ಗಾಯಕಿ ಮಂಗ್ಲಿ ಈಗ ನಾಯಕಿ; ನಿರ್ದೇಶಕ ನಾಗಶೇಖರ್ ಜೊತೆ ನಟನೆ
ಖ್ಯಾತ ಗಾಯಕಿ ಮಂಗ್ಲಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಾಗಶೇಖರ್ ಜೊತೆ ನಟಿಸುತ್ತಿದ್ದಾರೆ.

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ಗಾಯಕಿ ಮಂಗ್ಲಿ ಇದೀಗ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ. ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಮಂಗ್ಲಿ ಇದೀಗ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ವಿಶೇಷ ಎಂದರೆ ಮಂಗ್ಲಿ ಕನ್ನಡದ ಸಿನಿಮಾ ಮೂಲಕ ಬೆಳ್ಳಿಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಪಾದರಾಯ ಸಿನಿಮಾಗೆ ನಾಯಕರಿಯಾಗಿ ಆಯ್ಕೆಯಾಗುವ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಂಗ್ಲಿ ಚೊಚ್ಚಲ ಸಿನಿಮಾಗೆ ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ನಿರ್ದೇಶನ ಮಾಡುತ್ತಿದ್ದಾರೆ.
ಮಂಗ್ಲಿ ಕನ್ನಡದಲ್ಲೂ ಅನೇಕ ಹಾಡುಗಳಿಗೂ ಕಂಠದಾನ ಮಾಡಿದ್ದಾರೆ. ಇತ್ತೀಚಿಗಷ್ಟೆ ರಿಲೀಸ್ ಆಗಿ ಸದ್ದು ಮಾಡುತ್ತಿರುವ ಗಿಲ್ಲಕ್ಕೋ ಹಾಡಿಗೆ ಮಂಗ್ಲಿ ಧ್ವನಿ ನೀಡಿದ್ದಾರೆ. ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾದ ಹಾಡು ಇದಾಗಿದ್ದು ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ತ್ರಿಬಲ್ ರೈಡಿಂಗ್, ವಿಕ್ರಾಂತ್ ರೋಣ, ದಿಪ್ ಪಸಂದ್ ಸೇರಿದಂತೆ ಅನೇಕ ಸಿನಿಮಾಗಳ ಹಾಡಿಗೆ ದನಿಯಾಗಿದ್ದಾರೆ. ಮಂಗ್ಲಿ ಹಾಡಿದ ಬಹುತೇಕ ಹಾಡುಗಳು ಸೂಪರ್ ಹಿಟ್ ಆಗಿರುವುದು ವಿಶೇಷ. ಮಂಗ್ಲಿಗೆ ನಾಯಕಿಯಾಗಿ ನಿರ್ದೇಶಕ ನಾಗಶೇಖರ್ ಕಾಣಿಸಿಕೊಳ್ಳುತ್ತಿದ್ದಾರೆ.
ಮಂಗ್ಲಿ ವಾಯ್ಸ್‌ನಲ್ಲಿ ಶಿವಣ್ಣನ ಖದರ್: ವೇದ ಚಿತ್ರದ ಮಾಸ್ ಹಾಡು ರಿಲೀಸ್
ಪಾದರಾಯ ನೈಜ ಘಟನೆ ಆಧರಿಸಿದ ಸಿನಿಮಾವಾಗದೆ. 2013-14ರಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ತೆರೆಮೇಲೆ ತರ್ತಿದ್ದಾರೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ. ಈ ಘಟನೆಯು ಆರು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದ್ದು, ಅದನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ ಚಂದ್ರಚೂಡ. ಅಂದಹಾಗೆ ಈ ಚಿತ್ರಕ್ಕೆ ಪಾದರಾಯ ಎಂದು ಹೆಸರಿಡುವುದಕ್ಕೂ ಕಾರಣವಿದೆಯಂತೆ. ಅದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುತ್ತಾರೆ ನಿರ್ದೇಶಕರು.
ಬೀದರ್ ಉತ್ಸವಕ್ಕೆ ಗಾಯಕ ವಿಜಯಪ್ರಕಾಶ, ಸಂಜಿತ ಹೆಗಡೆ, ಮಂಗ್ಲಿ, ಕುಮಾರ ಸಾನು
ಈಗಾಗಲೇ ಪಾತ್ರಕ್ಕಾಗಿ ನಾಗಶೇಖರ್ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರು ಹಲವು ದಿನಗಳಿಂದ ಅಂಜನಾದ್ರಿ ಬೆಟ್ಟದಲ್ಲಿ ಬೀಡುಬಿಟ್ಟಿದ್ದಾರಂತೆ. ಈ ಬೆಟ್ಟದಲ್ಲಿ ನಡೆಯುವ ಪೂಜ ಪುನಸ್ಕಾರಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ, ಹನುಮನ ಮಾಲೆಯನ್ನೂ ಧರಿಸಿ, ಅಲ್ಲಿನ ಆಚಾರ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾರಂತೆ. ನಾಗಶೇಖರ್ ನಿರ್ದೇಶನದ ಜೊತೆಗೆ ನಟನೆಯಲ್ಲೂ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ನಾಗಶೇಖರ್ ಪರಭಾಷೆಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಕನ್ನಡದಲ್ಲಿ ಮೊದಲ ಬಾರಿಗೆ ನಾಗಶೇಖರ್ ಕಾಣಿಸಿಕೊಳ್ಳುತ್ತಿದ್ದಾರೆ. ಗಾಯಕಿ ಮಂಗ್ಲಿ ಮತ್ತು ನಾಗಶೇಖರ್ ಇಬ್ಬರನ್ನೂ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.