Asianet Suvarna News Asianet Suvarna News

PRK ನಿರ್ಮಾಣದ 'ಮ್ಯಾನ್ ಆಫ್ ದಿ ಮ್ಯಾಚ್' ಸೆಟ್‌ಗೆ ಅಪ್ಪು ಭೇಟಿ!

ಸತ್ಯಪ್ರಕಾಶ್ ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ನಿರ್ಮಾಣಕ್ಕೆ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಸಂಸ್ಥೆ ಸಾಥ್ ನೀಡಲಿದೆ. ಈ ಹಿಂದೆಯೇ ಸತ್ಯಪ್ರಕಾಶ್ ಅವರು ಸಿನಿಮಾ ಬಗ್ಗೆ ಪುನೀತ್ ಅವರ ಜತೆಗೆ ಚರ್ಚಿಸಿದ್ದರು. 

PRK production Man of the Match Puneeth rajkumar visits shooting set vcs
Author
Bangalore, First Published Jun 28, 2021, 1:29 PM IST
  • Facebook
  • Twitter
  • Whatsapp

ಪುನೀತ್ ಅವರಿಗೆ ಸತ್ಯ ಪ್ರಕಾಶ್ ಹೇಳಿದ ಕತೆ ಇಷ್ಟವಾಗಿ, ಈ ಚಿತ್ರದ ನಿರ್ಮಾಣಕ್ಕೆ ಸಾಥ್ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ನಿರ್ಮಾಣದಲ್ಲಿ ಹೆಗಲು ಕೊಡಲು ಮುಂದೆ ಬಂದಿದ್ದಾರೆ. ಈಗಾಗಲೇ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಕ್ಕೆ ಸದ್ದಿಲ್ಲದೆ ಶೂಟಿಂಗ್ ಮುಗಿಸಲಾಗಿದೆ. ಒಂದು ದಿನದ ಚಿತ್ರೀಕರಣ ಮಾತ್ರ ಬಾಕಿ ಇದೆ.

ಪುನೀತ್ ರಾಜ್‌ಕುಮಾರ್ 'ಫ್ಯಾಮಿಲಿ ಫ್ಯಾಕ್' ಹೇಗಿರಲಿದೆ? 

‘ಈ ಹೊತ್ತಿಗೆ ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರವೊಂದನ್ನು ನಾನು ನಿರ್ದೇಶನ ಮಾಡಬೇಕಿತ್ತು. ಕೋವಿಡ್, ಲಾಕ್‌ಡೌನ್ ನಿರ್ಬಂಧಗಳಿಂದಾಗಿ ಆ ಚಿತ್ರ ಸ್ವಲ್ಪ ತಡವಾಗುತ್ತಾ ಬಂದಿತ್ತು. ಆ ಚಿತ್ರದ ಚರ್ಚೆಯ ಸಂದರ್ಭದಲ್ಲೇ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಕತೆಯನ್ನು ಪುನೀತ್ ರಾಜ್‌ಕುಮಾರ್ ಅವರ ಬಳಿ ಹೇಳಿದೆ. ಹೊಸ ಕಲಾವಿದರಿಗಾಗಿಯೇ ತಯಾರಿಸಿದ್ದ ಆ ಕಥೆಯ ವಸ್ತು ಹಾಗೂ ಚಿತ್ರಕಥೆಯಲ್ಲಿದ್ದ ಹೊಸತನ ಇಷ್ಟವಾಗಿ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. ಹೀಗೆ ನಮ್ಮ ಹೊಸ ಪ್ರಯತ್ನಕ್ಕೆ ಪಿಆರ್‌ಕೆ ಸಂಸ್ಥೆ ಬೆನ್ನೆಲುಬಾಗಿ ನಿಂತುಕೊಂಡಿತು’ ಎನ್ನುತ್ತಾರೆ ಸತ್ಯಪ್ರಕಾಶ್.

ಪ್ರತಿ ದಿನ ಮನುಷ್ಯ ಮ್ಯಾಚ್ ಎದುರಿಸಲೇ ಬೇಕು. ಆತ ತನ್ನ ಮ್ಯಾಚ್ ಗೆಲ್ಲಬೇಕಿರುವುದು ಮೌಲ್ಯಗಳ ಮೂಲಕ. ಅಂಥ ಗೆಲವು ಯಾರಿಗೆ ಮತ್ತು ಯಾಕೆ ಎಂಬುದೇ ಚಿತ್ರದ ಕತೆ. ಪಕ್ಕಾ ಕಂಟೆಂಟ್ ಬೇಸ್ ಸಿನಿಮಾ ಇದು. -ಸತ್ಯ ಪ್ರಕಾಶ್, ನಿರ್ದೇಶಕ

ಇದೀಗ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಕ್ಕೆ ಸತ್ಯ, ಮಯೂರ ಪಿಕ್ಚರ್‌ಸ್ ಜತೆಗೆ ಪಿಆರ್‌ಕೆ ಕೂಡ ಸೇರಿಕೊಂಡಿದೆ. ಚಿತ್ರದ ಅಂತಿಮ ಹಂತದ ಚಿತ್ರೀಕರಣ ಸಮಯದಲ್ಲಿ ಪುನೀತ್ ಅವರು ಸೆಟ್‌ಗೆ ಭೇಟಿ ಕೊಟ್ಟು ಚಿತ್ರತಂಡಕ್ಕೆ ಶುಭ ಕೋರಿದ್ದರು. ನಟರಾಜ್, ಧರ್ಮಣ್ಣ ಕಡೂರ್, ವೀಣಾ ಸುಂದರ್ ಹಾಗೂ ಸುಂದರ್ ಸೇರಿದಂತೆ ರಾಮಾ ರಾಮಾ ರೇ ಕಲಾವಿದರು ಹಾಗೂ ತಂತ್ರಜ್ಞರೇ ಈ ಚಿತ್ರದಲ್ಲೂ ಇದ್ದಾರೆ.

Follow Us:
Download App:
  • android
  • ios