ಕನ್ನಡದ ನಾಟಕಗಳು, ಕ್ಲಾಸಿಕ್‌ ಧಾರಾವಾಹಿ, ಯಕ್ಷಗಾನ ಹೀಗೆ ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಪ್ರಗುಣಿ ಓಟಿಟಿ ತನ್ನ ವಿಶಿಷ್ಟತೆಯಿಂದಲೇ ಗುರುತಿಸಿಕೊಂಡಿದೆ.

ಹೊಸ ಓಟಿಟಿ ಪ್ಲಾಟ್‌ಫಾಮ್‌ರ್‍ 'ಪ್ರಗುಣಿ';ಆರಂಭದಲ್ಲಿಯೇ ಶಾರ್ಟ್‌ಫಿಲ್ಮ್‌ ಸ್ಪರ್ಧೆ ಆಯೋಜನೆ! 

ಪ್ರಗುಣಿ ಪ್ರಸಾರ ಆರಂಭಿಸಿದ ಆರಂಭದಲ್ಲಿಯೇ ದೊಡ್ಡಮಟ್ಟದ ಕಿರುಚಿತ್ರ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಗೆ ಬಂದ ನೂರಾರು ಕಿರುಚಿತ್ರಗಳಲ್ಲಿ ಸುಮಾರು 98 ಕಿರುಚಿತ್ರಗಳು ಆಯ್ಕೆಗೊಂಡಿದ್ದವು. ಅವುಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿಮತ್ತು ಆ ತಂಡಗಳಿಗೆ ಬಹುಮಾನ ವಿತರಣೆ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಪ್ರಗುಣಿ ಎಫ್‌ಬಿ, ಇನ್‌ಸ್ಟಾಗ್ರಾಮ್‌ ಮತ್ತು ಪ್ರಗುಣಿ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಹಿರಿಯ ನಿರ್ದೇಶಕ ಟಿಎನ್‌ ಸೀತಾರಾಮ್‌, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ, ಕನ್ನಡಪ್ರಭ ಪ್ರಧಾನ ಪುರವಣಿ ಸಂಪಾದಕ ಜೋಗಿ, ಸಂಗೀತ ನಿರ್ದೇಶಕ ವಿ.ಮನೋಹರ್‌, ಬರಹಗಾರ್ತಿ ಬಿ.ಯು. ಗೀತಾ, ಛಾಯಾಗ್ರಾಹಕ ಜಿಎಸ್‌ ಭಾಸ್ಕರ್‌ ಭಾಗವಹಿಸಲಿದ್ದಾರೆ.

ಪ್ರಗುಣಿ ಓಟಿಟಿಯಲ್ಲಿ ಈಗಾಗಲೇ ಚಂದ್ರಶೇಖರ ಕಂಬಾರರ ‘ಬೆಪ್ಪುತಕ್ಕಡಿ ಬೋಳೇಶಂಕರ’ ನಾಟಕ, ರವಿ ರೈ ಮತ್ತು ಗುರುಪ್ರಸಾದ್‌ ಮುದ್ರಾಡಿ ನಿರ್ಮಿಸಿರುವ, ಪಟ್ಲಶ್‌ ಶೆಟ್ಟಿಭಾಗವತಿಕೆಯ ಮಹಾಕಲಿ ಮಗಧೇಂದ್ರ ಯಕ್ಷಗಾನ, ಕತೆಗಾರ ಧಾರಾವಾಹಿ, ಶಾರ್ಟ್‌ಫಿಲ್ಮ್‌ಗಳು ಪ್ರಸಾರ ಕಾಣುತ್ತಿವೆ.