ನಿರ್ಮಾಪಕ ಶ್ರೀ ಮುನಿರತ್ನ ಅವರಿಗೆ ಹುಟ್ಟುಹಬ್ಬಕ್ಕೆ ಹಾರೈಸಿದ ನಟ ನಿಖಿಲ್ ಕುಮಾರಸ್ವಾಮಿ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ, ಇದಕ್ಕೆ ಉತ್ತರಿಸಿದ ನಿಖಿಲ್ ಇದು ರಾಜಕೀಯದ ಸತ್ಸಂಪ್ರದಾಯ ಎಂದು ಹೇಳಿದ್ದಾರೆ.

 ಮುನಿರತ್ನ ಬರ್ತ್‌ಡೇ‌ಗೆ ನಿಖಿಲ್ ಶುಭಕೋರಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರ ಆಕ್ಷೇಪಸಿದ್ದಾಗಿ ನಿಖಿಲ್ ಸ್ವತಃ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ನಡೆಯನ್ನು ಆಕ್ಷೇಪಿಸಿದವರಿಗೆ ಉತ್ತರವನ್ನೂ ಕೊಟ್ಟಿದ್ದಾರೆ.

ಸೋನುಗೆ ಸೂದ್ ಸರಿಸಾಟಿ, ಸಂಕಷ್ಟದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಆಪದ್ಬಾಂಧವ

ರಾಜಕೀಯ ಬೇರೆ, ವೈಯುಕ್ತಿಕ ವಿಚಾರ ಬೇರೆ ಎಂದು ಸ್ಪಷ್ಟನೆ ನೀಡಿದ ನಿಖಿಲ್ ಕುಮಾರಸ್ವಾಮಿ ನಿರ್ಮಾಪಕನಿಗೆ ನಟನಾಗಿ ನಾನು ಶುಭಕೋರಿದ್ದೇನೆ, ಜನತಾದಳದ ನಾಯಕನಾಗಿ ಅಲ್ಲ. ಕುಮಾರಸ್ವಾಮಿಗೆ ಮುನಿರತ್ನ ಮಾಡಿರುವ ದ್ರೋಹಕ್ಕೆ ಕಣದಲ್ಲೇ ಉತ್ತರಿಸೋಣ ಎಂದಿದ್ದಾರೆ.

ಮುನಿರತ್ನ ಅವರ ಹುಟ್ಟಹಬ್ಬಕ್ಕೆ ಶುಭ ಕೋರಿದ್ದಕ್ಕೆ ಹಲವರು ಆಕ್ಷೇಪಿಸಿರುವುದು ನನ್ನ ಗಮನಕ್ಕೆ ಬಂತು. 'ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ...

Posted by Nikhil Gowda on Friday, July 24, 2020

ರಾಜಕೀಯ ಸಂಘರ್ಷ‌ ಮೀರಿ ಮೋದಿಗೆ ದೇವೇಗೌಡರು, ದೇವೇಗೌಡರಿಗೆ ಮೋದಿ ಶುಭ ಕೋರುತ್ತಾರೆ. ಹಾಗೇ ಬಿಎಸ್‌ವೈಗೆ ಹೆಚ್‌ಡಿಕೆ, ಹೆಚ್‌ಡಿಕೆಗೆ ಬಿಎಸ್‌ವೈ ಶುಭಕೋರುತ್ತಾರೆ.. ಇದು ಕರ್ನಾಟಕ ರಾಜಕೀಯದ ಸತ್ಸಂಪ್ರದಾಯ ಎಂದು ಬಣ್ಣಿಸಿದ್ದಾರೆ.