Asianet Suvarna News Asianet Suvarna News

ಪ್ರಜ್ವಲ್‌ ರೇವಣ್ಣ ವಿಡಿಯೋ ಕಂಡು ಹರ್ಷಿಕಾ ಪೂಣಚ್ಚ ಹೇಳಿದ್ದೇನು?

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾಗಿರುವ ಸೆಕ್ಸ್‌ ಸ್ಕ್ಯಾಂಡಲ್‌ನ ವಿಡಿಯೋ ವೀಕ್ಷಣೆ ಮಾಡಿರುವ ನಟಿ ಹರ್ಷಿಕಾ ಪೂಣಚ್ಚ, ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Prajwal revanna Sex Scandal sandalwood Actress Harshika Poonacha Angry san
Author
First Published May 4, 2024, 9:14 PM IST

ಬೆಂಗಳೂರು (ಮೇ.4): ನಟಿ ಹರ್ಷಿಕಾ ಪೂಣಚ್ಚ, ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾಗಿರುವ ಸೆಕ್ಸ್‌ ಸ್ಕ್ಯಾಂಡಲ್‌ ಬಗ್ಗೆ ಮಾತನಾಡಿದ್ದಾರೆ. ಬಹುಶಃ ಈ ವಿಚಾರದಲ್ಲಿ ಮುಕ್ತಾವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಮೊದಲ ಹೀರೋಯಿನ್‌ ಇವರಾಗಿದ್ದಾರೆ. ಹಾಸನ ಸಂಸದರ 2976 ವಿಡಿಯೋಗಳ ಪೈಕಿ ಒಂದು ದುರದೃಷ್ಟವಶಾತ್‌ ವಿಡಿಯೋವನ್ನು ನೋಡಿದೆ ಎಂದು ಹರ್ಷಿಕಾ ಪೂಣಚ್ಚ ಬರೆದುಕೊಂಡಿದ್ದಾರೆ. ಅದರೊಂದಿಗೆ ಇಂಥ ಕೆಟ್ಟ ಕೃತ್ಯಗಳನ್ನು ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಈ ಕುರಿತಾಗಿ ಅವರು ಸರಣಿ ಟ್ವೀಟ್‌ ಮಾಡಿರುವ ಅವರು ಈ ವಿಡಿಯೋಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧವೂ ಹರಿಹಾಯ್ದಿದ್ದಾರೆ. ಕನಿಷ್ಠ ಪಕ್ಷ ಅಲ್ಲಿರುವ ಮಹಿಳೆಯರ ಮುಖವನ್ನಾದರೂ ಬ್ಲರ್‌ ಮಾಡಬೇಕಿತ್ತು. ಈ ಮಹಿಳೆಯರು ಮುಂದೆ ಸಮಾಜದಲ್ಲಿ ತಮ್ಮ ಮುಖವನ್ನು ಹೇಗೆ ತೋರಿಸ್ತಾರೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಹರ್ಷಕಾ ಪೂಣಚ್ಚ ಹೇಳಿದ್ದೇನು?: ದುರದೃಷ್ಟವಶಾತ್ ಇಂದು ಪ್ರಸ್ತುತ ವೈರಲ್‌ ಆಗಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ. ಅದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ! ವೀಡಿಯೋಗಳು ಕಾನೂನುಬದ್ಧ ಮತ್ತು ನೈಜವಾಗಿದ್ದರೆ, ಅಂತಹ ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರು ಖಂಡಿತವಾಗಿಯೂ ದೇಶದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗಬೇಕು' ಎಂದು ಅವರು ತಮ್ಮ ಮೊದಲ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಈ ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರ ಕುರಿತಾಗಿ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರೆಲ್ಲರೂ ಸಭ್ಯ ಮತ್ತು ಸರಳ ಕುಟುಂಬದ ಸಾಮಾನ್ಯ ಮಹಿಳೆಯರಂತೆ ಕಾಣುತ್ತಾರೆ. ಈ ಸಂತ್ರಸ್ತರ ಮುಖಗಳನ್ನು ವಿವಿಧ ಗುಂಪುಗಳು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ರಾಜಕಾರಣಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನಿಷ್ಠ ಪಕ್ಷ ಈ ಜನರು ಅಲ್ಲಿರುವ ಮಹಿಳೆಯರ ಮುಖವನ್ನಾದರೂ ಬ್ಲರ್‌ ಮಾಡಬಹುದಿತ್ತು. ಭವಿಷ್ಯದಲ್ಲಿ ಅವರು ಸಮಾಜವನ್ನು ಹೇಗೆ ಎದುರಿಸ್ತಾರೆ. ಇನ್ನು ಮುಂದೆ ನಮ್ಮ ಜನ ಅವರನ್ನು ಯಾವ ದೃಷ್ಟಿಕೋನದಲ್ಲಿ ನೋಡಬಹುದು ಎಂದು ವಿವರಿಸಿ ಹೇಳಬೇಕಾಗಿಲ್ಲ. ಅವರ ಕುಟುಂಬ ಮತ್ತು ಮಕ್ಕಳ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ?ಅವರು ಈಗ ಅನುಭವಿಸುತ್ತಿರುವ ಮಾನಸಿಕ ಆಘಾತವನ್ನೊಮ್ಮೆ ಊಹಿಸಿ ನೋಡಿ ಎಂದು ಅವರು ಬರೆದಿದ್ದಾರೆ.

