪಾತ್ರ ಇದಾಗಿದ್ದು, ಬೀಗ ರಿಪೇರಿ ಮಾಡುವ ಕೆಲಸ ಮಾಡುತ್ತಿರುತ್ತಾರೆ. ಸಂಚಾರಿ ಥಿಯೇಟರ್‌ನಲ್ಲಿರುವ ನಟರು, ತಂತ್ರಜ್ಞರು ಸೇರಿ ಮಾಡಿರುವ ಸಿನಿಮಾ ಇದು ಎಂದು ಈ ಹಿಂದೆಯೇ ಸ್ವತಃ ವಿಜಯ್ ಅವರೇ ಹೇಳಿದ್ದರು. 

ಸಂಚಾರಿ ವಿಜಯ್‌ ನಟನೆಯ ಪುಕ್ಸಟ್ಟೆಲೈಫು ಟ್ರೈಲರ್‌ ಬಿಡುಗಡೆ

ಕೆಳ ಮಧ್ಯಮ ವರ್ಗದ ಹುಡುಗ ದುಡ್ಡಿನ ಆಸೆಗಹೆ ಬಿದ್ದರೆ ಏನಾಗುತ್ತದೆ? ಯಾವೆಲ್ಲಾ ಸಮಸ್ಯೆ ಶುರುವಾಗುತ್ತದೆ, ಎಂಬುವುದು ಕತೆ. ರಂಗಾಯಣ ರಘು ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರಘು ದೀಕ್ಷಿತ್ ಸಹೋದರ ವಾಸು ದೀಕ್ಷಿತ್ ಸಂಗೀತ ನೀಡಿದ್ದಾರೆ.

Follow Us:
Download App:
  • android
  • ios