ಹಾಸನ ಕಾಮಕಾಂಡ: ಸಂಸದ ಪ್ರಜ್ವಲ್ ಅಶ್ಲೀಲ ವಿಡಿಯೋ ಹಂಚಿಕೆಯಿಂದ ರೇವಣ್ಣ ಬಂಧನದವರೆಗೆ ಕಂಪ್ಲೀಟ್ ಡಿಟೇಲ್ಸ್

ಇವುಗಳ ಬಗ್ಗೆ ನೀವು ಎಂದಾದರೂ ಯೋಚನೆ ಮಾಡಿದ್ದೀರಾ?ಈ ವೀಡಿಯೋಗಳನ್ನು ಸಾರ್ವಜನಿಕರಿಗೆ ಹರಡಲು ಕಾರಣರಾದ ವ್ಯಕ್ತಿಗಳಿಗೆ ಈ ಭಯಾನಕ ಕೃತ್ಯಗಳನ್ನು ಎಸಗಿದ ವ್ಯಕ್ತಿಗೆ ಸಮಾನವಾಗಿ ಶಿಕ್ಷೆಯಾಗಬೇಕು. ನಾನು ಯಾವಾಗಲೂ ಗೌರವ, ಸುರಕ್ಷತೆ ಮತ್ತು ಮಹಿಳೆಯರಿಗೆ ಸಮಾನತೆಗಾಗಿ ನಿಂತಿದ್ದೇನೆ ಮತ್ತು ನಾನು ಯಾವಾಗಲೂ ಇದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಇಡೀ ಪ್ರಕರಣದಿಂದ ಸಮಸ್ಯೆಗೆ ಒಳಗಾದ ಎಲ್ಲಾ ಅಮಾಯಕ ಕುಟುಂಬಗಳಿಗೆ ಶಕ್ತಿ ಮತ್ತು ಧೈರ್ಯವನ್ನು ನೀಡಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಶರಣಾಗಲು ದುಬೈನಿಂದ ಮಂಗಳೂರಿಗೆ ಪ್ರಜ್ವಲ್ ರೇವಣ್ಣ ಆಗಮನ ಸಾಧ್ಯತೆ, ಬಂಧನಕ್ಕೆ SIT ಸಿದ್ಧತೆ!

Latest Videos
Follow Us:
Download App:
  • android
  • ios